ನಾಯಕನಹಟ್ಟಿ : ಅ 19.
ರಂದು ರಾತ್ರಿ ಸುರಿದ ಮಳೆಯಿಂದಾಗಿ ಚಿಕ್ಕಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಕೆರೆ ಕೋಡಿ ಪೂಜೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿದರು.




ಗ್ರಾಮದ ಮುಖಂಡ ಕಾವಲಪ್ಪರ ತಿಪ್ಪೇರುದ್ರಪ್ಪ ಮಾತನಾಡಿ 1999ರಲ್ಲಿ ದೊಡ್ಡಕೆರೆ ಹಾಗೂ ಚಿಕ್ಕಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದವು. ಆನಂತರ 2010 ಮತ್ತು 2022 ರಲ್ಲಿ ದೊಡ್ಡಕೆರೆ ಮಾತ್ರ ಕೋಡಿ ಬಿದ್ದಿತ್ತು. ಆ ಸಮಯದಲ್ಲಿ ಕೂಡ ಚಿಕ್ಕೆಕೆರೆ ಮಾತ್ರ ಬರಿದಾಗಿತ್ತು. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಚಿಕ್ಕಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಅನಾದಿಕಾಲದಿಂದಲೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ ನಾವುಗಳು ಈ ದಿನ ಕೋಡಿ ಪೂಜೆ ನೆರವೇರಿಸಿದ್ದೇವೆ ಕೆರೆ ಕೋಡಿ ಬಿದ್ದ ನಂತರ ಗ್ರಾಮಸ್ಥರೆಲ್ಲ ಸೇರಿ ಸಮಾಲೋಚನೆ ನಡೆಸಿ ಕೂಡಿ ಪೂಜೆ ನೆರವೇರಿಸುವುದು ಸಂಪ್ರದಾಯ.
ಗ್ರಾಮದ ಮುಖಂಡ ಪ್ರಭುಸ್ವಾಮಿ ಮಾತನಾಡಿ ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ಸಂಪ್ರದಾಯದಂತೆ ಈ ದಿನ ಕೋಡಿ ಪೂಜೆ ನೆರವೇರಿಸಿದ್ದೇವೆ . ದೇಶ ಹಾಗೂ ರಾಜ್ಯದ ಜನರಿಗೆ ಉತ್ತಮ ಆರೋಗ್ಯ,ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ, ಶಿಕ್ಷಕರಾದ ಓ ಬಿ ನಾಗರಾಜಪ್ಪ, ತಿಪ್ಪೇಸ್ವಾಮಿ ಧಣಿ, ಎನ್ ಪಿ ರುದ್ರಯ್ಯ, ತಿಪ್ಪೇಸ್ವಾಮಿ, ಕಂಟಪ್ಪರ ಮುನಿಯಪ್ಪ, ಜಿ ಟಿ ತಿಪ್ಪೇಶ್, ಕೆ ಜಿ ಮಲ್ಲಿಕಾರ್ಜುನಪ್ಪ, ದಳವಾಯಿ ತಿಪ್ಪೇಸ್ವಾಮಿ, ಪೋಸ್ಟ್ ತಿಪ್ಪೇಸ್ವಾಮಿ, ಎಂ ಉಮೇಶ್, ಕೆ ತಿಪ್ಪೇಸ್ವಾಮಿ, ಕರವೇ ಮಂಜು, ಕಾರ್ತಿಕ್, ಲಲಿತಮ್ಮ, ರತ್ನಮ್ಮ, ಶುಭ ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.