ಚಳ್ಳಕೆರೆ:-ಮಕ್ಕಳು ಅಕ್ಷರ ಅಕಾಡೆಮಿಯ ಅಬಾಕಾಸ್ ನ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಚಳ್ಳಕೆರೆಯ ನರಹರಿನಗರದ ಶ್ರೀನರಹರಿ ಸದ್ಗುರು ಆಶ್ರಮದ ಓಂಕಾರ ಪೀಠದ ಅಧ್ಯಕ್ಷರಾದ ಡಾ.ವೈ ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು.





ನಗರದ ಎಸ್.ಆರ್.ಕಾಂಪ್ಲೆಕ್ಲ್ ನ ಸಭಾಂಗಣದಲ್ಲಿ ಶ್ರೀಮತಿ ಮಮತಾ ರಾಘವೇಂದ್ರ ನೇತೃತ್ವದ ಅಕ್ಷರ ಅಕಾಡೆಮಿಯು ಹಮ್ಮಿಕೊಂಡಿದ್ದ “ಎರಡನೇ ರಾಜ್ಯಮಟ್ಟದ ಅಬಾಕಾಸ್ ಸ್ಪರ್ಧೆ”ಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಘಟಿಕೋತ್ಸವ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಉತ್ಸಾಹ ಶಕ್ತಿ,ಮಂತ್ರಶಕ್ತಿ ಮತ್ತು ಪ್ರಭುಶಕ್ತಿಗಳನ್ನು ತಮ್ಮ ಶೈಕ್ಷಣಿಕ ಜೀವನದಲ್ಲಿ ಅಳವಡಿಸಿಕೊಂಡು ಅಬಾಕಸ್ ನ ಮೂಲಕ ಉತ್ತಮ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು. ಇಂತಹ ಅಕ್ಷರ ಅಕಾಡೆಮಿಯ ಅಬಾಕಾಸ್ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ಅಕಾಡೆಮಿಯ ಸಂಸ್ಥಾಪಕರಾದ ಶ್ರೀಮತಿ ಮಮತಾ ರಾಘವೇಂದ್ರ ಅವರು ಮೂರು ಜನ ವಿದ್ಯಾರ್ಥಿಗಳಿಂದ ಆರಂಭವಾದ ಅಕ್ಷರ ಅಕಾಡೆಮಿಯು ಇಂದು ಇನ್ನೂರೈವತ್ತು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ಗಣಿತ ಕಲಿಕೆಯನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಕಲಿಸುವುದರ ಜೊತೆಗೆ ಆಸಕ್ತಿ ಇರುವ ಶಾಲೆಗಳಲ್ಲಿಯೂ ಅಬಾಕಾಸ್ ಪಠ್ಯಕ್ರಮದ ಮೂಲಕ ಮಕ್ಕಳಿಗೆ ಕಲಿಕೆಯನ್ನು ಮಾಡಿಸಲಾಗುತ್ತಿದೆ. ಅಕಾಡೆಮಿಯು ವಿದೇಶಗಳಲ್ಲಿಯೂ ತನ್ನ ವಿದ್ಯಾರ್ಥಿಗಳನ್ನು ಹೊಂದಿದ್ದು ಅಲ್ಲಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿರುವುದು ಸಂತೋಷದ ವಿಷಯ ಎಂದರು. ಆಸಕ್ತಿ ಇರುವ ಪದವೀಧರರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಇಂದು ನಡೆದ ಎರಡನೇ ರಾಜ್ಯಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ಚಳ್ಳಕೆರೆ, ದಾವಣಗೆರೆ, ಬೆಂಗಳೂರು, ಆಂಧ್ರಪ್ರದೇಶದ ಕರ್ನೂಲುಗಳಿಂದ ಬಂದ ಎಪ್ಪತ್ತೈದು ವಿದ್ಯಾರ್ಥಿಗಳು ಭಾಗವಹಿಸಿದ್ದು 24 ಜನ ವಿದ್ಯಾರ್ಥಿಗಳು ಬಹುಮಾನ ಗಳಿಸಿದ್ದು ಹದಿನೈದು ಜನ ವಿದ್ಯಾರ್ಥಿಗಳು ಎಂಟು ವಿಭಾಗಗಳನ್ನು ಪೂರ್ಣಗೊಳಿಸಿ ಘಟಿಕೋತ್ಸವ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂದರು. ಕಾರ್ಯಕ್ರಮದ ನಿರೂಪಣೆಯನ್ನು ರವಿಕುಮಾರ್ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಮಾರ್ಗದರ್ಶಕರಾಗಿ ಎಂ ಗೋವಿಂದರಾಜು, ಶ್ರೀಮತಿ ರಾಜೇಶ್ವರಿ ರಾಜಾರಾಮ್, ರಾಘವೇಂದ್ರಗುಪ್ತ, ಅಬಾಕಾಸ್ ಶಿಕ್ಷಕಿ ಭುವನಾ,ಸುಮಾ,ಆಶಾ, ಶ್ರೀಮತಿ ಲಕ್ಷ್ಮೀ ವಂಶಿಕೃಷ್ಣ, ಸರಸ್ವತಮ್ಮ ಅಶೋಕ ಕುಮಾರ್,ಶ್ರೀಮತಿ ಗೀತಾ ಭಕ್ತವತ್ಸಲ,ಅಂಬಿಕಾ ಪುರುಷೋತ್ತಮಶೆಟ್ಟಿ, ವೈಷ್ಣವಿ ಅಕ್ಷರ,ನಂದನ್ ವಿಶೃತ್, ಯತೀಶ್ ಎಂ ಸಿದ್ದಾಪುರ ಸೇರಿದಂತೆ ಸಾಕಷ್ಟು ಸಂಖ್ಯೆಯ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.