ನಾಯಕನಹಟ್ಟಿ ::: ಪ್ರಧಾನಿ ನರೇಂದ್ರ ಮೋದಿಜೀ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ನಿನ್ನೆ ಬಿಜೆಪಿ ನಾಯಕನಹಟ್ಟಿ ಮಂಡಲ ವತಿಯಿಂದ ಆಯೋಜಿಸಿದ್ದ ಸೇವಾ ಪಾಕ್ಷಿಕ ಅಭಿಯಾನ ದಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಇದೇ ವೇಳೆ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ಚಾಲನೆ ನೀಡಿ ಮಾತನಾಡಿದರು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಸ್ವಚ್ಛ ಭಾರತ ಅಭಿಯಾನದ ಮೂಲಕ ಇಡೀ ಭಾರತ ದೇಶಕ್ಕೆ ಸ್ವಚ್ಛತೆಯ ಬಗ್ಗೆ ಸಂದೇಶವನ್ನು ಸಾರಿದ ಏಕೈಕ ಪ್ರಧಾನ ಮಂತ್ರಿ ಆಗಿದ್ದಾರೆ ಅವರ ಅಧಿಕಾರ ಅವಧಿಯಲ್ಲಿ ಕಳಂಕ ರಹಿತ ಅಧಿಕಾರವನ್ನು ಪೂರೈಸಿದ್ದಾರೆ ಇಂತಹ ಪ್ರಧಾನಮಂತ್ರಿಯವರಿಗೆ ಇಂದು ಹುಟ್ಟುಹಬ್ಬ ಪ್ರಯುಕ್ತ ಅವರಿಗೆ ದೇವರು ಆಯುರ್ ಆರೋಗ್ಯ ಕೊಟ್ಟು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಈ ದೇಶದ ಚುಕ್ಕಾಣಿಯನ್ನು ಹಿಡಿಯುವಂತಾಗಲಿ ಎಂದರು

ಬಿಜೆಪಿ ಮುಖಂಡ ಪಾಪೇಶ್ ನಾಯಕ ಮಾತನಾಡಿದರು. ನರೇಂದ್ರ ಮೋದಿಜಿ ಅವರು ದೂರ ದೃಷ್ಟಿ ಹೊಂದಿರುವ ವಿಶ್ವ ನಾಯಕರಾಗಿದ್ದು ಸ್ವಚ್ಛ ಭಾರತ್ ಅಭಿಯಾನದ ಮೂಲಕ ಮನೆ ಮನೆಗೂ ಶೌಚಾಲಯ ಪ್ರತಿ ಮನೆಗೂ ಕುಡಿಯುವ ನೀರಿನ ಸೌಕರ್ಯ ರೈತರಿಗೆ ಸಹಾಯಧನ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಕೀರ್ತಿ ನರೇಂದ್ರ ಮೋದಿಜಿ ಅವರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಎಂ ವೈ ಟಿ ಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಈ ರಾಮರೆಡ್ಡಿ, ಎಸ್.ಟಿ ಮೋರ್ಚ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ನಗರ ಘಟಕ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಎನ್. ಮಹಾಂತಣ್ಣ, ಕೊರಡಿಹಳ್ಳಿ ಬಿಜೆಪಿ ಯುವ ಮುಖಂಡ ಆನಂದಪ್ಪ, ಎಚ್ ವಿ ಪ್ರಕಾಶ್ ರೆಡ್ಡಿ ಗುಂತಕೋಲ್ಮನಹಳ್ಳಿ ಜೆಸಿಬಿ ಎನ್ ತಿಪ್ಪೇಸ್ವಾಮಿ,ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ ಶಂಕರಸ್ವಾಮಿ, ಕೆ.ಟಿ.
ಮಂಜಣ್ಣ, ಮುಷ್ಟಲಗುಮ್ಮಿ ಗ್ರಾಮ ಪಂಚಾಯತಿ ಸದಸ್ಯ ಸಣ್ಣೋಬಯ್ಯ ಮುಖಂಡ ಪಾಲಯ್ಯ, ಓಬಣ್ಣ, ಜಾಗನೂರಹಟ್ಟಿ ನಾಗರಾಜ್ , ತ್ರಿಶೂಲ್ ಕುಮಾರ್ ಗುಂತಕೋಲ್ಮನಹಳ್ಳಿ ಬೂಟ್ ತಿಪ್ಪೇಸ್ವಾಮಿ, ವಿಷ್ಣುಸಿಂಹ
ಊರಿನ ಮುಖಂಡರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.