December 14, 2025

ಚಳ್ಳಕೆರೆ:
ಮನುಷ್ಯನ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಇಂದಿನ ಯುವ ಜನತೆ ಅತಿ ಹೆಚ್ಚು ರಕ್ತದಾನ ಮಾಡುವುದರಿಂದ ಹಲವಾರು ಜನಗಳ ಪ್ರಾಣ ಉಳಿಯುತ್ತದೆ ಅಲ್ಲದೆ ರಕ್ತದಾನ ಮಾಡುವುದರಿಂದ ದೇಹದ ತೂಕ ಸಮತೋಲನೆ ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ R ತಿಪ್ಪೇಸ್ವಾಮಿ ತಿಳಿಸಿದರು ,

ಇವರು ನಗರದ ರೋಟರಿ ಕ್ಲಬ್ ಬಾಲ ಭವನದಲ್ಲಿ ಆಯೋಜಿಸಿರುವ ಎನರ್ ವಿಲ್ ಕ್ಲಬ್ ಹಾಗೂ ಎಚ್ ಡಿ ಎಫ್ ಬ್ಯಾಂಕಿನ ಹಾಗೂ ಬಾಲಾಜಿ ಹಾಸ್ಪಿಟಲ್ ಬ್ಲಡ್ ಸೆಂಟರ್ ಇವರ ಸಹಯೋಗದೊಂದಿಗೆ ಆಯೋಜಿಸಿರುವ ಸಮಾರಂಭಕ್ಕೆ ಭಾಗಿಯಾಗಿ ಸಸಿಗೆ ನೀರು ಹೆಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು

ಜಗತ್ತಿನಲ್ಲಿ ಅತಿ ದೊಡ್ಡ ಸಂಶೋಧನೆ ಎಂದರೆ ಮನುಕುಲಕ್ಕೆ ರಕ್ತದಾನವೇ ಮಹಾದಾನವಾಗಿರುತ್ತದೆ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಯುವಕ ಯುವತಿಯರು ಹಾಗೂ ಸಾರ್ವಜನಿಕರು ಅತಿ ಹೆಚ್ಚು ರಕ್ತದಾನ ಮಾಡುವುದರಿಂದ ದೇಹದ ಸಮತೋಲನೆ ಬಿಪಿ ಶುಗರ್ ಗಳಂತ ಕಾಯಿಲೆಗಳಿಂದ ದೂರ ಇರಬಹುದು ರಕ್ತದಾನ ಮಾಡಿರುವ ವ್ಯಕ್ತಿಗಳಿಗೆ ಕೇವಲ 24 ಗಂಟೆ ಒಳಗಾಗಿ ದಾನೀಯ ದೇಹದಲ್ಲಿ ಅತಿ ಹೆಚ್ಚು ರಕ್ತ ಉಲ್ಬನವಾಗುತ್ತದೆ ಇದು ಅಲ್ಲದೆ ರಕ್ತದಾನ ಮಾಡುವುದರಿಂದ ಒಬ್ಬ ವ್ಯಕ್ತಿಯ ಪ್ರಾಣವನ್ನು ಉಳಿಸಲು ಸಾಧ್ಯ ಈ ಒಂದು ನಿಟ್ಟಿನಲ್ಲಿ ಯಾವುದೇ ವ್ಯಕ್ತಿ ರಕ್ತದಾನ ಮಾಡಿದರೆ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ ಅಲ್ಲದೆ ದೇಹದ ಕೋಲಸ್ಟ್ರಾಲ್ ರಕ್ತದೊತ್ತಡ ಮಾನಸಿಕ ನೆಮ್ಮದಿ ಸಿಕಂತಾಗುತ್ತದೆ ಇದರಿಂದಾಗಿ ಪ್ರತಿಯೊಬ್ಬ ಯುವಕರು ಸಾರ್ವಜನಿಕರು ರಕ್ತದಾನ ಮಾಡುವುದರಿಂದ ಹಲವಾರು ಪ್ರಾಣಕ್ಕೆ ಜೀವ ತಂದಂತಾಗುತ್ತದೆ ಎಂದು ತಿಳಿಸಿದರು

ಇನ್ನು ಈ ಸಂದರ್ಭದಲ್ಲಿ 45 ರಿಂದ 50 ಜನರು ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಿದ್ದಾರೆ

ಇನ್ನು ಈ ಸಂದರ್ಭದಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಭುಗೌಡ ಪಾಟೀಲ್, ನೇತ್ರಾವತಿ ,ಇನ್ನರ್ವಿಲ್ ಕ್ಲಬ್ ಅಧ್ಯಕ್ಷ ಸುಧಾ ಪ್ರಧಾನ, ಕಾರ್ಯದರ್ಶಿ ಸಾವಿತ್ರಮ್ಮ ಬಸವರಾಜ್ ಡಾಕ್ಟರ್, ಕೆ ಎಂ ಜಯಕುಮಾರ್, ಡಾ. ವೀರೇಶ್ ಸಿದ್ದಾರ್ಥ್, ವಕೀಲರಾದ ನಾಗೇಶ್, ಕಿರಣ್, ಸೇರಿದಂತೆ ಇತರರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading