January 29, 2026
IMG-20260121-WA0174.jpg

ಚಳ್ಳಕೆರೆ: ಸಮಸ್ತ ಮನುಕುಲಕ್ಕೆ ಮೌಢ್ಯತೆಯನ್ನು ತೊರೆದು ಸಮಾಜದ ತಾರತಮ್ಯ ನೀತಿಗಳ ವಿರುದ್ಧ ಹೋರಾಡಿ ತಮ್ಮ ಸೈಧ್ಯಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ನಿಜಶರಣ ಅಂಬಿಗರ ಚೌಡಯ್ಯ ಅವರು ಒಬ್ಬ ದಾರ್ಶನಿಕ ವಚನಕಾರರು ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ಗಂಗಾ ಮತಸ್ಥರ ಸಂಘದ ವತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು

ನಿಜಶರಣ ಕಾಯಕಯೋಗಿ ವಚನ ಸಂಕಲನಗಾರ 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣ ಅಕ್ಕಮಹಾದೇವಿ ಹಾಗೂ ಇನ್ನೂ ಹಲವಾರು ಮಾನವತಾವಾದಿಗಳ ಜೊತೆ ಬೆರೆತು ತಮ್ಮ ದಾರ್ಶನಿಕ ಆಧ್ಯಾತ್ಮಿಕ ಶಿಕ್ಷಣವನ್ನು ಮುಗಿಸಿ ಸರಿಸುಮಾರು 380 ವಚನ ಸಾಹಿತ್ಯಗಳನ್ನು ಬರೆದು ಸಮಾಜದ ಅಸ್ಪೃಶ್ಯತೆ ಹಾಗೂ ಮೌಢ್ಯತೆಗಳಂತಹ ನೇಮಾವಳಿಗಳನ್ನು ಕಿತ್ತುಹಾಕಿ ಸಮಾಜದ ಜಾತಿಯ ವ್ಯವಸ್ಥೆ ಧಾರ್ಮಿಕ ಸುಧಾರಣೆ ಶೋಷಿತ ವರ್ಗದವರಿಗೆ ಧ್ವನಿಯಾಗಿ ತಮ್ಮ ಆಧ್ಯಾತ್ಮದ ಹಾದಿಯಲ್ಲಿ ಎಲ್ಲ ಸಮುದಾಯವನ್ನು ಏಕೀಕರಣಗೊಳಿಸಿ ಕರೆತಂದ ಕೀರ್ತಿ ನಿಜಶರಣ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಇಂದಿನ ದಿನಮಾನಗಳಲ್ಲಿ ಅವರು ರಚಿಸಿರುವ ಪ್ರವಚನಗಳಂತಹ ಪುಸ್ತಕಗಳನ್ನು ಓದಿ ಅವರ ಮಾರ್ಗದರ್ಶನದಂತೆ ನಾವು ನೀವೆಲ್ಲ ನಡೆಯಬೇಕು ಅಂಬಿಗ ಸಮುದಾಯವು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಲು ಅವಕಾಶ ಮಾಡಿಕೊಡಬೇಕು ತಾಲೂಕಿನ ಅಂಬಿಗ ಸಮುದಾಯಕ್ಕೆ ಸಮುದಾಯ ಭವನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ಜಗರೆಡ್ಡಿ ಅವರಿಗೆ ಈ ತಿಂಗಳ 31 ಒಳಗೆ ಸಿಎ ನಿವೇಶನವನ್ನು ಸಮುದಾಯಕ್ಕೆ ನಿಗದಿಪಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ವೇಳೆ ಉಪನ್ಯಾಸಕ ಶಿವಾನಂದ ಮಾತನಾಡಿ ಜಾತಿ ಧರ್ಮವನ್ನು ಒಂದುಗೂಡಿಸಿ ಎಲ್ಲಾ ಸಮುದಾಯಗಳಿಗೆ ಸಮಾನ ಧರ್ಮದ ಪ್ರವಚನ ಹಾಗೂ ವಚನ ಸಾಹಿತ್ಯದ ಮೂಲಕ ಮಹಾಶರಣ ಧರ್ಮ ಸುಧಾರಕ ಬಸವಣ್ಣನವರ ಆದರ್ಶವನ್ನು ತಿಳಿದು ಎಲ್ಲಾ ಸಮುದಾಯಗಳಿಗೆ ಸಮಾನ ಧರ್ಮದ ನೀತಿಗಳನ್ನು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ತಾಲೂಕು ಪಂಚಾಯತಿ ಇಓ ಶಶಿಧರ್ ಸಮಾಜಕ್ಕೆ ಕೊಡುಗೆ ನೀಡಿರುವ ದಾರ್ಶನಿಕರ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸಲು ಸರ್ಕಾರ ಜಯಂತಿಗಳ ಆಚರಣೆಯನ್ನು ಕೈಗೊಂಡಿದೆ 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯನವರು ಅಸ್ಪೃಶ್ಯತೆ ಅಸಮಾನತೆ ವಿರುದ್ಧ ಹೋರಾಡಿದ್ದರು ಇಂದಿಗೂ ಸಹ ಕುಲ ಕಸುಬುಗಳ ಆಧಾರದ ಮೇಲೆ ಜಾತಿಗಳನ್ನು ಗುರುತಿಸಲಾಗುತ್ತದೆ ಇಂದು ಎಲ್ಲಾ ಜಾತಿಗಳು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದು ಕುಲ ಕಸುಬುಗಳಿಂದ ಹೊರ ಬಂದರು ಸಹ ಜಾತಿ ವ್ಯವಸ್ಥೆಯಿಂದ ಹೊರಬರಲು ಸಾಧ್ಯವಾಗಿಲ್ಲ ಚೌಡಯ್ಯನವರು ತಮ್ಮ ನೇರ ನಿಷ್ಠೂರತೆಯ ವಚನಗಳಿಂದ ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರೆಹಾನ್ ಪಾಷ ಪೌರಾಯುಕ್ತ ಜಗರೆಡ್ಡಿ ಸಮಾಜದ ಅಧ್ಯಕ್ಷ ಶಿವಾನಂದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾರುತಿರಾವ್ ನಾಗರಾಜಪ್ಪ ಮಾಜಿ ಸದಸ್ಯರಾದ ಅನ್ವರ್ ಮಾಸ್ಟರ್ ಮಲ್ಲಿಕಾರ್ಜುನ ಸಿ.ಟಿ ಶ್ರೀನಿವಾಸ್ ಸಮಾಜದ ಮುಖಂಡ ತಿಪ್ಪೇರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading