March 17, 2026
IMG-20251020-WA0222.jpg

ವರದಿ ಕೆ.ಟಿ. ಓಬಳೇಶ್ ನಲಗೇತನಹಟ್ಟಿ.ನಾಯಕನಹಟ್ಟಿ:: ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಆರೋಗ್ಯಕರ ಸ್ಪರ್ಧೆ ಮುಖ್ಯ ಎಂದು ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಹೇಳಿದರು.ಸೋಮವಾರ ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನುಮೈನಹಟ್ಟಿ ಗ್ರಾಮದಲ್ಲಿ ಎಂಸಿಸಿ ಕ್ರಿಕೆಟರ್ಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಟೆನ್ನಿಸ್ ಬಾಲ್ ಎಂ.ಪಿ.ಎಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 12 ಕ್ರಿಕೆಟ್ ಕ್ರೀಡಾಕೂಟಕ್ಕೆ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗುವ ಜೊತೆಗೆ ಉತ್ತಮ ಆರೋಗ್ಯವಂತರಾಗಿರಲು ಸಾಧ್ಯ ಪ್ರತಿಯೊಬ್ಬರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.ದೈಹಿಕ ಶಿಕ್ಷಕ ಈಶ್ವರ ಮಾತನಾಡಿದರು ಕ್ರಿಕೆಟ್ ಕ್ರೀಡಾಕೂಟದಲ್ಲಿ ಸೋಲು ಗೆಲುವು ಸಹಜ 12ನೇ ವರ್ಷದ ಎಂಸಿಸಿ ಪ್ರೀವರ್ ಲೀಗ್ ಸೀಸನ್ ಆಯೋಜನೆ ಮಾಡಿರೋದು ಸಂತೋಷದ ವಿಷಯ ಪ್ರತಿಯೊಬ್ಬರು ಉತ್ತಮವಾಗಿ ಕ್ರೀಡೆಯನ್ನು ಆಡಬೇಕು ಎಂದು ಯುವಕರಿಗೆ ಉತ್ಸಾಹ ತುಂಬಿದರು.ಗ್ರಾಮ ಪಂಚಾಯತಿ ಸದಸ್ಯ ಎಚ್ ಶಿವಣ್ಣ ಮಾತನಾಡಿದರು ನಮ್ಮ ಗ್ರಾಮದಲ್ಲಿ 12ನೇ ವರ್ಷದ ಕ್ರಿಕೆಟ್ ಕ್ರೀಡಾಕೂಟವನ್ನು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ಕ್ರೀಡಾಪಟುಗಳು ಆಯೋಜಿಸಿದ್ದಾರೆ ಪ್ರತಿಯೊಬ್ಬರು ಕ್ರೀಡಾ ಸ್ಪೂರ್ತಿ ಮೆರೆಯುವ ಹಾಗೆ ಕ್ರೀಡೆಯನ್ನು ಉತ್ತಮವಾಗಿ ಆಡಬೇಕೆಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೈಯದ್ ಆಕ್ತರ ಭಾನು, ಸದಸ್ಯರಾದ ಕೆ ಟಿ ಜಯಂತಿ, ಶಾಂತಮ್ಮ ,ರೋಹಿಣಿಭಾಯಿ, ಎಂ. ನಿರಂಜನ್, ಗ್ರಾಮಸ್ಥರಾದ ಬಸವರಾಜ್, ನಿವೃತ್ತ ಮಾಜಿ ಸೈನಿಕ ಸಾಮ್ಯನಾಯ್ಕ, ಕ್ರಿಕೆಟ್ ಕ್ರೀಡಾಪಟುಗಳು ಸೇರಿದಂತೆ ಸಮಸ್ತ ಮನುಮೈನಹಟ್ಟಿ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading