September 16, 2025
IMG-20241120-WA0211.jpg

ಮೊಳಕಾಲ್ಮೂರು: ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿಗ ಮಾತ್ರ ಯಾವುದೇ ತರಹದ ಜಾತಿ ನಿಂದನೆ ಆಗುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಸೈಯದ್ ನಾಸಿರುದ್ದೀನ್ ಹೇಳಿದರು.

ತಾಲ್ಲೂಕಿನ ರಾಂಪುರ ಗ್ರಾಮದ
ಎಸ್.ಪಿ.ಎಸ್.ಆರ್ ಪಿಯು ಕಾಲೇಜಿನಲ್ಲಿ ಬುಧವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮೊಳಕಾಲ್ಮೂರು, ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಅಸ್ಪೃಶ್ಯತ ನಿರ್ಮೂಲನೆ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯು ನಾವೆಲ್ಲರೂ ಒಂದೇ ಎಂಬ ಭಾವನೆಯ ದಾರಿಯಲ್ಲಿ ನಡೆದಾಗ ಮಾತ್ರ ಅಸ್ಪೃಶ್ಯತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಯಾರು ಮಾನವೀಯ ಮೌಲ್ಯಗಳನ್ನು ಮೀರಿ ಬದುಕು ಸಾಗಿಸುತ್ತಾರೋ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಸ್ಪೃಶ್ಯತೆ ನಿರ್ಮಾಲನೆ ಮಾಡುವಲ್ಲಿ ಸಮಾಜ ಕಲ್ಯಾಣ ಇಲಾಖೆ ಸಾಕಷ್ಟು ಶ್ರಮವನ್ನು ವಹಿಸುತ್ತಿದೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ವಿಚಾರ ಸಂಕೀರ್ಣಗಳಂತಹ ಕಾರ್ಯಕ್ರಮಗಳನ್ನ ಮಾಡುತ್ತಾ ಸಾರ್ವಜನಿಕರಲ್ಲಿ ಮಾಹಿತಿಯನ್ನು ತಿಳಿಸುತ್ತಿದೆ ಎಂದು ಹೇಳಿದರು.

ಹಿರಿಯ ನ್ಯಾಯವಾದಿ ವಿಜಯಲಕ್ಷ್ಮಿ ಅವರು ಮಾತನಾಡಿ ನಾವು ವಾಸಿಸುವ ನೆಲ-ಜಲ ಎಲ್ಲವೂ ಒಂದೇ ಆಗಿರುವಾಗ ಎಲ್ಲರೂ ಮನುಷ್ಯ ಜಾತಿಗೆ ಸೇರಿದವರು ನಾವೆಲ್ಲರೂ ಒಂದೇ ಎಂಬ ಪರಿಭಾವನೆಯು ನಮ್ಮಲ್ಲಿ ಮೂಡಿದಾಗ ಮಾತ್ರ ಜಾತಿಯತೆಯನ್ನು ಹೋಗಲಾಡಿಸಬಹುದು ಇಲ್ಲದಿದ್ದರೆ ದೇಶದಲ್ಲಿ ಅಶಾಂತಿಗೆ ಕಾರಣರಾಗುತ್ತಲೇ ಇರುತ್ತೇವೆ ಎಂದರು.

ಭಾರತ ಸಂವಿಧಾನದಲ್ಲಿ ಸುಮಾರು ಕಾನೂನುಗಳಿದ್ದರೂ ಅಸ್ಪೃಶ್ಯತೆ ಆಚರಣೆಯು ಹಿಂದಿಗೂ ಜೀವಂತವಾಗಿರುವುದು ವಿಪರ್ಯಾಸವಾಗಿದೆ ಹಾಗೂ ಎಸ್ಸಿ-ಎಸ್ಟಿ ಸಮುದಾಯದವರು ಇಂದಿಗೂ ಕೆಲವೊಂದು ದೇವಸ್ಥಾನಗಳ ಒಳಗಡೆ ಪ್ರವೇಶವಿಲ್ಲ ಹಾಗೂ ಕ್ಷೌರಿಕರು ಕಟಿಂಗ್ ಮಾಡುತ್ತಿಲ್ಲ ಈಗಿರುವಾಗ ನಾವು ಯಾವ ಕಾಲದ ಮಿತಿ ಒಳಗಡೆ ಇದ್ದೇವೆ ಎಂದು ತಿಳಿಯುತ್ತಿಲ್ಲ ಹೀಗೆ ಮಾಡಿದರೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಆಗುತ್ತದೆ ಹಾಗಾಗಿ ಎಲ್ಲರೂ ಗೌರವಾನ್ವಿತ ರಾಗಿ ಸಮಾನವಾಗಿ ಬದುಕಬೇಕು ಎಂದು ತಿಳಿಸಿದರು.

ಎಸ್ಸಿ-ಎಸ್ಟಿ ಸಮುದಾಯದವರ ಮೇಲೆ ಜಾತಿ ನಿಂದನೆ ಮತ್ತು ಅವಾಚ್ಯವಾಗಿ ನಿಂದಿಸಿದರೆ ಅಂತವರ ವಿರುದ್ಧವಾಗಿ ಎಸ್ಸಿ,ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಐದು ವರ್ಷಗಳ ಕಾಲ ಯಾವುದೇ ಜಾಮೀನು ಇಲ್ಲದೇ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದರು.

ಈ ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ಜೀವಿಸಲು ಅವಕಾಶವಿದೆ ಅವರವರ ಆಯಾಮದ ಕಟ್ಟಿನಲ್ಲಿ ಬದುಕ ಕಟ್ಟಿಕೊಳ್ಳಲು ಸಂವಿಧಾನದಲ್ಲಿ ಹಕ್ಕಿದೆ ಹೀಗಿರುವಾಗ ಜಾತಿಯ ಸಂಘರ್ಷಗಳು ನಮ್ಮಲ್ಲಿ ನಡೆಯಬಾರದು, ನಾವೆಲ್ಲರೂ ಸಮಾನರು ಇನ್ನೊಬ್ಬ ಪರಿಕಲ್ಪನೆಯಿಂದ ಬದುಕು ಕಟ್ಟಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಂಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ಅವರು ಮಾತಾನಾಡಿ ಭೂಮಿಯ ಮೇಲೆ ವಾಸಿಸುತ್ತಿರುವ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು, ಜಾತಿ ನಿರ್ಮೂಲನೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ, ಜಾತಿ ಆಧಾರದ ಮೇಲೆ ಯಾರು ತಾರತಮ್ಯವನ್ನ ಮಾಡದೆ ಗೌರವಯುತವಾಗಿ ಸಮಾಜದಲ್ಲಿ ಬದುಕಬೇಕೆಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಸ್ಸಿ ಎಸ್ಟಿ ಜನಾಂಗದವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇವೆ ಪ್ರಕರಣಗಳು ದಾಖಲಾಗುತ್ತಲೇ ಇದೆ ಎತ್ತಕಡೆ ಸಮಾಜ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಯಾವಾಗ ಮೂಡುತ್ತದೊ ಅವಾಗ ಜಾತಿಯ ಸಂಘರ್ಷಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು.

ಸಂವಿಧಾನದ ಅಡಿಯಲ್ಲಿ ಬದುಕಲು ಎಲ್ಲರಿಗೂ ಅವಕಾಶವಿದೆ ಅದೇ ರೀತಿ ಜಾತಿಯ ಸಂಘರ್ಷಗಳ ನಡುವೆ ಬದುಕುವ ಸಾಗಿಸಬಾರದು, ದೌರ್ಜನ್ಯ ಮುಕ್ತ ನಾಡು ಕಟ್ಟುವಲ್ಲಿ ಎಲ್ಲಾ ಸಮುದಾಯದವರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.

ಎಸ್.ಪಿ.ಎಸ್.ಆರ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ತಿಮ್ಮಣ್ಣ ಮಾತನಾಡಿ ನಮ್ಮ ಸಮಾಜದಲ್ಲಿ ಯಾರು ಮೇಲೆಲ್ಲ, ಯಾರು ಕೀಳಲ್ಲ ಎಂಬ ಭಾವನೆಯನ್ನು ಬಿಟ್ಟು ಬದುಕಿದಾಗಲೇ ಆ ಬದುಕಿಗೆ ಒಂದು ಅರ್ಥ ಸಿಗುತ್ತದೆ ಹಾಗೂ ಗೌರವವು ಸಿಗುತ್ತದೆ ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ ನಮ್ಮ ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ ಯಾವಾಗ ಬೇಕಾದರೂ ನಶಿಸಬಹುದು, ಯಾರ ಬದುಕು ಶಾಶ್ವತವಲ್ಲ ಹಾಗಾಗಿ ನಾವು ಸಮಾಜಕ್ಕೆ ಕೊಟ್ಟಂತಹ ಒಳ್ಳೆಯ ಕೆಲಸಗಳೇ ಶಾಶ್ವತ ವಾಗಿರುತ್ತವೆ ಹಾಗಾಗಿ ಎಲ್ಲರೂ ಅಣ್ಣ ತಮ್ಮಂದಿರಂತೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧಿಕ್ಷಕರಾದ ನವೀನ್,ಎಸ್.ಪಿ.ಎಸ್.ಆರ್ ಕಾಲೇಜ್ ಉಪನ್ಯಾಸಕರಾದ ಬೋರೇಶ್, ವಿಶಾಲಾಕ್ಷಮ್ಮ, ಉಮೇಶ್, ಸಿದ್ದಣ್ಣ, ಸುರೇಶ್, ನಾಗೇಶ್ ಹಾಗೂ ಮಡಿಲು ಸಂಸ್ಥೆ ಅಧ್ಯಕ್ಷರಾದ ಕುಮಾರು ಸ್ವಾಮಿ, ಕಾರ್ಯದರ್ಶಿ ಆನಂದ್, ಸದಸ್ಯರಾದ ಮಹಾಂತೇಶ್, ಪ್ರದೀಪ್, ದ್ಯಾಮ ಕುಮಾರ್ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading