ಚಳ್ಳಕೆರೆ
ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಇಂಗ್ಲಿಷ್ ಫೆಸ್ಟ್‌ಗಳು ಸಹಕಾರಿ – ಬಿ.ಇ.ಓ ಸುರೇಶ್ ಕುಮಾರ್ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂತಹ ಇಂಗ್ಲಿಷ್ ಫೆಸ್ಟ್‌ಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಯುವ ಜೊತೆಗೆ ಅವರ ಸರ್ವೋತೋಮುಖ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.



ನಂತರ ಮಕ್ಕಳು ತಯಾರಿಸಿದ ಇಂಗ್ಲಿಷ್ ಪಾಠೋಪಕರಣಗಳನ್ನು ವೀಕ್ಷಿಸಿ, ಮಕ್ಕಳು ನೀಡಿದ ವಿವರಣೆಗಳನ್ನು ಆಲಿಸಿದರು. ವಿದ್ಯಾರ್ಥಿಗಳ ಚಟುವಟಿಕೆಗಳು ಹಾಗೂ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಅವರು ಮೆಚ್ಚಿ ಪ್ರಶಂಸಿಸಿದರು.
ಬಿ.ಆರ್.ಸಿ ಸಮನ್ವಯಾಧಿಕಾರಿಗಳಾದ ಮಂಜು ಬಾಬು ಮಾತನಾಡಿ, ಇಂಗ್ಲಿಷ್ ಕಲಿಕೆಯಲ್ಲಿ ಕೋಡಿಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ಕ್ರಾಂತಿಯ ಜ್ಯೋತಿ ಹಚ್ಚಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಳಕು ಹೋಬಳಿಯ ಇ.ಸಿ.ಓ ವೀರೇಶ್, ಮುಖ್ಯ ಶಿಕ್ಷಕ ರೇವಣ್ಣ, ಮಾಜಿ ಸಿ.ಆರ್.ಪಿ ವಿಷ್ಣುವರ್ಧನ್, ಚಿಕ್ಕಮ್ಮನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ್, ಶಿಕ್ಷಕರಾದ ಟಿ.ವಿ. ತಿಪ್ಪೇಸ್ವಾಮಿ, ಸೋಮಶೇಖರ್, ಸುಶೀಲಾ, ಆಶಾ, ಜಿ.ಟಿ. ಬಸವರಾಜ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಸ್ವಾತಿ ಎಚ್., ಸದಸ್ಯರಾದ ತಿಪ್ಪೇಸ್ವಾಮಿ, ಪ್ರಸಾದ್, ವಿಜಯ್ ಕುಮಾರ್ ಸೇರಿದಂತೆ ಗ್ರಾಮ ಮುಖಂಡರಾದ ದೊಡ್ಡ ಓಬಯ್ಯ, ಸಣ್ಣ ಓಬಯ್ಯ, ಮೋಹನ್ ರೆಡ್ಡಿ, ಹನುಮಂತು, ಭಾರಿಮಂಜಣ್ಣ, ಭೀಮೇಶ ಶೆಟ್ಟಿ, ಲಿಂಗರಾಜು, ವಿನಯ್ ಕುಮಾರ್, ಬಸವರಾಜು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಮತ್ತು ಹಾಲಿ ಸದಸ್ಯರು, ಬಿಸಿಯೂಟ ಅಡುಗೆ ಸಹಾಯಕರು, ಶಾಲಾ ಸಿಬ್ಬಂದಿ, ಪೋಷಕರು, ಯುವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಕೃತಿಕಾ ಪ್ರಾರ್ಥನೆ ಸಲ್ಲಿಸಿದರು. ಸಿ.ಆರ್.ಪಿ ಸುರೇಶ್ ಸ್ವಾಗತಿಸಿದರು. ಶಿಕ್ಷಕಿ ಸುಪ್ರಿಯಾ ಜೆ. ಕಾರ್ಯಕ್ರಮ ನಿರೂಪಿಸಿದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ : ಕೋಡಿಹಳ್ಳಿ ಟಿ. ಶಿವಮೂರ್ತಿ
About The Author
Discover more from JANADHWANI NEWS
Subscribe to get the latest posts sent to your email.