September 14, 2025
IMG-20250818-WA0150.jpg

ನಾಯಕನಹಟ್ಟಿ: ಕಡೆ ಶ್ರಾವಣ ಮಾಸದ ಕಡೆ ಸೋಮವಾರದ ಪ್ರಯುಕ್ತ ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿಯ ಹೊರಮಠ-ಒಳಮಠಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀಗುರು ತಿಪ್ಪೇರುದ್ರಸ್ವಾಮಿಯ ದರ್ಶನ ಪಡೆದರು.

ಸೋಮವಾರ ಮುಂಜಾನೆಯಿಂದಲೇ ಹೊರಮಠ-ಒಳಮಠಗಳಲ್ಲಿ ಶ್ರಾವಣ ಮಾಸದ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು. ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಒಳ-ಹೊರಮಠಗಳಿಗೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾದರು.ಒಳಮಠದಲ್ಲಿ ಬೆಳಿಗ್ಗೆಯಿಂದ ನಿರ್ಮಾಣಗೊಂಡಿದ್ದ ಭಕ್ತರ ಉದ್ದನೆಯ ಸಾಲು 300 ಮೀಟರ್ ಉದ್ದದಷ್ಟು ನಿರ್ಮಾಣಗೊಂಡಿತ್ತು.

ಒಳಮಠದ ರುದ್ರಾಭಿಷೇಕ ಮಂಟಪದಲ್ಲಿ ಬೆಳಿಗ್ಗೆ 8.30ಕ್ಕೆ ವಿವಿಧ ಪೂಜಾ ವಿಧಾನಗಳನ್ನು ಆರಂಭಿಸಲಾಗಿತ್ತು. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಏಕವಾರು ಅಭಿಷೇಕ, ಬಿಲ್ವಾರ್ಚನೆ ಅಷ್ಟೋತ್ತರ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು, ರಹರಕೆ ಹೊತ್ತು ಭಕ್ತರು ಮಡಿಯಲ್ಲಿ ರುದ್ರಾಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿವುದು ವಿಶೇಷ.

ಇದೇ ವೇಳೆಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ .ಗಂಗಾಧರಪ್ಪ ಮಾತನಾಡಿದ ಅವರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಆಗಿರುವುದರಿಂದ ಸಕಲ ಭಕ್ತರ ಹಿತದೃಷ್ಟಿಯಿಂದ ದೇವಸ್ಥಾನದ ಆವರಣದಲ್ಲಿ ನೆರಳಿನ ವ್ಯವಸ್ಥೆ ಹಾಗೂ ಅನ್ನದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿ ಸುಮಾರು 300 ರಿಂದ 400 ಅಭಿಷೇಕ ಪೂಜೆಯನ್ನು ನೆರವೇರಿಸಲಾಗಿದೆ ಬಂದಂತಹ ಭಕ್ತಾದಿಗಳು ದಾಸೋಹದಲ್ಲಿ ನೀಡುವ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಬೇಕು. ಮಳೆಯ ಕಾರಣ ವಾತಾವರಣ ತಂಪಿನಿಂದ ಕೂಡಿದ್ದು ಮಳೆಯನ್ನು ಲೆಕ್ಕಿಸದೇ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಸ್ವಾಮಿಯ ದರ್ಶನ ಪಡೆದರು. ಸ್ವಾಮಿಯ ಆಶೀರ್ವಾದದಿಂದ ನಾಡಿನಲ್ಲಿ ಸಮೃದ್ಧಿ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆಯಾಗಿ, ಸ್ವಾಮಿ ಆಶೀರ್ವಾದ ನಾಡಿನ ಜನತೆ ಮೇಲೆ ಸದಾ ಇರಲಿ ಎಂದು ಶುಭ ಹಾರೈಸಿದರು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿ ಎಸ್ ಸತೀಶ್, ಮನು, ಮಹೇಶ್ ಸೇರಿದಂತೆ ಸಾವಿರಾರು ಭಕ್ತರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading