ಜಾನಪದ ಶೈಲಿಯ ವೀರಗಾಸೆ ತಮಟೆ ಉರುಮೆ ನಂದಿಕೋಲು ಕೋಲಾಟ ರಥೋತ್ಸವಕ್ಕೆ ಮೆರಗೂ ನೀಡಿದವು
ನಾಯಕನಹಟ್ಟಿ::ಡಿ.20. ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಅದ್ದೂರಿಯಾಗಿ ಜರುಗಿತು.
ಇನ್ನೂ ರಥೋತ್ಸವವು ಶ್ರೀ ಬಸವೇಶ್ವರ ದೇವಸ್ಥಾನದಿಂದ ಪಾದಗಟ್ಟೆಯವರಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ರಥೋತ್ಸವಕ್ಕೂ ಮೊದಲು ಮುಕ್ತಿ ಭಾವುಟ ಹಾರಾಜು ಪ್ರಕ್ರಿಯೆ ನಡೆಯಿತು.
ಮುಕ್ತಿ ಬಾವುಟವನ್ನು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಡಿ. ಬೋರಯ್ಯ 6,500 ರೂಗಳಿಗೆ ಪಡೆದುಕೊಂಡರು
ರಥೋತ್ಸವ ಸಾಗುವ ವೇಳೆ ಜಾನಪದ ಶೈಲಿಯ ಕಲಾತಂಡಗಳೊಂದಿಗೆ ಯುವಕರು ಕುಣಿದು ಕುಪ್ಪಳಿಸುತ್ತಾ ಪ್ರಮುಖ ಬೀದಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಭಕ್ತಿ ಪೂರ್ವ ನಮನವನ್ನು ಗ್ರಾಮಸ್ಥರು ಸಲ್ಲಿಸಿದರು
ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಸ್ ತಿಪ್ಪೇಸ್ವಾಮಿ, ಜಗಲೂರಯ್ಯ, ಓಬಣ್ಣ, ದೊಡ್ಡ ಯರಬಾಲಯ್ಯ, ಜಿ ಆರ್ ಸೋಮಶೇಖರ್ , ಶಂಕರ್ ಮೂರ್ತಿ , ಎಸ್ ಟಿ ಪ್ರಕಾಶ್ ಬಿ.ಟಿ .ನಲ್ಲಜರುವಯ್ಯ,ಎ. ಓಬಯ್ಯ, ಹೋಳಿಗೆ ಓಬಯ್ಯ, ಮಾಜಿ ಲೋಕಸಭಾ ಸದಸ್ಯ ಎ. ನಾರಾಯಣಸ್ವಾಮಿ ರವರ ಆಪ್ತ ಸಹಾಯಕ ಜಿ.ಎಚ್ ಮೋಹನ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಕೆ ಎಸ್ ಮಂಜಣ್ಣ,
ಎಸ್ ಪ್ರೇಮಲತಾ ಟಿ ಶಂಕರ್ ಮೂರ್ತಿ, ಪಾಲಮ್ಮ ಜಿ. ಬೋರಯ್ಯ, ರಾಧಮ್ಮ ಬೋಜರಾಜ್, ಬಸಕ್ಕ ತಿಪ್ಪೇಸ್ವಾಮಿ. ಹಾಗೂ ಗ್ರಾಮದ ಯುವಕರಾದ ಜಿ.ಎಸ್ ತಿಪ್ಪೇಸ್ವಾಮಿ, ಜಿಲ್ಲಾ ಡಿಎಸ್ಎಸ್ ಸಂಚಾಲಕ ಜಿ.ಬಿ ತಿಪ್ಪೇಶ್, ಜಿ ಆರ್ ಮಲ್ಲೇಶ್, ಸೇರಿದಂತೆ ಸಮಸ್ತ ಗಜ್ಜುಗಾನಹಳ್ಳಿ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.