ಸಂದೀಪ್ ರವರ ಜೀವನ ? ಸಮಾಜಮುಖಿ ನಾಯಕತ್ವದ ನವ ಚೇತನ
(ಸಂದೀಪ್ ನಾಯಕ ರವರ ಜನ್ಮದಿನದ ನಿಮಿತ್ತ ವಿಶೇಷ ?ಲೇಖನ)
“ಶರಣ ನಿದ್ರಗೈದಡೆ ಜಪ ಕಾಣಿರೊ
ಶರಣನೆದ್ದು ಕುಳಿದಡೆ ಶಿವರಾತ್ರಿ ಕಾಣಿರೊ
ಶರಣ ನಡೆದುದೆ ಪಾವನ ಕಾಣಿರೊ
ಶರಣ ನುಡಿದದೆ ಶಿವತತ್ವ ಕಾಣಿರೊ
ಕೂಡಲಸಂಗನ ಶರಣರ
ಕಾಯಕವೆ ಕೈಲಾಸ ಕಾಣಿರೊ?
-ಬಸವಣ್ಣ
ಜೀವನ ಎನ್ನುವುದು ಕೇವಲ ಪಯಣವಲ್ಲ; ಅದು ಪ್ರತಿಯೊಂದು ಹೆಜ್ಜೆಯ ಹೊಸ ಅರ್ಥ, ಪ್ರತಿಯೊಂದು ಅನುಭವವೂ ಹೊಸ ಜಾಣ್ಮೆಯನ್ನು ನೀಡುವ ಮಹತ್ತರ ಗಮ್ಯ. ಈ ಪಯಣದಲ್ಲಿ ಕೆಲವರು ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳುವರು, ಕೆಲವರು ಇತರರ ಬದುಕಿಗೆ ದಾರಿ ತೋರಿಸುವರು, ಆದರೆ ಕೆಲವರಿಗೆ ಮಾತ್ರ ಇತರರ ಜೀವನವನ್ನೇ ಪ್ರಕಾಶಮಾನಗೊಳಿಸುವ ದೀಪವಾಗುವ ಭಾಗ್ಯ ಸಿಗುತ್ತದೆ. ಸಂದೀಪನಾಯಕ ರವರು ಅಂತಹ ಅಪರೂಪದ ದೀಪದಂತಿರುವ ವ್ಯಕ್ತಿತ್ವದವರು.
ಬೆಳಕು ತನ್ನನ್ನು ತಾನೇ ಬೆಳಗುವುದಿಲ್ಲ; ಅದು ಸುತ್ತಲಿನ ಅಂಧಕಾರವನ್ನು ದೂರ ಮಾಡುವುದಕ್ಕಾಗಿ ಹುಟ್ಟುತ್ತದೆ.ಎನ್ನುವ ತಾತ್ಪರ್ಯದಂತೆ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆಯ ಗೌಡರ ಮನೆತನದಲ್ಲಿ ತಂದೆ ಸೂರನಾಯಕ ತಾಯಿ ಪುಟ್ಟಮ್ಮ ರವರ ಮೊದಲನೆಯ ಮಗನಾಗಿ ೨೧ ನವೆಂಬರ್ ೧೯೮೬ರಲ್ಲಿ ಜನಿಸಿದರು. ತಂದೆ ತಾಯಿಯ ಮಾರ್ಗದರ್ಶನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಬೆಂಗಳೂರಿನ ಹೆಸರಾಂತ ಶಾಲೆಯೊಂದರಲ್ಲಿ ಮುಗಿಸಿ, ನಂತರ ಪಿ ಯು ಹಾಗೂ ಪದವಿ ಶಿಕ್ಷಣವನ್ನು ವಾಣಿಜ್ಯ ನಗರಿಯ ಚಳ್ಳಕೆರೆಯ ಎಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲದಿಂದ ೨೦೦೮ ರಲ್ಲಿ ಪೂರೈಸಿದ್ದಾರೆ. ಪದವಿ ವ್ಯಾಸಂಗ ಮಾಡುತಿದ್ದ ಹಂತದಲ್ಲಿಯೇ ಎಲ್ಲಾ ಪ್ರಾಧ್ಯಪಕರಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿದ್ದರು ಹಾಗೂ ಪ್ರಾಧ್ಯಪಕರನ್ನ ಅಷ್ಟೇ ವಿಶೇಷ ಗೌರವದಿಂದ ಕಾಣುತಿದ್ದರು.
ನಂತರ ೨೦೧೦ರಲ್ಲಿ ಕರ್ನಾಟಕ ಹೆಸರಾಂತ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿರುವ ಕುವೆಂಪು ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಎಂ ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ನಂತರ ಆಂಗ್ಲ ಪ್ರಾಧ್ಯಪಕರಾಗಿ ಅನೇಕ ಸಂಸ್ಥೆಗಳಲ್ಲಿ ಕಾರ್ಯಾ ನಿರ್ವಹಿಸಿರುವುದು ಅವರ ಸೇವಾ ಇಚ್ಛೆಗೆ ಹಿಡಿದ ಕೈಗನ್ನಡಿಯಾಗಿದೆ.ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿರುವ ಸಂದೀಪ್ ರವರು ಜ್ಞಾನವನ್ನು ಹುಡುಕುವಲ್ಲಿ ಅವರಿಗಿದ್ದ ಆಸಕ್ತಿ, ಜ್ಞಾನವನ್ನು ಹಂಚುವಲ್ಲಿ ಇದ್ದ ಬದ್ಧತೆ, ಅವರ ಶಿಷ್ಟತೆ, ಶ್ರಮ, ಮತ್ತು ಮೌಲ್ಯಾಧಾರಿತ ಬಗ್ಗೆ ಅಪಾರ ನಂಬಿಕೆಯನ್ನು ಹೊಂದಿರುವರು ಹಾಗೂ ಸಮಾಜವು ಪ್ರಗತಿಯ ಹಾದಿಯಲ್ಲಿ ನಡೆಯಲು ಹೊಂದಿರುವ ದೃಢತೆ ಇವೆಲ್ಲವೂ ಅವರ ವ್ಯಕ್ತಿತ್ವದ ಅಡಿಗಲ್ಲುಗಳು.
ಪ್ರಸ್ತುತ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಶಿಕ್ಷಣ ಕ್ಷೇತ್ರದಲ್ಲಿ ನವೀನತೆ, ಶಿಸ್ತು, ಮತ್ತು ಮಾನವೀಯತೆಯನ್ನು ಒಂದೇ ವೇದಿಕೆಯಲ್ಲಿ ಜೋಡಿಸಿ ಅನೇಕ ವಿದ್ಯಾರ್ಥಿಗಳ ಕನಸುಗಳಿಗೆ ಸೇತುವೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ಸಂಸ್ಥೆಯು ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದ್ದು, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಅವರು ತೆಗೆದುಕೊಂಡಿರುವ ಅನೇಕ ಯೋಜನೆಗಳು ಸ್ಮರಣೀಯವಾಗಿವೆ.
ಜನಪರ ಹಾಗೂ ಉದಯೋಣ್ಮುಖ ನಾಯಕ ಸಂದೀಪರವರಿಗೆ ಚಳ್ಳಕೆರೆ ತಾಲೂಕಿನಾದ್ಯಂತ ಅಪಾರ ಜನಬಳಗವಿದೆ ಹಾಗೂ ?ಸಂದೀಪ್ ಗೆಳೆಯರ ಬಳಗ?ದ ಸಕ್ರಿಯ ಕಾರ್ಯಪದ್ಧತಿ ಜನರ ವಿಶ್ವಾಸವನ್ನು ಹೆಚ್ಚಿಸಿರುವುದು ವಿಶೇಷ ಸಮಾಜಮುಖಿ ಚಟುವಟಿಕೆಗಳು,ರಕ್ತದಾನ ಶಿಭಿರಗಳ ಆಯೋಜನೆ, ಬಡವರಿಗೆ ನೆರವು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಗ್ರಾಮೀಣ ಸಮಸ್ಯೆಗಳ ಪರಿಹಾರ ಇವೆಲ್ಲದರಲ್ಲೂ ಇವರ ಸೇವಾ ಮನೋಭಾವ ಸ್ಪಷ್ಟವಾಗಿ ಗೋಚರಿಸುತ್ತದೆ.
ಒಬ್ಬರ ಬದುಕಿಗೆ ಬೆಳಕು ನೀಡುವುದು ಸುಲಭವಾದ ಕೆಲಸವಲ್ಲ; ಅದರ ತ್ಯಾಗ,ಮಮತೆ, ನಿಸ್ವಾರ್ಥ ಸೇವಾ ಮನಸ್ಸು, ಮತ್ತು ?ನಾನು ಮಾತ್ರವಲ್ಲ, ನಾವು? ಎಂಬ ಆತ್ಮಭಾವನೆ ಇರಬೇಕು ಅಂತಹ ಮನಸುಳ್ಳವರು.ಅವರು ಸ್ನೇಹವನ್ನು ಅತ್ಯಂತ ಮೌಲ್ಯಯುತವಾಗಿ ಕಾಣುವ ವ್ಯಕ್ತಿ. ಗೆಳೆಯರೊಂದಿಗೆ ಕಾಲ ಕಳೆಯುವುದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು , ಇವೆಲ್ಲವೂ ಅವರ ವ್ಯಕ್ತಿತ್ವದ ಆತ್ಮೀಯತೆಯ ಮುಖ. ಪ್ರಕೃತಿ ಪ್ರಿಯರಾದ ಇವರಿಗೆ ಹಕ್ಕಿಗಳು, ವಿಶೇಷವಾಗಿ ಪಾರಿವಾಳಗಳ ಮೇಲೆ ಇರುವ ಅನುರಾಗ ಗಮನಾರ್ಹ.
ಸಂದೀಪ್ ರವರಲ್ಲಿ ನಾಯಕತ್ವ ದೃಷ್ಟಿ ಇರುವುದು ಮಾತ್ರವಲ್ಲ ಅವರಲ್ಲಿ ಅತ್ಯಂತ ಮೃದುವಾದ ಮನಸೂ ಇದೆ. ಜನರ ಕಷ್ಟವನ್ನು ಅರ್ಥೈಸುವ ವಿಶೇಷ ಸಾಮರ್ಥ್ಯವಿದೆ. ಗೆಳೆಯರ ಬಳಿಯಲ್ಲಿ ಅವರು ಸ್ನೇಹದ ಗಾಳಿಯಾಗಿಯೂ, ಸಮಾಜದ ಮುಂದೆ ಅವರು ಕರ್ತವ್ಯದ ಕಲ್ಲು, ಮತ್ತು ಕುಟುಂಬದ ಮಧ್ಯೆ ಅವರು ಮಮತೆಯ ಮಧು. ತಂದೆ ತಾಯಿಗಳಿಗೆ ಒಳ್ಳೆಯ ಮಗನಾಗಿ, ಅನುಜರಿಗೆ ರಿಗೆ ಸಹೋದರರಾಗಿ ಧರ್ಮ ಪತ್ನಿಗೆ ಪತಿಯಾಗಿ ಮಗಳಿಗೆ ತಂದೆಯಾಗಿ ಹಾಗೂ ಜನರಿಗೆ ಉಪಕಾರ ಮಾಡುವುದೇ ಜೀವನದ ಅಲಂಕಾರ? ಎಂಬ ಮಾತು ಅವರ ನಡೆನುಡಿಯಲ್ಲಿ ರುವುದೇ ವಿಶೇಷ. ಹಾಗಾಗಿ ಸಂದೀಪರವರಿಗೆ ಮತ್ತೊಂದು ಹೆಸರೇ ಬದ್ದತೆ,ಸ್ಪಷ್ಟತೆ ಸಂದೀಪ್ ಅಂದ್ರೆ ನೇರಾನೇರಾ, ನುಡಿದಂತೆ ನಡೆಯುವವರು,ಬಡವರ ಕಷ್ಟಕ್ಕೆ ಸ್ಪಂದಿಸುವವರು, ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಪ್ರೀತಿಸುವ ಜೀವ, ನನ್ನಂತವವನಿಗೆ ಅಣ್ಣನಾಗಿಯೂ, ಸ್ಫೂರ್ತಿಯಾಗಿಯೂ,ಇವರ ಸೇವಾ ನಿಲುವು, ಸ್ಪಂದಿಸುವ ಗುಣ ಹಾಗೂ ಜನಪರ ನಡೆ ಮುಂದಿನ ದಿನಗಳಲ್ಲಿ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಅವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂಬುದು ಎಲ್ಲರ ಆಶಯ.
ಮಾನವೀಯತೆಯ ಮಧುರತೆಯೂ ನಾಯಕತ್ವದ ಸಾಮರ್ಥ್ಯವೂ ಒಂದೇ ವ್ಯಕ್ತಿಯಲ್ಲಿ ಸೇರುವುದೆಂದರೆ ಬಹಳ ಅಪರೂಪ. ಅವರ ನಗು, ಅವರ ಸರಳತೆ, ಅವರ ಬದ್ಧತೆ, ಮತ್ತು ಜನರಿಗಾಗಿ ಅವರು ಮಾಡಿದ ಪ್ರತಿಯೊಂದು ಕಾರ್ಯ?ಇವು ಅವಲೋಕಿಸಿದಾಗ ಅವರನ್ನು “ಜನಮನಗಳಲ್ಲಿ ಆಶೆಯ ದೀಪ ಹಚ್ಚುವ ನಾಯಕ” ಎಂದು ಕರೆಯದೇ ಇರಲು ಸಾಧ್ಯವಿಲ್ಲ.ಜನ್ಮದಿನ ಎಂಬುದು ಕೇವಲ ವರ್ಷ ಬದಲಾವಣೆ ಅಲ್ಲ; ಅದು ಹೊಸ ಕನಸುಗಳ, ಹೊಸ ಸಂಕಲ್ಪಗಳ, ಹೊಸ ಹೊಣೆಗಾರಿಕೆಗಳ ಪುನರುಚ್ಛಾರಣೆ. ಇಂದು ಸಂದೀಪ್ ರವರ ಜನ್ಮದಿನದ ಸಂದರ್ಭದಲ್ಲಿ, ಅವರ ಅಚಲ ನಂಬಿಕೆ, ಮತ್ತು ನಿಸ್ವಾರ್ಥ ಸೇವೆಗೆ ಕೃತಜ್ಞತೆಯ ನಮನಗಳನ್ನು ಸಲ್ಲಿಸುವ ಕ್ಷಣ.ಕೆಲವು ದಿನಗಳು ಕ್ಯಾಲೆಂಡರಿನಲ್ಲಿ ಬರೆಯಲ್ಪಟ್ಟಿರಬಹುದು, ಆದರೆ ಕೆಲವು ದಿನಗಳು ಹೃದಯದಲ್ಲಿ ಅಚ್ಚಳಿಯದ ಗುರುತಾಗಿ ಉಳಿದು ಬಿಡುತ್ತವೆ, ಇಂದು ಅಂತಹ ಒಂದು ಪವಿತ್ರ ದಿನ.?ಈ ಹೊಸ ಜನುಮ ದಿನವು ಅವರಿಗೆ ಆರೋಗ್ಯ,ಆನಂದ,ಆಯುಷ್ಯ ಯಶಸ್ಸು, ಸೇವಾ ಮನೋಭಾವಕ್ಕೆ ಹೊಸ ದಿಕ್ಕುಎಲ್ಲವನ್ನೂ ಆ ದೇವರು ದಯಪಾಲಿಸಲಿ ಎಂದು ಹಾರೈಸುತ್ತೇವೆ.
ಜನ್ಮದಿನದ ಶುಭ ಹಾರೈಕೆಗಳು ತಮಗೆ, ಇನ್ನು ಕೊನೆಯದಾಗಿ ಹೀಗೆ ಸಂದೀಪ್ ರವರು ಕೇವಲ ವ್ಯಕ್ತಿ ಅಲ್ಲ; ಸಮುದಾಯದ ಶಕ್ತಿ, ಒಂದು ಪ್ರಕಾಶಮಾನ ವ್ಯಕ್ತಿತ್ವ. ಒಂದು ನಂಬಿಕೆಯ ಶಕ್ತಿ. ಒಂದು ಮೃದುವಾದ ಹೃದಯ. ಒಂದು ನಿಸ್ವಾರ್ಥ ಸೇವೆಯ ದೀಪ.
ಡಾ. ನಾಗರಾಜ ಓ
ಸಹಾಯಕ ಪ್ರಾಧ್ಯಾಪಕರು
About The Author
Discover more from JANADHWANI NEWS
Subscribe to get the latest posts sent to your email.