January 29, 2026
IMG-20251220-WA0180.jpg

ವರದಿ : ಕೆ.ಟಿ. ಓಬಳೇಶ್ ನೆಲಗೇತನಹಟ್ಟಿ.ರಥೋತ್ಸವದಲ್ಲಿ ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ಕೋಲಾಟ ವೀರಾಗಾಸೆ ತಮಟೆ ಗಮನ ಸಳೆದವು.ನಾಯಕನಹಟ್ಟಿ : ಪಟ್ಟಣ ಪಂಚಾಯತಿ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ರಥೋತ್ಸವ ಸಂಭ್ರಮ ಹಾಗೂ ಸಡಗರದಿಂದ ಅದ್ಧೂರಿಯಾಗಿ ನಡೆಯಿತು.
ರಥೋತ್ಸವ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ಪುಜಾ ಕಾರ್ಯಗಳು ನೆರೆವೆರಿಸಲಾಯಿತ್ತು.
ಗ್ರಾಮಸ್ಥರು ಕಳಸ ಪೂಜೆ ನೆರೆವೆರಿಸಿದ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂವುಗಳಿಂದ ಅಲಂಕರಿಸಿ ಮದ್ಯಾಹ್ನ 3 ಗಂಟೆಗೆ ಅನ್ನಸಂತಾಪಣೆ ರಥಕ್ಕೆ ನೆರೆವೆರಿಸಿದರು.
ರಥೋತ್ಸವಕ್ಕೂ ಮುನ್ನಾ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತ್ತು ಗ್ರಾಮದ ಮುಕ್ತಿ ಬಾವುಟವನ್ನ ತಮ್ಮದಾಗಿಸಿಕೊಂಡರು
ಮಹಾ ಮಂಗಳರಾತಿ ನಂತರ ಗ್ರಾಮಸ್ಥರು ರಥೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದರು
ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಆಂಜನೇಯ ಸ್ವಾಮಿ ಭಕ್ತಿ ಸಮರ್ಪಿಸಿದರು ರಥ ಸಂಚಾರಿಸುವ ದಾರಿ ಉದ್ದಕ್ಕೂ ಭಕ್ತರು ಬಾಳೆಹಣ್ಣು, ಮಂಡಕ್ಕಿ, ಮೆಣಸು ಎರಿಚಿದರುಇದೆ ವೇಳೆ ಶಿಕ್ಷಕ ಕೆ.ಓ ರಾಜಯ್ಯ ಮಾತನಾಡಿದರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯನ್ನು ರಥೋತ್ಸವ ಪ್ರತಿ ವರ್ಷದಂತೆ ಸಂಪ್ರಾದಯದಂತೆ ನಡೆಯುತ್ತದೆ ನಮ್ಮ ಹೋಬಳಿ ಬರಪೀಡಿತ ಪ್ರದೇಶವಾಗಿರಬಹುದು ಸಂಸ್ಕೃತಿ ಸಂಪ್ರದಾಯದಲ್ಲಿ ಶ್ರೀಮಂತಿಕೆ ಇದೆ ನಮ್ಮ ಪುಣ್ಯ ಕ್ಷೇತ್ರದಲ್ಲಿ ಹಲವಾರು ಪುರಾತಣ ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಉತ್ತಮ ಮಳೆ ಬೆಳೆ ಆಗುತ್ತದೆ ಅದರಂತೆ ಗ್ರಾಮದಲ್ಲಿ ಶ್ರಿ ಆಂಜನೇಯ ಸ್ವಾಮಿ ಆರ್ಶಿವಾದ ಪ್ರತಿಯೊಬ್ಬರ ಮೇಲೆ ಇರಲಿ ಎಂದರು.ಈ ಸಂಧರ್ಭದಲ್ಲಿ ಗಂಗಯ್ಯನಹಟ್ಟಿ,
ಚನ್ನಬಸಯ್ಯನಹಟ್ಟಿ ಹೊಸ ಊರು, ಹಳೆಊರು, ಕೊಂಡಯ್ಯನ ಕಪಿಲೆ ಗ್ರಾಮಗಳ ಗುರು-ಹಿರಿಯರು ಮುಖಂಡರು ಯುವಕರು
ಪಟ್ಟಣ ಪಂಚಾಯ್ತಿ ಸದಸ್ಯರಾದ ಟಿ ಮಹೇಶ್ವರಿ ಕೆ.ಓ. ರಾಜಯ್ಯ,ಗುರುಶಾಂತಮ್ಮ, ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading