ತುಮಕೂರು:
ಕರ್ನಾಟಕ ರಾಜ್ಯ ಕ್ರೀಡಾಕೂಟ 2025–26ರ ಅಂಗವಾಗಿ ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 16-01-2026ರಿಂದ 22-01-2026ರವರೆಗೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಟೇಕ್ವಾಂಡೋ ತರಬೇತಿ ಕೇಂದ್ರದ ಕ್ರೀಡಾಪಟು ವಿಷ್ಣುತೇಜ್ ಅವರು 87 ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇದೇ ಸ್ಪರ್ಧೆಯಲ್ಲಿ ಚಳ್ಳಕೆರೆ ಟೇಕ್ವಾಂಡೋ ತರಬೇತಿ ಕೇಂದ್ರದ ಕ್ರೀಡಾಪಟುಗಳಾದ ಸಮಂತ್, ಉದಯ್, ಭಗವಾನ್ ಅಶೋಕ ಹಾಗೂ ಪೂಜಿತಾ ಅವರುಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನಸೆಳೆದರು.
ಈ ಸಾಧನೆಯ ಹಿಂದೆ ತರಬೇತುದಾರರಾದ ವಿಶ್ವಕರ್ಮ (ಸ್ವಾಮಿ), ಮಂಜುನಾಥ್ ಟಿ. ಮತ್ತು ಬೋಸಯ್ಯ ಅವರ ಮಾರ್ಗದರ್ಶನ ಹಾಗೂ ಶ್ರಮ ಪ್ರಮುಖವಾಗಿದ್ದು, ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
ಚಳ್ಳಕೆರೆ ಟೇಕ್ವಾಂಡೋ ತರಬೇತಿ ಕೇಂದ್ರವು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಾವಂತ ಕ್ರೀಡಾಪಟುಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.