
ಚಳ್ಳಕೆರೆ ನ.20
ಗ್ರಾಮದಲ್ಲಿಅಕ್ರಮ ಮದ್ಯ ಮಾರಟದಿಂದ ಶಾಲಾ ಆವರಣ ಕುಡುಕರ ತಾಣವಾಗಿದೆ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಸಂಬಂಧ ಪಟ್ಟ ಇಲಾಖೆ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಹೌದು ಇದು ಚಳ್ಳಕೆರೆ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಪರವಾನಿಗೆ ಮದ್ಯಮಾರಾಟ ಅಂಗಡಿ ಇದ್ದರೂ ಸಹ ಶಾಲಾ ಸಮೀಪದ ಅಂಗಡಿ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಮದ್ಯ ಬಾಟಲು ಖರೀದಿ ಮಾಡಿ ಶಾಲಾ ಆವರಣದಲ್ಲಿ ಕುಡಿಯುವುದರಿಂದ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಪೌಚ್ ಹಾಕಿದ್ದಾರೆ ಇದರಿಂದ ಮಕ್ಕಳು ಶಾಲೆ ಬಂದಾಗ ವಿದ್ಯಾರ್ಥಿಗಳೇ ಸ್ವಚ್ಚತೆ ಮಾಡ ಬೇಕಾದ ಅನಿವಾರ್ಯತೆ ಇದ್ದು ಇದರಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಶಾಲೆ ದೇವಸ್ಥಾನ ಸಮೀಪ ಅಕ್ರಮ ಮದ್ಯ ಮಾರಾಟ ನಿಶೇಷದ ನಡುವೆಯೂ ದೊಡ್ಡ ಉಳ್ಳಾರ್ತಿ ಗ್ರಾಮದ ಪ್ರೌಢ ಶಾಲೆ ಸಮೀಪವೇ ಹೋಟೆಲ್ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಹಾಗೂ ಶಿಕ್ಷಣ ಇಲಾಖೆ ವಿಫಲವಾಗಿದ್ದು ಅತಿ ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆಗಳ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆ ಸುತ್ತ ಮುತ್ತ ಅಕ್ರಮ ಮದ್ಯ ಮಾರಾಟ ಹಾಗೂ ಶಾಲಾ ಆವರಣದಲ್ಲಿ ಕುಡುಕರ ಹಾವಳಿಗೆ ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.


























ದೊಡ್ಡ ಉಳ್ಳಾರ್ತಿ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲು
About The Author
Discover more from JANADHWANI NEWS
Subscribe to get the latest posts sent to your email.