January 30, 2026
IMG-20250121-WA0155.jpg

ಚಳ್ಳಕೆರೆ ಜ.21

ಮದ್ಯಕರ್ನಾಟಕದ ಪ್ರಸಿದ್ದ ಮಧ್ಯಾಹ್ನದ ಮಾರಮ್ಮ ದೇವಿ ನೆಲೆಸಿರುವ ಗ್ರಾಮಕ್ಕೆ ಬೇಕಿದೆ ಮೂಲಭೂತ ಸೌಲಭ್ಯ..
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಮದ ಭಕ್ತಾಧಿಗಳ ಆರಾಧ್ಯ ದೇವತೆ ಮಾರಮ್ಮ ದೇವಿಯ ಸುಕ್ಷೇತ್ರಕ್ಕೆ ಸುಮಾರು 500 ವರ್ಷಗಳ ಇತಿಹಾಸ ಹೊಂದಿದೆ.

ಈ ದೇಗುಲವು ಮುಜರಾಯಿ ಇಲಾಖೆಗೆ ಸೇರಿದ್ದು ಭಕ್ತಾದಿಗಳಂದ ಪ್ರತಿ ವರ್ಷ ಸುಮಾರು 25 ರಿಂದ 30 ಲಕ್ಷ ರೂ. ಆದಾಯ ಸಂಗ್ರಹವಾಗಲಿದ್ದು ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ಭಕ್ತರಿಂದ ಸಂಗ್ರಹವಾದ ಹಣ ಭದ್ರವಾಗಿದ್ದೆ.
ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಹೋಗುವ ಭಕ್ತರು ರಸ್ತೆಯಲ್ಲಿನ‌ಕೊಳಚೆ ನೀರಿನಲ್ಲೆ ಹೋಗುವುದು ಅನಿವಾರ್ಯವಾಗಿದೆ.
ದೇವಸ್ಥಾನಕ್ಕೆ ಹೋಗುವ ದಾರಿ ಕಿರಿದಾಗಿದ್ದು ಜಾತ್ರೆ ಸಂದರ್ಭದಲ್ಲಿ ಹರಸಹಾಸ ಪಡುವಂತಾಗಿದ್ದು ರಸ್ತೆ ಕಿರಿದಾಗಿದ್ದು ಚರಂಡಿಗಳ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕೊಳಚೆ ನೀರಿನ‌ಮೇಲೆ ನಡೆದುಕೊಂಡು ಹೋಗಿ ದೇವಿಯ ದರ್ಶನಮಾಡುವುದು ಅನಿರ್ವಾಯವಾಗಿದೆ.
ರಸ್ತೆ ಅಗಲೀಕರಣ ವಿಳಂಭ.

ಚರಂಡಿಗಳಿಲ್ಲದೆ ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರು
ಶ್ರೀಮಾರಮ್ಮ ದೇವಸ್ಥಾನಕ್ಜೆ ಹೋಗುವ ರಸ್ತೆ ಸಗಲೀಕರಣಕ್ಕೆ ಮನೆಗಳಿಗೆ ಮಾರ್ಕಿಂಗ್ ಮಾಡುತ್ತಿರುವ ಅಧಿಕಾರಿಗಳು


ಈಗಾಲೆ ರಸ್ತೆ ಅಗಲೀಕರಣ ಮಾಡಲು ರಸ್ತೆಗೆ ಹೊಂದಿಕೊಂಡ ಮನೆಗಳಿಗೆ ಮಾರ್ಕಿಂಗ್ ಮಾಡಿದ್ದು ಮನೆಗಳ ತೆರವಿಗೆ ಮುಂದಾಗಿಲ್ಲ.
ಜಾತ್ರೆ ನಡೆಯುವ ಸ್ಥಳದಲ್ಲಿ ಮೂಲಭೂತ ಸೌಲಭ್ಯ ವಂಚಿತ.

ಶ್ರಾವಣ ಮಾಸದ ಮೊದಲನೇ ವಾರದಲ್ಲಿ ದೇವಿ ಜಾತ್ರೆ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ಆರಾಧನೆಗೆ ಆಗಮಿಸಲಿದ್ದಾರೆ. ದೇವಸ್ಥಾನದಲ್ಲಿ ಸೌಕರ್ಯ ಇಲ್ಲದೆ ಇರುವುದು, ಭಕ್ತರ ಚಿಂತೆಗೆ ಕಾರಣವಾಗಿದೆ.

ದತ್ತಿ ಇಲಾಖೆ ವ್ಯಾಪ್ತಿಗೆ ದೇಗುಲ ಸೇರಿದ್ದರೂ ಶುದ್ಧ ಕುಡಿಯುವ ನೀರಿಲ್ಲ. ಶೌಚಗೃಹಗಳಿಲ್ಲ. ದೇಗುಲಕ್ಕೆ ಆಗಮಿಸುವ ಭಕ್ತರು ಬಯಲಿಗೆ ಬಹಿರ್ದೆಸೆಗೆ ತೆರಳಿ ಸುತ್ತ-ಮುತ್ತಲ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ.

ಪ್ರತಿ ಮಂಗಳವಾರ, ಶುಕ್ರವಾರ 3 ಸಾವಿರ ಭಕ್ತರು ದೇಗುಲಕ್ಕೆ ಬಂದು ವಿಶೇಷ ಪೂಜೆ ಕೈಗೊಳ್ಳುತ್ತಾರೆ. ವಸತಿ ವ್ಯವಸ್ಥೆಯಿಲ್ಲದೆ ಭಕ್ತರು ರಸ್ತೆಯಲ್ಲಿಯೇ ಬಿಡಾರ ಹೂಡುತ್ತಿದ್ದಾರೆ.

ಯಾತ್ರನಿವಸದ ಕಟ್ಟಡವಿಲ್ಲ .ಬಸ್ ತಂಗುದಾಣಗಳಿಲ್ಲ. ಭಕ್ತರಿಗೆ ಆರೋಗ್ಯ ಸಮಸ್ಯೆಯ ನಿವಾರಣೆಗೆ ಪ್ರಥಮ ಚಿಕಿತ್ಸಾ ಘಟಕ ಇಲ್ಲದಿರುವುದರಿಂದ 15 ಕಿ.ಮೀ. ದೂರದ ಬೇಡರೆಡ್ಡಿಹಳ್ಳಿ ಅಥವಾ 40 ಕಿ.ಮೀ. ದೂರವಿರುವ ಚಳ್ಳಕೆರೆಗೆ ಹೋಗಬೇಕಿದೆ.

ಕಳ್ಳರ ಹಾವಳಿ: ದೇವಸ್ಥಾನದ ಸುತ್ತ-ಮುತ್ತ ಕಳ್ಳರ ಹಾವಳಿ ಹೆಚ್ಚಾಗಿದೆ. ಮೊಬೈಲ್, ಪರ್ಸ್ ಇತರ ವಸ್ತುಗಳನ್ನು ಭಕ್ತರಿಂದ ಕಳ್ಳರು ಕದಿಯುತ್ತಿದ್ದಾರೆ.

ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಪೊಲೀಸ್ ಉಪಠಾಣೆ ಸ್ಥಾಪನೆ ಅನಿವಾರ್ಯವಾಗಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕಿದೆ.

ಈ ಸಂಬಂಧ ಗ್ರಾಮಸ್ಥರು, ಭಕ್ತರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ.
ಎಂಬುದು ಗ್ರಾಮಪಂಚಾಯಿತಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಅಳಲು.
ಈಗಲಾಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗೌರಸಮುದ್ರ ಮಾರಮ್ಮ ನೆಲಸಿರುವ ಪುಣ್ಯಕ್ಷೇತ್ರಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading