September 16, 2025
IMG-20241120-WA0221.jpg

ಚಳ್ಳಕೆರೆ: ವಿದ್ಯಾರ್ಥಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸಿಕೊಂಡು ಅನಕ್ಷರಸ್ಥರಿಗೂ ಮತದಾನದ ಮಹತ್ವವನ್ನು ತಿಳಿಸುವ ಮೂಲಕ ಸದೃಢ ಸಮಾಜ ಕಟ್ಟಲು ಸಹಕಾರಿಯಾಗಬೇಕು ಎಂದು ಕ್ಷೇತ್ರ ಅಧಿಕಾರಿ ಕೆ ಎಸ್ ಸುರೇಶ್ ಅಭಿಪ್ರಾಯ ಪಟ್ಟರು. 

ನಗರದ ಬಿಇಓ ಕಚೇರಿ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಯುವ ಜನತೆ ತಪ್ಪದೆ ಮತ ಚಲಾಯಿಸಿದಾಗ ಮಾತ್ರ ದೇಶವು ಉಜ್ವಲ ಭವಿಷ್ಯ ಕಾಣಲು ಸಾಧ್ಯವಾಗುತ್ತದೆ ವಿದ್ಯಾರ್ಥಿಗಳಿಗೆ ಮತದಾರರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರಬಂಧ ಸ್ಪರ್ಧೆ ಬಿತ್ತಿ ಪತ್ರ ರಚನೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದು ವಿದ್ಯಾರ್ಥಿಗಳು ಕೇವಲ ಸ್ಪರ್ಧೆಗಾಗಿ ಅಥವಾ ಬಹುಮಾನಕ್ಕಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಮತದಾನದ ಮಹತ್ವವನ್ನು ತಿಳಿದುಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. 

ಸಮಾಜ ವಿಜ್ಞಾನ ಪರಿವೀಕ್ಷಕ ಪ್ರಶಾಂತ್ ಮಾತನಾಡಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು 18 ವರ್ಷ ವಯಸ್ಸಿಗೆ ಯುವ ಮತದಾರರಾಗಲಿದ್ದು ಇಂತಹ ಕಾರ್ಯಕ್ರಮಗಳನ್ನು ರೂಪಿಸಿ ಈಗಿನಿಂದಲೇ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಉದ್ದೇಶಿಸಿದ್ದು ಸಂವಿಧಾನದ ಆಶಯದಂತೆ ಪ್ರತಿಯೊಬ್ಬರು ಮತದಾನದ ಬಗ್ಗೆ ಜಾಗೃತಿ ಮೂಡಿಸಿಕೊಂಡು ಉತ್ತಮ ಸಮಾಜ ಕಟ್ಟಲು ನೆರವಾಗಬೇಕು ಎಂದರು. 

ಕಾರ್ಯಕ್ರಮದ ನಂತರ ನಡೆದ ಪ್ರಬಂಧ ಸ್ಪರ್ಧೆ ಕನ್ನಡ ಮಾಧ್ಯಮದಲ್ಲಿ ಸ್ನೇಹ ಪ್ರಥಮ ಸ್ಥಾನ ತನುಜ ದ್ವಿತೀಯ ಸ್ಥಾನ ಮಂಜುಳಾ ತೃತೀಯ ಸ್ಥಾನ ಪಡೆದರು ಪ್ರಬಂಧ ಆಂಗ್ಲ ಮಾಧ್ಯಮ ಜೀವಿತ ಪ್ರಥಮ ಗಗನ ದ್ವಿತೀಯ ಕಾವೇರಿ ತೃತೀಯ ಹಾಗೂ ಬಿತ್ತಿ ಪತ್ರ ರಚನೆಯಲ್ಲಿ ರತೀಶ್ ಪ್ರಥಮ ಶ್ರಾವಣಿ ದ್ವಿತೀಯ ಕಾರ್ತಿಕ್ ತೃತೀಯ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ದೀಕ್ಷಿತ ಮತ್ತು ರುಚಿತಾ ಪ್ರಥಮ ಸುಚಿತ್ ಮತ್ತು ರಂಗನಾಥ ದ್ವಿತೀಯ ಧನಂಜಯ ಮತ್ತು ಅಜಿತ್ ತೃತೀಯ ಸ್ಥಾನ ಗಳಿಸಿದರು. 

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಡಿ ಟಿ ಶ್ರೀನಿವಾಸ್ ಡಿ ಎಸ್ ಪಾಲಯ್ಯ ಕೆಜಿ ಪ್ರಶಾಂತ್ ಸುನಿಲ್ ನಾಯಕ್ ಶಿವಮೂರ್ತಿ ರಾಜಕುಮಾರ್ ಈರಣ್ಣ ದೇವರಪ್ಪ ರವಿಶಂಕರ್ ತಿಪ್ಪೇಸ್ವಾಮಿ ಶಿವಣ್ಣ ಬೋರಣ್ಣ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading