ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸ ಸದಸ್ಯರುಗಳಿಗೆ ಸಾಲ ಸೌಲಭ್ಯವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು
ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ದೊಡ್ಡಸ್ವಾಮೇಗೌಡರು ಹೇಳಿದರು.

ಅವರು ಸಾಲಿಗ್ರಾಮ ತಾಲೂಕಿನ ಕುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024 – 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಬೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನ ಭಾಗ್ಯ, ಯುವನಿಧಿ, ಶಕ್ತಿ ಯೋಜನೆ ಹಾಗೂ ಗೃಹಜ್ಯೋತಿ
ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ರಾಜ್ಯದ ಸರ್ವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಪ್ರತಿವರ್ಷವೂ 54,000 ಕೋಟಿಯನ್ನು ಸರ್ಕಾರವು ಖರ್ಚು ಮಾಡುತ್ತಿದೆ. ಈ ಯೋಜನೆಗಳಿಗಾಗಿ ಇದುವರೆಗೆ ಸರ್ಕಾರವು 98,000 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ ಎಂದರು.
ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಅನುದಾನವನ್ನು ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕುಪ್ಪೆ ಸಂಘದಿಂದ 2024 – 25 ನೇ ಸಾಲಿನಲ್ಲಿ ಕೆಸಿಸಿ ಸಾಲ ನಾಲ್ಕು ಕೋಟಿ 26 ಲಕ್ಷ, ದುಡಿಯುವ ಬಂಡವಾಳ ಸಾಲ 13 ಲಕ್ಷ,
ಎಸ್.ಹೆಚ್.ಜಿ ಸಾಲ 50 ಲಕ್ಷ ರೂಗಳನ್ನು ವಿತರಣೆ ಮಾಡಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಸ್ತುತ ಸಾಲಿನಲ್ಲಿ 2,40,000 ರೂಗಳ ನಿವ್ವಳ ಲಾಭಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ರೈತರುಗಳು ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು ಹಾಗೂ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ನೂತನ ನಿರ್ದೇಶಕರಾದ
ದೊಡ್ಡಸ್ವಾಮೇಗೌಡರು ಸೇರಿದಂತೆ ಹಲವು ಗಣ್ಯರುಗಳನ್ನು ಸನ್ಮಾನಿಸಲಾಯಿತು ಹಾಗೂ ಕುಪ್ಪೆ ವಿವಿದ್ಧೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ
ಗೋಡೆದಾಸಯ್ಯ, ಉಪಾಧ್ಯಕ್ಷ ಪಟಾಕಿ ಸತೀಶ್, ನಿರ್ದೇಶಕರುಗಳಾದ
ಜಿ.ಎಸ್.ವಿಶ್ವೇಶ್ವರಯ್ಯ,
ಕೆ.ಆರ್.ಮಂಜುನಾಥ, ಸೋಮಪ್ಪ, ಡಿ.ಪುನೀತ್, ಜಿ.ಕುಮಾರಸ್ವಾಮಿ, ಕಲ್ಯಾಣಮ್ಮ, ರುಕ್ಮಿಣಮ್ಮ,
ಎಂಸಿಡಿಸಿಸಿ ಬ್ಯಾಂಕ್ ಪ್ರತಿನಿಧಿ
ಎನ್.ದಿನೇಶ್, ಹಳೆಯೂರು ಶಾಖೆಯ ವ್ಯವಸ್ಥಾಪಕ ಪ್ರತಾಪ್, ಸಿಇಒ ಜಿ.ಪುನೀತ್ ಕುಮಾರ್, ಸಹಾಯಕ ಸಿ.ಜಿ.ಜಗನ್ನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ
ಸಿ.ಕೆ.ಬಾಲಮನೋಹರ,
ಎಂ.ಕುಳ್ಳೇಗೌಡ, ಸದಸ್ಯ ಚಂದ್ರಯ್ಯ, ಮಾಜಿ ಉಪಾಧ್ಯಕ್ಷ ನವೀನ್ ಕುಮಾರ್, ವಿ ಎಸ್ ಎಸ್ ಬಿ ಎನ್ ಮಾಜಿ ಅಧ್ಯಕ್ಷರಾದ
ಸಿ.ಟಿ.ಪಾರ್ಥ, ಸುಬ್ಬೇಗೌಡ, ಹೊಸೂರು ರಾಮಕೃಷ್ಣೆಗೌಡ, ನಿವೃತ್ತ ಮುಖ್ಯ ಶಿಕ್ಷಕ ಸ್ವಾಮಿ, ನಿವೃತ್ತ ಶಿಕ್ಷಕ ಹಿರಣ್ಣಯ್ಯಚಾರ್, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಕೃಷ್ಣೆಗೌಡ, ಹಾಲು ಒಕ್ಕೂಟದ ನಿವೃತ್ತ ಅಧಿಕಾರಿ ಸ್ವಾಮಿ, ಮುಖಂಡರುಗಳಾದ ಜಯಕುಮಾರ್, ಸಿ.ಕೆ.ಹೇಮಂತ್ ಕುಮಾರ್, ವಡ್ಡರಕೊಪ್ಪಲು ಸ್ವಾಮಿಗೌಡ, ತಮ್ಮೇಗೌಡ, ಸುರೇಂದ್ರ, ಮಣಿಕಂಠ, ಕೃಷ್ಣಯ್ಯ, ಹರೀಶ್, ಕೆ.ಎಂ.ಮಧು, ಡೈರಿರವಿ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.