
ವರದಿ .ಎಂ.ಶಿವಮೂರ್ತಿ
ನಾಯಕನಹಟ್ಟಿ : ಹೋಬಳಿಯ ನೆರಲಗುಂಟೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಲ್ಲದೆ ದುರುಗಮ್ಮ ರುದ್ರಮುನಿಯಪ್ಪ, ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ಶಶಿಧರ್ ಘೋಷಣೆ ಮಾಡಿದರು.
ನಂತರ ಮಾತನಾಡಿ ಅವರು ನೆರಲಗುಂಟೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನ ಖಾಲಿಯಾದ ಪ್ರಯುಕ್ತ ಚುನಾವಣೆ ನಡೆಸುವುದಕ್ಕೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಚುನಾವಣೆ ಸಭೆಯನ್ನು ನಿಗಧಿಪಡಿಸಿ ಸರ್ವ ಸದಸ್ಯರಿಗೆ ನೋಟೀಸ್ ಜಾರಿಗೊಳಿಸಿ, ಸಭೆಯನ್ನು ಆರಂಭಿಸಿದ್ದು ೭ ಜನ ಸದಸ್ಯರು ಹಾಜರಿದ್ದರು. ನಮ್ಮ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ ಅಧಿನಿಯಮದ ಪ್ರಕಾರ ಕಳೆದ ದಿನಗಳ ಹಿಂದೆ ೮ನೇ ತಾರೀಖು ಸಭೆಯನ್ನು ನಿಗಧಿಪಡಿಸಿದ್ದು, ಕೋರಮ್ ಇಲ್ಲದ ಕಾರಣಕ್ಕೆ ಮುಂದುಡಲಾಗಿತ್ತು. ಆದರೆ ನಿಯಮದಲ್ಲಿ ಮೊದಲನೇ ಸಭೆಯಲ್ಲಿ ಮಾತ್ರ ಕೋರಮ್ ಇಲ್ಲದೆ ಇದ್ದರೆ ಮುಂದುಡುವುದಕ್ಕೆ ಅವಕಾಶವಿದೆ. ೨ನೇ ಸಭೆಯಲ್ಲಿ ಕೋರಮ್ ಇಲ್ಲದೆ ಇದ್ದರು ಕೂಡ ಸಭೆಯನ್ನು ನಡೆಸುವುದಕ್ಕೆ ಅವಕಾಶ ಇದ್ದುದ್ದರಿಂದ ಆ ಅವಕಾಶವನ್ನು ಬಳಸಿಕೊಂಡು ಬುಧವಾರ ಸಭೆಯನ್ನು ನಡೆಸಿದ್ದು, ಈ ಸಭೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರವನ್ನು ಸಲ್ಲಿಸಿದ್ದರು. ಅವರ ನಾಮ ಪತ್ರವನ್ನು ಪರಿಶೀಲನೆ ಮಾಡಿದ್ದು, ಅದು ಸಿಂಧು ಆಗಿದ್ದು ಅದನ್ನು ಅಂಗಿಕಾರ ಮಾಡಿ ವಾಪಾಸ್ ತೆಗೆದುಕೊಳ್ಳುವುದಕ್ಕೆ ಆಗಾಗಿ ಸ್ಪರ್ದೆ ಕಾರಣದಲ್ಲಿ ಒಬ್ಬರೆ ಉಳಿದಿದ್ದರಿಂದ ಶ್ರೀಮತಿ ದುರುಗಮ್ಮ ರುದ್ರಮುನಿಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಉಪಾಧ್ಯಕ್ಷೆ ಶ್ರೀಮತಿ ದುರುಗಮ್ಮ ರುದ್ರಮುನಿಯಪ್ಪ, ಮಾತನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು ಅಧಿಕಾರಿಗಳೊಂದಿಗೆ ಕೈಜೋಡಿಸಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ದುರುಗಮ್ಮ ನಾಗಭೂಷಣ ಮಾಜಿ ಉಪಾಧ್ಯಕ್ಷರು, ಚಳ್ಳಕೇರಮ್ಮ, ಗಿಡ್ಡಪ್ಪ, ನಾಗವೇಣಿ ಮಂಜಣ್ಣ, ಶಾಂತಮ್ಮ, ರಮೇಶ್ ಬಾಬು, ಈರಣ್ಣ, ಆರ್.ಚಂದ್ರಶೇಖರ್, ದುರುಗಮ್ಮ ರುದ್ರಮುನಿಯಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಣ್ಣ, ಕಾರ್ಯನಿರ್ವಾಹಕ ವೀರನಾಯಕ, ಪೊಲೀಸ್ ಸಿಬ್ಬಂದಿ ವರ್ಗ, ಗ್ರಾ.ಪಂ ಸಿಬ್ಬಂದಿ ವರ್ಗ, ಗ್ರಾಮದ ಮುಖಂಡರುಗಳು ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.