March 16, 2026
Screenshot_20241020_112948.png

ಚಳ್ಳಕೆರೆ ಅ.20ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಪುತ್ರಿ ವಿವಾಹ ಕಾರ್ಯಕ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ರಸ್ತೆ ಮಾರ್ಗದಲ್ಲಿ ಬೆಳಗ್ಗೆ 12- 30ಕ್ಕೆ ಸರಿಯಾಗಿ ನಗರಕ್ಕೆ ಬರಲಿದ್ದು.


ಶಾಸಕರ ಪುತ್ರಿ ವಿವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಬೃಹತ್ ಪುರಾತನ ದೇವಾಲಯದ ಸೆಟ್ ನಿರ್ಮಿಸಲಾಗಿತ್ತಿದ್ದು ವರುಣ ದೇವ ಎಡೆ ಬಿಡದೆ ಸುರಿಯುತ್ತಿರುವುದು ಸೆಟ್ ಕಾರ್ಯ ವಿಳಂಭ ವಾಗುತ್ತಿದ್ದು ಇಂದು ಮಧ್ಯಾಹ್ನ ದಷ್ಷಕ್ಕೆ ಪೂರ್ಣಗೊಳಲ್ಲಿದೆ.
ಪುರಾತನ ದೇವಾಲದ ಸೆಟ್ ನೋಡಲು ಜನರು ಡಿ ಸುಧಾಕರ್ ಕ್ರೀಡಾಂಗಣದತ್ತ ದಾವಿಸುತ್ತಿದ್ದು ಜನರು ಬೃಹತ್ ಸೆಟ್ ನೋಡಿ ಕಣ್ಣುತುಂಬಿಸಿಕೊಳ್ಳುತ್ತಿದ್ದಾರೆ.
ಶಾಸಕ ಟಿ.ರಘುಮೂರ್ತಿ ಪುತ್ರಿಯ ವಿವಾಹಕ್ಕಾಗಿ 140 ಅಡಿ ಅಗಲ ಮತ್ತು 4000ಅಡಿ ಉದ್ದದ್ದ ಪೆಂಡಲಿನಲ್ಲಿ ದೇವಾಲಯದ ರೀತಿಯಲ್ಲಿ ಮದುವೆ ಮಂಟಪ ನಿರ್ಮಿಸಿರುವುದಲ್ಲದೆ ಚಳ್ಳಕೆರೆಯ ಆರಾಧ್ಯ ದೇವತೆ ಚಳ್ಳಕೆರಮ್ಮ ದೇವಾಲಯದ ಗೋಪುರದ ಶೈಲಿಯ ದ್ವಾರ ಬಾಗಿಲು ನಿರ್ಮಿಸುವ ಮೂಲಕ ಅದ್ದೂರಿಯ ಮದುವೆಗಾಗಿ ಮಂಟಪ ಸಿದ್ಧಗೊಳಿಸಲಾಗುತ್ತಿದೆ.
ಶಾಸಕರ ಪುತ್ರಿಯ ಮದುವೆಗಾಗಿ ಸಾವಿರಾರು ಜನ ಆಗಮಿಸುವುದರಿಂದ ಒಮ್ಮೆಯಲ್ಲೇ 10ಸಾವಿರ ಜನ ಊಟ ಮಾಡುವಂತೆ 5 ಸಾವಿರ ಮಂದಿ ಕುಳಿತು ಊಟ ಮಾಡಲು 5 ಕೌಂಟರ್ ಮತ್ತು ಬಪೆ ವ್ಯವಸ್ಥೆಯಲ್ಲಿ 5ಸಾವಿರ ಜನರ ಊಟಕ್ಕಾಗಿ 40ಕೌಂಟರ್ ನಿರ್ಮಿಸಲಾಗುತ್ತಿದ್ದು,ಬೆಂಗಳೂರು ಶೈಲಿಯಲ್ಲಿ ವಿವಿಐಪಿಗಳಿಂದ ಹಿಡಿದು ಎಲ್ಲರಿಗೂ ಒಂದೇ ರೀತಿಯ ಬಾಳೆದೆಲೆಯ ಊಟ ಸಿದ್ಧಗೊಳಿಸುತ್ತಿದ್ದು, 5 ರೀತಿಯ ರೈಸ್,6ರೀತಿಯ ಪಲ್ಲೆ, 4ರೀತಿಯ ಸಿಹಿ, ಐಸ್‌ಕ್ರಿಂ,ಬೀಡಾ ಹೀಗೆ 25ರೀತಿಯ ಭೋಜನ ಸಿದ್ಧಗೊಳಿಸಲು 1300 ಜನ ಅಡುಗೆಯವರನ್ನು ನೇಮಿಸಲಾಗಿದೆ.
ಚಳ್ಳಕೆರೆ ಕ್ಷೇತ್ರದ ಮತದಾರರು ಶಾಸಕ ಟಿ.ರಘುಮೂರ್ತಿಗೆ
ಸತತವಾಗಿ ಮೂರನೇ ಬಾರಿಗೆ ಆಶೀರ್ವಾದ ಮಾಡಿದ್ದಾರೆ.
ಪುತ್ರಿ ವಿವಾಹವನ್ನು ಮತದಾರರ ನಡುವೆ ಮಾಡಬೇಕೆಂದು
ತೀರ್ಮಾನಿಸಿ ಚಳ್ಳಕೆರೆಯಲ್ಲೇ ಪತ್ರಿ ಮದುವೆಯನ್ನು
ಅದ್ದೂರಿಯಾಗಿ ಮಾಡಲಾಗುತ್ತಿದೆ.
ವಿಶೇಷ ಎಂದರೆ ಮದುವೆ ಕಾರ್ಯಕ್ರಮದಲ್ಲಿ‌ಭಾಗವಹಿಸಿವ ಮುಖ್ಯಂತ್ರಿಗಳಿಂದ ವಿಐಪಿ .ಸಚಿವ .ಶಾಸಕ ಸೇರಿದಂತೆ ಸಾಮಾನ್ಯ ಜನರಿಗೂ ಒಂದೆ ಊಟ ಆದರೆ ಊಟದ ಕೌಂಟರ್ ಬೇರೆ ಬೇರೆ ಇರುತ್ತವೆ
ಕ್ಷೇತ್ರದ ಜನರಿಗೆ ಆಹ್ವಾನ ನೀಡುವ ಮೂಲಕ ಕ್ಷೇತ್ರದ ಜನರ ನಡುವೆಮಗಳ ವಿವಾಹ ಮಾಡುತ್ತಿರುವುದು ವಿಶೇಷವಾಗಿದ್ದು ಭಾನುವಾರ ಹಾಗೂ ಸೋಮವಾರ ವರುಣ ದೇವ ವಿಶ್ರಾಂತಿ ಪಡೆದು ಶಾಸಕ ಪುತ್ರಿ ವಿವಾಹ ಯಶಸ್ವಿಯಾಗಿ ಜರುಗಲಿ ಎಂದು ಜನಧ್ವನಿ ನ್ಯೂಸ್ ಪ್ರಾರ್ಥನೆ.
ಭಾನುವಾರ ನಗರದೇವತೆ ಚಳ್ಳಕೆರಮ್ಮ ವೀರಭದ್ರಸ್ವಾಮಿ ಆರ್ಶೀವಾದದೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ವದು ವರರು ಬೃಹತ್ ವಿವಾಹ ಮಹೋತ್ಸವ ಸೆಟ್ ನತ್ತ ಬರಲಿದ್ದು ಸಂಜೆ 6.30 ರಿಂದ ಆರತಕ್ಷತೆ ಪ್ರಾರಂಭವಾಗಲಿದೆ ಸೋಮವಾರ ಮುಹೂರ್ತ ಜರುಗಲಿದೆ.
ಸರ್ವರೂ ಆಗಮಿಸಿ ಶುಭಕೋರುವಂತೆ ಶಾಸಕ ಟಿ.ರಘುಮೂರ್ತಿ ಕೋರಿದ್ದಾರೆ. ಶಾಸರ ಪುತ್ರಿ ವಿವಿವಾಹ ಸೆಟ್ ನೀವೂ ನೋಡಿ ಕಣ್ಣುತುಂಬಿಸಿಕೊಳ್ಳಿ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading