September 17, 2025
IMG-20241120-WA0019.jpg

ನಾಯಕನಹಟ್ಟಿ:: ಬುಡಕಟ್ಟು ಸಂಸ್ಕೃತಿಯ ಮ್ಯಾಸನಾಯಕರ ಆರಾಧ್ಯ ದೈವ ಶ್ರೀ ಗಾದ್ರಿಪಾಲನಾಯಕ. ದೀಪಾವಳಿ (ದೀವಳಿಗೆ) ಹಬ್ಬ ಸಂಭ್ರಮ ಸಡಗರದಿಂದ ಮಂಗಳವಾರ ಅದ್ದೂರಿಯಾಗಿ ಜರಗಿತು.
ಮಂಗಳವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ಗಾದ್ರಿಪಾಲ ನಾಯಕ ದೀಪಾವಳಿ (ದಿವಳಿಗೆ )ಹಬ್ಬ ಪ್ರತಿ ವರ್ಷದ ಸಂಪ್ರದಾಯದಂತೆ ಆಚರಿಸಲಾಗುತ್ತದೆ.
ಶ್ರೀ ಗಾದ್ರಿಪಾಲ ನಾಯಕ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ಕೈಕಾರಿಗಳು ವಿವಿಧ ಜವಳ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.
ಇನ್ನೂ ಗ್ರಾಮಸ್ಥರು ಸಂಜೆ ನಾಲ್ಕು ಗಂಟೆ ವೇಳೆಗೆ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿಯ ದೇವರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರಿಶಿನ ಭಂಡಾರವನ್ನ ಚೆಲ್ಲಿದರು ನಂತರ ಮಣೆವು ಕಾರ್ಯ ಜರಗಿತು. ನಂತರ ಊರ ಹೊರಗಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ದೇವರ ಎತ್ತುಗಳನ್ನು ಓಡಿಸುವ ಮೂಲಕ ಈ ಬಾರಿಯ ದೀಪಾವಳಿ ಹಬ್ಬ ಹಾಗೂ ದೀವಳಿಗೆ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದರು.

ಇನ್ನೂ ಇದೇ ಸಂದರ್ಭದಲ್ಲಿ ಜಾಗನೂರಹಟ್ಟಿ ಗ್ರಾಮದ ದೈವಸ್ಥರು ಗುರು ಹಿರಿಯರು ಪೂಜಾರಿ ವಂಶಸ್ಥರು ಯಜಮಾನ ವಂಶಸ್ಥರು ಕೀಲಾರಿ ವಂಶಸ್ಥರು ಗೊಂಚಿಗರ್ ವಂಶಸ್ಥರು ಸೇರಿದಂತೆ ಸುತ್ತಮುತ್ತಲಿನ ಕನ್ನಯ್ಯನಹಟ್ಟಿ ಮಾದಯ್ಯನಹಟ್ಟಿ, ಚನ್ನಬಸಯ್ಯನಹಟ್ಟಿ, ಗೌಡಗೆರೆ, ಕವಲಹಳ್ಳಿ, ಗ್ರಾಮಸ್ಥರು ಭಾಗವಹಿಸಿ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading