ಚಿತ್ರದುರ್ಗನ.19:
ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಶಿಕ್ಷಕರಿಗೆ ತರಬೇತಿ ಅಗತ್ಯವಾಗಿದೆ ಬಿ.ಇ.ಓ. ಗಿರಿಜಾರವರು ತಿಳಿಸಿದರು.
ನಗರದ ಡಯಟ್‍ನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ 3 ರಿಂದ 5ನೇ ತರಗತಿ ಬೋಧಕ ಶಿಕ್ಷಕರಿಗೆ ಓದು ಕರ್ನಾಟಕ, ಗಣಿತ ಗಣಕ ಹಾಗೂ ಮೌಲ್ಯಶಿಕ್ಷಣ ಕುರಿತು ಎರಡು ದಿನದ ಸೇವಾನಿರತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಶಿಕ್ಷಣದ ಬಲವರ್ಧನೆಗೆ ಇಲಾಖಾ ವತಿಯಿಂದ ಪಠ್ಯ ಹಾಗೂ ಪಠ್ಯೇತರ ಕಲಿಕೆಗೆ ಸಾಕಷ್ಟು ಪ್ರಯತ್ನಗಳನ್ನು ಅಳವಡಿಸಲಾಗುತ್ತಿದೆ. ಮಕ್ಕಳ ಕಲಿಕೆಯನ್ನು ಗುಣಾತ್ಮಕವಾಗಿಸಲು ಶಿಕ್ಷಕರಿಗೆ ತರಬೇತಿಗಳು ಅತ್ಯಗತ್ಯವಾಗಿವೆ. ಪಾಠ ಬೋಧನೆಯ ಸಮಯದಲ್ಲಿ ಶಿಕ್ಷಕರು ಕಲಿಕೆಯನ್ನು ಉತ್ತಮಪಡಿಸಲು ವಿವಿಧ ಕಾರ್ಯತಂತ್ರಗಳನ್ನು ರೂಪಿಸುವುದು ಪ್ರಮುಖವಾಗಿದೆ. ಭೋಧನೆ-ಕಲಿಕೆ ಸಮಯದಲ್ಲಿ ನಾವಿನ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಿಕೆಯನ್ನು ಹೆಚ್ಚಿಸಲು ತರಬೇತಿಗಳನ್ನು ನೀಡಲಾಗುತ್ತಿದ್ದು, ಕಲಿತ ವಿಷಯಗಳನ್ನು ಶಾಲಾಹಂತದಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಮಕ್ಕಳಿಗೆ ಓದು ಕರ್ನಾಟಕ ಕಾರ್ಯಕ್ರಮದಡಿ ಶೇ.100 ರಷ್ಟು ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಬಿ.ಆರ್.ಸಿ. ಸಂಪತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರು ಮೊದಲು ತಮ್ಮಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಈ ಮೌಲ್ಯಗಳನ್ನು ಮೌಲ್ಯ ಶಿಕ್ಷಣದಲ್ಲಿನ ಬೋಧಿಸುವ ಮೂಲಕ ಮಕ್ಕಳನ್ನು ಉತ್ತಮ ಸಮಾಜ ಜೀವಿಯನ್ನಾಗಿ ರೂಪಿಸಬೇಕು. ಓದು ಕರ್ನಾಟಕ ಕಾರ್ಯಕ್ರಮವು 60 ದಿನಗಳ ಭೋಧನಾದಿನದ ಕಾರ್ಯಕ್ರಮವಾಗಿದೆ. ಪ್ರಾರಂಬಿಕ ಹಂತದ ಮಕ್ಕಳಿಗೆ ಉತ್ತಮ ಭಾಷಾ ಕಲಿಕೆಯನ್ನು ರೂಪಿಸಬೇಕು. ಗಣಿತ ಗಣಕ ಕಾರ್ಯಕ್ರಮವು 6 ವಾರಗಳಿಗೆ ಒಂದು ವೃತ್ತದಂತೆ 2 ಹಂತದಲ್ಲಿ ಜರುಗುವುದು ಹಾಗೆಯೇ ಮೌಲ್ಯಶಿಕ್ಷಣವನ್ನು ಪ್ರತಿ ಹಂತಗಳಲ್ಲಿ ಅಳವಡಿಸಿಕೊಂಡು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಬೇಕೆಂದು ತಿಳಿಸಿದರು. ಶಿಕ್ಷಕರು ಸಮಯಪಾಲನೆ, ವೃತ್ತಿಗೌರವ ಹಾಗೂ ಸಮನ್ವಯತೆಯನ್ನು ಸಾಧಿಸಿದಲ್ಲಿ ಎಲ್ಲಾ ಹಂತಗಳಲ್ಲಿ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು. ಮಕ್ಕಳನ್ನು ಉತ್ತಮ ಪ್ರಜೆಯಾಗಿ ನಿರ್ಮಿಸಲು ಅಗತ್ಯ ಕ್ರಿಯಾಯೋಜನೆಗಳು ಹಾಗೂ ಚಟುವಟಿಕೆಗಳನ್ನು ಶಾಲಾಹಂತದಲ್ಲಿ ಅಳವಡಿಸಿಕೊಂಡಲ್ಲಿ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಬಹುದೆಂದು ತಿಳಿಸಿದರು.
ಸಿ.ಆರ್.ಪಿ ಮಲ್ಲಿಕಾ ಪ್ರಾರ್ಥಿಸಿದರು. ತಿಮ್ಮರಾಜ್ ಸ್ವಾಗತಿಸಿದರು. ವರಲಕ್ಷ್ಮೀ ಎಲ್ಲರನ್ನೂ ವಂದಿಸಿದರು. ಬಿ.ಆರ್.ಪಿ. ವಿದ್ಯಾರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಚಿತ್ರದುರ್ಗ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಿಂದ 204 ಶಿಬಿರಾರ್ಥಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.