March 16, 2026
IMG-20250121-WA0177.jpg

 

ಚಳ್ಳಕೆರೆ: ತಾಲೂಕಿನ ಮೀರಸಾಬಿ ಹಳ್ಳಿ ಗ್ರಾಮದಲ್ಲಿ ರಾಜಮಾತೆ ನಂಜಮಣಿ ಜ್ಞಾಪಕಾರ್ಥಕವಾಗಿ ರಾಣಿಕೆರೆಯನ್ನು ಹಿಂದಿನ ಮೈಸೂರು ರಾಜರು ನಿರ್ಮಿಸಿದ್ದರು ಬಯಲು ಸೀಮೆಯ ಗ್ರಾಮೀಣ ಭಾಗದ ಜನರಿಗೆ ಈಕೆರೆ ವರದಾನವಾಗಿದ್ದು ಇಂದು ಮೈಸೂರು ರಾಜ ಮನೆತನದ ರಾಜ ಹಾಗೂ ಮೈಸೂರಿನ ಸಂಸದ ಯದುವೀರ್ ಒಡೆಯರ್ ಕೆರೆಗೆ ಬಾಗಿನ ಅರ್ಪಿಸಿದರು. 

ಮಂಗಳವಾರ ಮಧ್ಯಾಹ್ನ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಅವರು ಬಿಜೆಪಿ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ನಂತರ ರಾಣಿಕೆರೆಗೆ ಭೇಟಿಕೊಟ್ಟು ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆ ಹಾಗೂ ಮೈಸೂರು ಸಂಸ್ಥಾನಕ್ಕೆ ಅತ್ಯುತ್ತಮ ಬಾಂಧವ್ಯವಿದೆ ಮೈಸೂರು ರಾಜರು ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರಕ್ಕೆ ಅಣೆಕಟ್ಟನ್ನು ನಿರ್ಮಿಸಿದ್ದರು ಅಲ್ಲದೆ ಚಳ್ಳಕೆರೆ ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ರಾಣಿಕೆರೆ ನಿರ್ಮಿಸಿ ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಈ ಕೆರೆಯು ಶತಮಾನದ ಹಿಂದಿನ ಕೆರೆಯಾಗಿದ್ದು ಈ ಭಾಗದ ರೈತರಿಗೆ ಜೀವನಾಡಿಯಾಗಿದೆ ಮೈಸೂರು ರಾಜ ಮನೆತನದ ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಬಂಧ ಸದಾ ಹೀಗೆ ಆತ್ಮೀಯತೆಯಿಂದ ಮುಂದುವರಿಯಲಿ ಎಂದು ಆಶಿಸಿದರು ಮುಂದುವರೆದು ಮಾತನಾಡಿದ ಅವರು ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಆಡಳಿತ ಅತ್ಯುತ್ತಮವಾಗಿದ್ದು ಭಾರತ ದೇಶ 2047ರ ವೇಳೆಗೆ ಮುಂದುವರೆದ ದೇಶಗಳ ಸಾಲಿನಲ್ಲಿ ನಿಲ್ಲುವಲ್ಲಿ ಸಂಶಯವಿಲ್ಲ ಪ್ರಧಾನಿ ಮೋದಿ ಅವರ ಆಡಳಿತದಿಂದಾಗಿ ಭಾರತ ಇಂದು ಐದು ಟ್ರಿಲಿಯನ್ ಆರ್ಥಿಕತೆಯ ಗುರಿ ಸಾಧಿಸಿದೆ ಎಂದು ತಿಳಿಸಿದರು. 

ಬಿಜೆಪಿಯ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ ವೀರಸಾಬಿಹಳ್ಳಿ ಗ್ರಾಮದ ರಾಣಿಕೆರೆಯನ್ನು ಮೈಸೂರಿನ ಅರಸರು ನಿರ್ಮಾಣ ಮಾಡಿದ್ದರಿಂದ ಇಲ್ಲಿನ ಜನರಿಗೆ ಅನುಕೂಲವಾಗಿದೆ ಸುತ್ತಮುತ್ತಲ ಸುಮಾರು 60 ಕ್ಕಿಂತ ಹೆಚ್ಚು ಹಳ್ಳಿಗಳಿಗೆ ಈ ಕೆರೆಯು ವರದಾನವಾಗಿದ್ದು ಉತ್ತಮ ಮಳೆಯಾದರೆ ಈ ಕರೆಯು ಮೈದುಂಬಿ ಹರಿದು ತಾಲೂಕಿನ ಜನರಿಗೆ ಕುಡಿಯುವ ನೀರು ಸೇರಿದಂತೆ ಬೆಳೆಗಳಿಗೆ ನೀರು ಒದಗಿಸುತ್ತದೆ ಇದನ್ನು ನಿರ್ಮಿಸಿದ ಮೈಸೂರು ರಾಜರಿಗೆ ತಾಲೂಕಿನ ಜನತೆ ಸದಾ ಚಿರಋಣಿಯಾಗಿರುತ್ತದೆ ಎಂದು ಸ್ಮರಿಸಿದರು. 

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ ಕೆಟಿ ಕುಮಾರಸ್ವಾಮಿ ಬಾಳೆಕಾಯಿ ರಾಮದಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ನಾಗರಾಜ್ ಪಿಡಿಒ ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading