ನಾಗತಿಹಳ್ಳಿಮಂಜುನಾಥ್
ಹೊಸದುರ್ಗ : ತಾಲ್ಲೂಕಿನ ವಿವಿಧೆಡೆ ಕಡಲೆ ಬಿತ್ತನೆಯಾಗಿದೆ. ಸಮಯಕ್ಕೆ ಸರಿಯಾಗಿ ಸುರಿದ ಮಳೆಯಿಂದಾಗಿ ಉತ್ತಮವಾಗಿ ಬೆಳೆ ಬಂದಿತ್ತು. ಆದರೀಗ ಸೊರಗು ರೋಗ ಆವರಿಸಿದ ಪರಿಣಾಮ, ರೈತರ ಕನಸಿಗೆ ನೀರೆರಚಿದಂತಾಗಿದೆ. ಕೃಷಿ ಅಧಿಕಾರಿಗಳ ತಂಡ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಸಲಹೆ ನೀಡುತ್ತಿದ್ದಾರೆ.
ಸೊರಗು ರೋಗದಿಂದಾಗಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಗಿಡಗಳು ಸಂಪೂರ್ಣ ಹಳದಿಯಾದರೆ, ಹೂ ಕಟ್ಟುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿನ ಸಂಪೂರ್ಣ ಗಿಡಗಳು ಬತ್ತಿ ಹೋದಂತಾಗುತ್ತವೆ.
ಸಹಾಯಕ ಕೃಷಿ ನಿರ್ದೇಶಕ ಸಿ ಎಸ್ ಈಶ ಅವರ ಮಾತಿನಲ್ಲಿ ಹೇಳುವ ಪ್ರಕಾರ ಸೊರಗು ರೋಗ ಬಂದಿರುವ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಬಿತ್ತನೆಗೆ ಮೊದಲು ಪ್ರತಿ ಎಕರೆಗೆ ಬೇಕಾಗುವ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಜೀವಾಣುಗಳಿಂದ ಲೇಪಿಸಿ, ಬಿತ್ತನೆ ಮಾಡಬೇಕು. ಕಾರ್ಬೆಂಡೈಜಿA ಅಥವಾ ಥೈರಾಮ್ ೨ ಗ್ರಾಂ ಪ್ರತಿ ೧ ಕೆ.ಜಿ. ಯನ್ನು ಪ್ರತಿ ೧ ಕೆ.ಜಿ. ಬೀಜಕ್ಕೆ ಲೇಪಿಸಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮೂರು ವಾರ ಮೊದಲು ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯನ್ನು ಭೂಮಿಗೆ ಹಾಕಬೇಕು. ಕಾರ್ಬೆಂಡೈಜಿA ೫೦ ಡಬ್ಲ್ಯೂ.ಪಿ. ೨ ಗ್ರಾಂ/ಲೀ. ಟ್ರೈಕೋಡರ್ಮಾ ವಿರಿಡೇ ೫ ಗ್ರಾಂ/ಲೀ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು. ಹಿಮಾಮೇಕ್ಟೀನ್ ಬೆಂಜೋಯೇಟ್ ೫ ಗ್ರಾಂ ನ್ನು ಒಂದು ಲೀಟರ್ ನೀರಿನೊಂದಿಗೆ ಸಿಂಪಡಣೆ ಮಾಡುವುದರಿಂದ ಕಾಯಿಕೊರಕ ಹುಳು ನಿಯಂತ್ರಿಸಬಹುದು ಎಂಬುದು ಕೃಷಿ ಇಲಾಖೆಯಿಂದ ರೈತರಿಗೆ ದೋರೆಯುವ ಮಾಹಿತಿಯಗಿದ್ದು ಬೆಳವಣಿಗೆ ಹಂತದಲ್ಲಿರುವಾಗ ಯೂರಿಯಾ ರಸಗೊಬ್ಬರ ಅಥವಾ ನ್ಯಾನೋ ಯೂರಿಯಾ ಸಿಂಪಡಣೆ ಮಾಡಬೇಕು. ಲಘು ಪೋಷಕಾಂಶಗಳ ಮಿಶ್ರಣವನ್ನು ೪ ಎಂ.ಎಲ್ ನ್ನು ಒಂದು ಲೀ ನೀರಿನೊಂದಿಗೆ ಹಾಕಿ ಸಿಂಪಡಿಸಬೇಕು. ಬೆಳೆ ಪರಿವರ್ತನೆಯನ್ನು ಕಡ್ಡಾಯವಾಗಿ ಅಳವಡಿಸುವುದು ಹೀಗೆ ಹಲವಾರು ವಿಧಾನಗಳನ್ನು ಉಪಯೋಗಿಸಿ ಸೊರಗು ರೋಗ ನಿಯಂತ್ರಿಸಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಬಾಕ್ಸ್ ಐಟಂ
ತಾಲ್ಲೂಕಿನಾದ್ಯAತ ಒಟ್ಬು ೧೭೩೫ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿ. ಕಸಬಾ ಹೋಬಳಿಯಲ್ಲಿ ಈರುಳ್ಳಿ ಕೊಯ್ಲು ನಂತರ ಕಡಲೆ ಬಿತ್ತನೆ ಮಾಡಲಾಗುತ್ತದೆ. ಕಸಬಾ ಹೋಬಳಿಯಲ್ಲಿ ೧೬೦೦ ಹೆ, ಶ್ರೀರಾಂಪುರ ಹೋಬಳಿಯಲ್ಲಿ ೩೦೦ ಹೆ ಹಾಗೂ ಮಾಡದಕೆರೆ ಹೋಬಳಿಯಲ್ಲಿ ೫ ಹೆ. ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಕೃಷಿ ಇಲಾಖೆ ವತಿಯಿಂದ ೧೬೦೦ ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ದಾಸ್ತಾನು ಇದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು
ಸಿ.ಎಸ್ ಈಶ,
ಸಹಾಯಕ ಕೃಷಿ ನಿರ್ಧೇಶಕರು. ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.