January 29, 2026
Screenshot_20241020_154818.png
ದೇವರಡ್ಡಿಹಳ್ಳಿ ಹೊಸೂರು ಗ್ರಾಮದಲ್ಲಿ ನೀರು ಪೋಲು

ಚಳ್ಳಕೆರೆ ಅ.20 ನಾಗರಿಕರಿಗಾಗಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಸಮರ್ಪಕವಾಗಿ  ನಿರ್ವಹಣೆ ಮಾಡದೆ ಇರುವುದು ಅಮೂಲ್ಯವಾದ ಜೀವಜಲ ಚರಂಡಿ ಪಾಲಾಗುತ್ತಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ದೇವರ ರೆಡ್ಡಿ ಹಳ್ಳಿ ಗ್ರಾಮಪಂವಾಯಿತಿ ವ್ಯಾಪ್ತಿಯ ಗೌರಸಮುದ್ರಕಾವಲು ಹೊಸೂರು ಗ್ರಾಮಸಲ್ಲಿನ ನಿವಾಸಿಗಳಿಗೆಂದು ಕಿರಿನೀರು ಸರಬರಾಜು ಟ್ಯಾಂಕ್ ನಿರ್ಮಿಸಿದ್ದು ಅಸಮರ್ಪಕ ನಿರ್ವಹಣೆಯ ಕಾರಣದಿಂದ  ನೀರು ಸೋರಿಕೆಯಾಗುತ್ತಿದೆ.  ದಿನದ 24 ಗಂಟೆ ಸತತವಾಗಿ ಕೊಳವೆಬಾವಿಗಳ ಮೋಟರ್‌ ಆನ್‌ ಮಾಡಿತ್ತಿರುವುದಿಂದ ಕೇವಲ ಹೊಸೂರು ಗ್ರಾಮವಲ್ಲ ಗ್ರಾಮೀಣ ಭಾಗದ ಬಹುತೇಕ ಗ್ರಾಮಳಲ್ಲಿ ಮೋಟರ್ ಆನ್ ಮಾಡುವುದರಿಂದಟ್ಯಾಂಕುಗಳು ತುಂಬಿ ನೀರು ವ್ಯರ್ಥವಾಗಿ ಚರಂಡಿಗೆ ಹರಿದು ಹೋಗುತ್ತಿದೆ. ಅಮೂಲ್ಯವಾದ ನೀರು ಸದ್ಬಳಕೆಯಾಗದೆ ಚರಂಡಿ ಸೇರುತ್ತಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರಾಗಲಿ ಅಧಿಕಾರಿಗಳಾಗಲಿ ನಲ್ಲಿಗೆ ಕ್ಯಾಪದ ಹಾದೆ ನೀರು ಪೋಲಾಗುತ್ತಿದ್ದರೂ ಸಹ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಪೋಲಾಗುವ ಅಮೂಲ್ಯವಾದ ಜೀವಜಲ ರಕ್ಷಣೆಗೆ ಮುಂದಾಗುವರೇ ಕಾದು ನೋಡ ಬೇಕಿದೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading