July 20, 2025
IMG-20250720-WA0257.jpg

ನಾಯಕನಹಟ್ಟಿ : ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ರಾಮನಗರ ಸಮಾಜ ಕಾರ್ಯವಿಭಾಗದ ವತಿಯಿಂದ10 ದಿನಗಳ ಕಾಲ ಸಾಮಾಜ ಕಾರ್ಯ ಶಿಬಿರವನ್ನ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರಾಮದುರ್ಗ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ಐದನೇ ದಿನದಂದು ಜೂನ್ 19 ರಂದು ಸಾಯಂಕಾಲ
ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ವಿಜಯ್‌ ಎಂ ಗೌರವಾನ್ವಿತ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಿತ್ರದುರ್ಗ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ಅಧ್ಯಾಪಕರು ಮತ್ತು ಶಿಬಿರದ ಸಂಯೋಜಕರಾದ ಡಾ. ರಶ್ಮಿ ಜಿ ಎಂ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡುತ್ತಾ ಕಾನೂನು ತಿಳಿದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮಾನ್ಯ ಜನರು ವರ್ಷಾನುಗಟ್ಟಲೆ ನ್ಯಾಯಾಲಯಗಳಿಗೆ ಓಡಾಡುವುದುಂಟು. ಅಂತದ್ದರಲ್ಲಿ ನ್ಯಾಯಾಧೀಶರೇ ನಮ್ಮ ಮನೆಯ ಬಾಗಿಲಿಗೆ ನಮ್ಮ ಸಮುದಾಯದ ಹತ್ತಿರ ಬಂದಿರುವುದರಿಂದ ಜನಸಾಮಾನ್ಯರೆಲ್ಲರೂ ನಿಮ್ಮ ಪ್ರಶ್ನೆಗಳನ್ನು ಅವರ ಮುಂದಿಡಬೇಕಾಗಿ ಕೇಳಿಕೊಂಡರು ಜೊತೆಯಲ್ಲಿ ನ್ಯಾಯಾಧೀಶರಿಗೆ ತಳ ಸಮುದಾಯಗಳಲ್ಲಿ ಪ್ರತಿ ವರ್ಷ ಅವರು ಮಾಡುವಂತಹ ಶಿಬಿರದ ಬಗ್ಗೆ ವಿವರಿಸಿದರು.

ಕಳೆದ ವರ್ಷಗಳಲ್ಲಿ ಪಾವಗಡದ ಶೈಲಾಪುರದಲ್ಲಿ, ಚಿಕ್ಕಮಗಳೂರಿನ ನಕ್ಸಲ್ ಪೀಡಿತ ಪ್ರದೇಶವಾದ
ಮೆಣಸಿನಹಾಡ್ಯಾದಲ್ಲಿ, ರಾಮನಗರದ ಇರುಳಿಗರ ಕಾಲೋನಿಯಲ್ಲಿ ಮತ್ತು ಕಳೆದ ವರ್ಷ ಕೊಪ್ಪಳದ ದೇವದಾಸಿ ಅಮ್ಮಂದಿರ ಸಮುದಾಯಗಳಲ್ಲಿ ಮಾಡಿದ ಸಮಾಜಕಾರ್ಯ ಸಮೀಕ್ಷೆ ಮತ್ತು ಅದರ ವರದಿಗಳನ್ನು ಸಂಭಂದಪಟ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ವರದಿಗಳನ್ನು ಸಲ್ಲಿಸಲಾಗಿದ್ದು ಅದರಿಂದ ಕೆಲವು ಸಕಾರಾತ್ಮಕ ಬದಲಾವಣೆಯಾಗಿರುವುದನ್ನು ಉಲ್ಲೇಖಿಸಿದರು.

ಅದರಂತೆಯೇ ಈ ಸಮುದಾಯದಲ್ಲೂ ಕಿಲಾರಿ ಪಶುಪಾಲಕ ಅನನ್ಯತೆ ಸಮುದಾಯದಿಂದ ಸಮಾಜದಡೆಗೆ ನಡೆಯುತ್ತಿರುವ ಶಿಬಿರದ ಸರ್ವ ಮೂಲಕ ಸಂಗ್ರಹಿಸಿದ ವರದಿಯನ್ನು ವಿವಿಧ ಹಂತಗಳಿಗೆ ತಲುಪಿಸುವ ಬಗ್ಗೆ ಆಶ್ವಾಸನೆ ನೀಡುತ್ತಾ ಪ್ರಾಸ್ತಾವಿಕ ನುಡಿಯನ್ನು ಮುಗಿಸಿದರು.

ನಂತರ ಹಿರಿಯ ಸಿವಿಲ್‌ ನ್ಯಾಯಾಧೀಶ ವಿಜಯ್‌ ಎಂ ಮಾತನಾಡಿ ನಾವು ಗ್ರಾಮದ ಜನರ ಸಮಸ್ಯೆಗಳಿಗೆ ಪರಿಹಾರಗಳನ್ನ ಸಂವಿಧಾನದ ಅಡಿಯಲ್ಲಿ ಬಗೆಹರಿಸುವ ಪ್ರಯತ್ನವನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಮಾಡುತ್ತೇವೆ ಹಾಗಾಗಿ ಗ್ರಾಮಸ್ಥರು
ನಿಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳ ಪಟ್ಟಿಯನ್ನು ಶಿಬಿರದ ಸಂಯೋಜಕರ ಮೂಲಕ ನಮಗೆ ತಲುಪಿಸಿ ಅವರು ನಮಗೆ ತಲುಪಿಸುತ್ತಾರೆ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಆ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳೋಣ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ರಾಮನಗರದ ಸಮಾಜ ಕಾರ್ಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತುಂಬಾ ಶ್ರಮವಹಿಸಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಿಮ್ಮ ಗ್ರಾಮದ ಸಮಸ್ಯೆಗಳನ್ನ ಪಟ್ಟಿ ಮಾಡುತ್ತಿದ್ದಾರೆ ಅವರ ವರದಿಗಳನ್ನು ಆಧರಿಸಿ ಕಿಲಾರಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಡುತ್ತೇವೆ.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಮಿರ್ ಪಿ ನಂದ್ಯಾಲ್ ಗೌರವಾನ್ವಿತ ಹಿರಿಯ ಸಿವಿಲ್
ನ್ಯಾಯಾಧೀಶರು ಜೆ ಎಂ ಎಫ್ ಸಿ ಮತ್ತು ಅಧ್ಯಕ್ಷರು, ತಾಲ್ಲೂಕು ಕಾನೂನು ಸೇವಾ ಸಮಿತಿ ಇವರು ಮಾತನಾಡುತ್ತಾ ಮಕ್ಕಳ ಸಹಾಯವಾಣಿಯಾದ ಒಂದು ಸೊನ್ನೆ ಒಂಬತ್ತು ಎಂಟು (1098) ದೂರವಾಣಿಯ
ಬಗ್ಗೆ ಸಮುದಾಯಕ್ಕೆ ಮಕ್ಕಳ ಸಹಾಯವಾಣಿಯ ಪ್ರಯೋಜನಗಳನ್ನು ಪಡೆಯಬೇಕಾಗಿ ವಿವರಿಸಿದರು.

ಅಲ್ಲದೆ ಸಣ್ಣ ವಯಸ್ಸಿನಲ್ಲಿ ಅಂದರೆ 18 ವರ್ಷಕ್ಕೂ ಮುನ್ನ ಬಾಲ್ಯ ವಿವಾಹಗಳನ್ನು ಮಾಡಬಾರದೆಂದುಸೂಚಿಸಿದರು ಮತ್ತು ಬಾಲ್ಯ ವಿವಾಹದಿಂದ ಆಗುವ ಅಡ್ಡ ಪರಿಣಾಮಗಳು ಮತ್ತು ಸಮುದಾಯದ ಅಭಿವೃದ್ಧಿಯ ಕುಂಠಿತದ ಬಗ್ಗೆ ಮಾತನಾಡಿದರು. ಮಕ್ಕಳೆಲ್ಲರೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಹೇಳಿದರು. ಸಮುದಾಯದಲ್ಲಿ ಯಾವುದೇ ರೀತಿಯ
ಸಮಸ್ಯೆಗಳಿದ್ದರೂ ಅದನ್ನು ಶಿಬಿರದ ಸಂಯೋಜಕರಾ ದ ಡಾ. ರಶ್ಮಿ ಮತ್ತು ಡಾ. ದೇವಿದ್ರಪ್ಪರವರ ಸಹಾಯ ಪಡೆದು ಪಟ್ಟಿಮಾಡಿ ತಮ್ಮ ಕಚೇರಿಗೆ ತಲುಪಿಸಲು ಸೂಚಿಸಿದ್ದಾರೆ.

ಕಿಲಾರಿ ಸಮುದಾಯದವರು ತಮ್ಮ
ಅಭಿವೃದ್ಧಿಗೆ ಬೇಕಾಗಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ತಿಳಿಸುವಂತೆ ಸೂಚಿಸಿದರು.
ಅಲ್ಲದೆ ಸಮುದಾಯದಲ್ಲಿ ಯಾವುದೇ ಬಾಲ್ಯ ವಿವಾಹಗಳನ್ನು ಆಯೋಜಿಸಿದರೆ ತಕ್ಷಣ ಒಂದು ಸೊನ್ನೆ ಒಂಬತ್ತು ಎಂಟು ಅಥವಾ ಒಂದು ಒಂದು ಎರಡು ಇದಕ್ಕೆ ದೂರನ್ನು ದಾಖಲಿಸಲು ಪ್ರೋತ್ಸಾಹ ನೀಡಿದರು.ಕೌಟುಂಬಿಕ ದೌರ್ಜನ್ಯ, ಕುಡಿತ ಇವೆಲ್ಲವನ್ನು ಮುಕ್ತವಾದ ಸಮುದಾಯವನ್ನಾಗಿ ಮಾಡಿಸಬೇಕಾದರೆ
ಎಲ್ಲರೂ ಜೊತೆಯಲ್ಲಿ ಜೊತೆಗೂಡಿ ಒಂದು ಒಗ್ಗಟ್ಟಿನಿಂದ ಈ ಅಭಿವೃದ್ಧಿಯ ಕಡೆ ಹೆಜ್ಜೆ
ಇಡಬೇಕಾಗಿರುವಂತಹ ಅವಶ್ಯಕತೆ ಇದೆ ಎಂದು ತಮ್ಮ ಮಾತುಗಳನ್ನು ಮುಗಿಸಿದರು.

ಡಾ. ನವೀನ್ ಮಸ್ಕಲ್ ಅವರು ಮಾತನಾಡುತ್ತಾ ಕಿಲಾರಿ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ನಿಮ್ಮ ಬೆಂಬಲ ಕೊಡಿ
ಎಂದು ಗ್ರಾಮಸ್ಥರಿಗೆ ಹೇಳಿದರು ಹಾಗೆ ರಾಮದುರ್ಗ ಗ್ರಾಮದ ಡಾ. ಅಜ್ಜಯ್ಯ ಗ್ರಾಮದ ಮೊದಲ ಪಿಎಚ್‌ಡಿ ಪದವೀಧರ ಅವರು ಗ್ರಾಮದ ಸಮಸ್ಯೆಗಳ ಪಟ್ಟಿಯನ್ನು ಹೇಳುತ್ತಾ ಹೋದರು ವೇದಿಕೆ ಮೇಲಿದ್ದ ನ್ಯಾಯಾಧೀಶರು ನಿಮ್ಮ ಊರಿಗೆ ಸಾರಿಗೆ ವ್ಯವಸ್ಥೆಯನ್ನ ಕಲ್ಪಿಸಿ ಕೊಡುತ್ತೇವೆ ಎಂದು ಹೇಳಿದರು.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ. ಆ ಕೆಲಸವನ್ನು ಕೂಡ ಬಗೆಹರಿಸುತ್ತೇವೆ ಎಂದು ತಿಳಿಸಿದರು. ಇನ್ನುಳಿದ ಸಮಸ್ಯೆಗಳನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನ ನಮ್ಮ ಕಾನೂನು ಸೇವಾ ಪ್ರಾಧಿಕಾರದ
ಮೂಲಕ ಮಾಡುತ್ತೇವೆ ಎಂದು ವೇದಿಕೆಯಲ್ಲಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದ ಶಿಬಿರದ ಸಂಯೋಜಕರು ಮತ್ತು ಅಧ್ಯಾಪಕರು ಆದಂತ ಡಾ. ದೇವಿಂದ್ರಪ್ಪ ಅವರು ಮಾತನಾಡುತ್ತಾ ಗ್ರಾಮದ ಸಮಸ್ಯೆಗಳನ್ನ ನಮ್ಮ ವಿದ್ಯಾರ್ಥಿಗಳು ಸಮೀಕ್ಷೆಯ ಮೂಲಕ ಗುರುತಿಸಿದ್ದಾರೆ ಅವುಗಳನ್ನು ವರದಿಯಾಲ್ಲಿ ಉಲ್ಲೇಖಿಸಿ ಸೂಕ್ತ ಶಿಪಾರಸ್ಸುಗಳನ್ನು
ಸರಕಾರಕ್ಕೆ ಮತ್ತು ನಮ್ಮ ಬೆಂಗಳೂರ ವಿವಿಗೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಶಿಬಿರಾರ್ಥಿಗಳಾದ ಚೈತ್ರ ಎಂ ಮತ್ತು ಮಧುಶ್ರೀ ಅವರು ಪ್ರಾರ್ಥನೆ ಗೀತೆಯ ನಾಡಿದರು ಶಿಬಿರಾರ್ಥಿಗಳಾದ ಚೈತ್ರ ಎಂ, ಚೇತನ್, & ಲಾರ್ಜರ್ ಪುಣಿತ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆಯ ಎ ಎಸ್ ಐ ದಾದಾಪೀರ್ ಖಾನ್ ಮತ್ತು ಗ್ರಾಮ ಪಂಚಾಯತಿಯ ಸದಸ್ಯರಾದ ಮುತ್ತಯ್ಯ, ಬಂಗಾರಪ್ಪ ಇತರರೂ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading