ಚಳ್ಳಕೆರೆ.. ಭಕ್ತಿ ಮತ್ತು ಬರವಸೆಗಳ ಜೀವನಾಡಿ ದೊಡ್ಡ ಉಳ್ಳಾರ್ತಿ ಗ್ರಾಮ ಎಂದು ನಿವೃತ್ತ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ದೊಡ್ಡೋಳ್ಳಾರ್ತಿ ಗ್ರಾಮಕ್ಕೆ ಭೇಟಿ ನೀಡಿ ಗೌರಿ ದೇವಿ ಜಾತ್ರೆಯ ಸಮಾರಂಭದಲ್ಲಿ ಮಾತನಾಡಿ ಪರಶಿವನ ಪತ್ನಿಯಾದ ಪಾರ್ವತಿಯ ಜಾತ್ರೆಯ ಇಂದು ನೂರಾರು ಹಳ್ಳಿಗಳಲ್ಲಿ ಭಕ್ತ ಸಮೂಹ ತಾಯಿ ಪಾರ್ವತಿಯ ಧ್ಯಾನ ಮತ್ತು ಭಕ್ತಿಯಲ್ಲಿ ಮಿಂದೆದ್ದಿದೆ ಇಂತಹ ಅಪೂರ್ವವಾದ ಭಕ್ತಿಯಿಂದ ಶತಮಾನಗಳಿಂದ ಆಚೆಯು ಸುಖ ಶಾಂತಿ ನೆಮ್ಮದಿಯಿಂದ ಸಾರ್ವಜನಿಕರು ಬದುಕುತ್ತಾನೆ ಇಂತಹ ವೈಶಿಷ್ಟ್ಯವಾದ ಗ್ರಾಮಗಳು ತುಂಬಾ ವಿರಳ
ಈ ದಿಸೆಯಿಂದಲೇ ಈ ಗ್ರಾಮದಲ್ಲಿ ಸಾಮರಸ್ಯ ಮನೆ ಮಾಡಿದೆ ವೈಚಾರಿಕತೆ ಮನೆ ಮಾಡಿದೆ ಎಲ್ಲಿ ಧಾರ್ಮಿಕ ಸಹಿಷ್ಣತೆ ನಮ್ಮ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೈವತ್ವ ಇದೆಯೋ ಅಲ್ಲಿ ಪರಮಾತ್ಮನ ನೆಲೆಸುತ್ತಾನೆ ಎನ್ನುವ ಪ್ರತಿತಿಯಿದೆ ಅಂತಹ ವಿಶಿಷ್ಟವಾದ ಗ್ರಾಮವಿದು


ಮುಂದೆಯೂ ಕೂಡ ಇಂತಹ ಧಾರ್ಮಿಕ ಆಚರಣೆಗಳನ್ನು ಈ ಭಾಗದ ಜನ ಮೈಗೂಡಿಸಿಕೊಂಡರೆ ಕತ್ತಲೆಯಿಂದ ಬೆಳಕಿನ ಕಡೆಗೆ ತ ಮ್ಮಗಳ ಜೀವನ ಪರಿವರ್ತನೆಯಾಗಲಿದೆ ಇದರ ಜೊತೆಗೆ ಉತ್ಕೃಷ್ಟವಾದಂತ ಶಿಕ್ಷಣ ಮತ್ತು ಮೌಲ್ಯ ದಾರಿತ ಪಠ್ಯದೊಂದಿಗೆ ತಮ್ಮ ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಜಾಗತಿಕ ಮಟ್ಟಕ್ಕೆ ಸ್ಪರ್ಧಾತ್ಮಕವಾಗಿ ಅಣಿಗೊಳಿಸುವ ಕೆಲಸ ಪ್ರತಿಯೊಬ್ಬರದಾಗಿದೆ ಈ ನಿಟ್ಟಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಕರಿಯಣ್ಣ ಭಾರತೀಯ ಜನತಾ ಪಕ್ಷದ ಪುಟ್ಟಮ್ಮ ಮುಂತಾದವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.