January 29, 2026
IMG-20251220-WA0183.jpg

ಚಿತ್ರದುರ್ಗ ಡಿ. 20:
ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಜನ ಸೇವೆಯನ್ನೆ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಅಕ್ರಮ ಗಣಿಗಾರಿಕೆ, ಭೂಕಬಳಿಕೆ, ಒತ್ತುವರಿ ಯಾವುದೇ ಕೆಲಸ ನಾನು ಮಾಡಿಲ್ಲ ಇದರಲ್ಲಿ ಯಾವುದಾದರೊಂದು ಮಾಡಿರುವುದಾಗಿ ಯಾರಾದರೂ ಒಬ್ಬರು ಸಾಕ್ಷಿಯನ್ನು ಹೇಳಿದರೆ, ಅಥವ ಮಾಜಿ ಸಚಿವರು ಇದನನ್ನು ಸಾಬೀತುಪಡಿಸಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ಸವಾಲ್ ಹಾಕಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾಡಿ, ರಾಜಕೀಯದಲ್ಲಿ ನನ್ನ ತೇಜೋವಧೆ ಮಾಡುವುದಕ್ಕಾಗಿ ಕೆಲವರು ನನ್ನ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.ಆರೋಪಕ್ಕು ಅದು ಸರಿಯಿದೆಯೇ ಎಂದು ಪರೀಶಿಲನೆ ಮಾಡಬೇಕೆಂದು ಮಾಜಿ ಸಚಿವ ಅಂಜನೇಯನ ಮೇಲೆ ಹರಿಹಾಯ್ದರು.
ಹೊಳಲ್ಕೆರೆಯಲ್ಲಿ ನನ್ನ ಮಗನ ಹೆಸರಿನಲ್ಲಿ ದಲಿತರ ಭೂಮಿ ಖರೀದಿಸಲಾಗಿದೆ ಎಂದು ಆರೋಪವನ್ನು ಹೊರಿಸಲಾಗಿದೆ. ಆದರೆ ನಾನು ಜಮೀನನ್ನು ಖರೀದಿ ಮಾಡಿದ್ದು, ಆ ಜಮೀನಿನನ್ನು 1910ರಲ್ಲಿ ಉಳಿಮೆ ಮಾಡಿ ಸುಮಾರು ನಾಲ್ಕು ಜನರ ಕೈಬದಲಾಗಿ ಈಗ ನನ್ನ ಮಗನ ಹೆಸರಿಗೆ ಖರೀದಿಸಲಾಗಿದೆ. ಮಾಜಿ ಸಚಿವರು ಹೇಳಿದಂತೆ ದಲಿತರ ಭೂಮಿಯನ್ನು ಕಬಳಿಸಿಲ್ಲ, ಇದಕ್ಕೆ ಬೇಕಾದ ದಾಖಲೆಗಳು ನನ್ನ ಬಳಿ ಇವೆ. ಅವುಗಳನ್ನು ಪರೀಶೀಲಿಸಬಹುದು.ನನ್ನ ಬಳಿ 500 ಎಕರೆ ಭೂಮಿ ಇದೆ ಅದರಲ್ಲಿ ಅಡಿಕೆ, ತೆಂಗು ಸೇರಿದಂತೆ ಇತರೆ ಬೆಳೆಗಳನ್ನು ಹಾಕಲಾಗಿದೆ. ನನಗೆ ಬೇರೆಯವರ ಭೂಮಿ ಕಬಳಿಸುವ ಕೀಳು ಮಟ್ಟಕ್ಕೆ ಹೋಗುವುದಿಲ್ಲ ಎಂದು ಕಿಡಿ ಕಾರಿದರು.
ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಹೀರೇಕಂದವಾಡಿ ಗ್ರಾಮದ ರಿ.ಸ.ನಂ 91/5ರಲ್ಲಿ 4.04 ಖರಾಬು 0.06 ಗುಂಟೆ ಒಟ್ಟು ವಿಸ್ತಿರ್ಣ 3-38 ಗಂಟೆಯನ್ನು ಲಿಂಗಾಯಿತ, ಭೋವಿ ಈಡಿಗ ಸಮುದಾಯದವರಿಂದ ಹಾಗೂ ಇದೇ ಗ್ರಾಮದ ರಿ.ಸ.ನಂ.91/1ಬಿ2 ಒಟ್ಟು8-00 ಎಕರೆ ಖರಾಬು 0.12 ಗುಂಟೆ ಒಟ್ಟು ವಿಸ್ತೀರ್ಣ 7-28 ಗುಂಟೆ ಭೂಮಿಯನ್ನು ಲಿಂಗಾಯಿತ, ಈಡಿಗ ಸಮುದಾಯದಿಂದ ಸರ್ಕಾರದ ದಾಖಲೆಯಂತೆ ಖರೀದಿಸಿದೆ. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ ಎಲ್ಲವು ಪಾರದರ್ಶಕವಾಗಿದೆ. ಮಾಜಿ ಸಚಿವರು ದಲಿತರ ಭೂಮಿಯನ್ನು ಖರೀದಿ ಮಾಡಿದ್ದಾರೆ ಎಂದು ದೂರಿದ್ದಾರೆ ,ಆದರೆ 1910ರಲ್ಲಿ ಪರಿಶಿಷ್ಟರಿಗೆ ಕಾಯ್ದೆ ಇರಲಿಲ್ಲ ಎಂಬ ಅರಿವು ಅವರಿಗೆ ಇಲ್ಲವಾಗಿದೆ ಎಂದು ಚಂದ್ರಪ್ಪ ತಿಳಿಸಿದರು.
ಮಾಜಿ ಸಚಿವರು ನಿಮೆಗೆ ಬೇರೆಯವರ ಪಹಣಿಯನ್ನು ತೋರಿಸಿ ಯಾಮಾರಿಸಿದ್ದಾರೆ. ಇದರ ಬಗ್ಗೆ ಕೊಲಂಕುಶವಾಗಿ ತನಿಖೆಯಾಗಬೇಕಿದೆ. ತಹಶೀಲ್ದಾರವರಿಂದ ತಪ್ಪು ವರದಿಯನ್ನು ನಿರ್ಮಾಣ ಮಾಡಲಾಗಿದೆ. ನನ್ನ ರಾಜಕೀಯ ಜೀವನ ವೈಟ್ ಪೇಪರ್ ಇದ್ದಂತೆ ಇದರಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲವಾಗಿದೆ, ನನಗೆ ಕೆಟ್ಟ ಕೆಲಸವನ್ನು ಮಾಡಿದ ಅನುಭವ ಇಲ್ಲ ಅವರ ಮಾತಿನಲ್ಲಿ ಅರ್ಥ ಇಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ, ಅದು ಸತ್ಯಕ್ಕೆ ದೂರ ಎಂದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading