
ನಾಯಕನಹಟ್ಟಿ: ಬಿಜೆಪಿ ಮಂಡಲದಲ್ಲಿ ಎಲ್ಲವೂ ಸರಿ ಇಲ್ಲ ಆದ್ದರಿಂದ ಬೇಸರ ತಂದಿದೆ ಎಂದು ಮಾಜಿ ರೈತ ಮೋರ್ಚಾ ಅಧ್ಯಕ್ಷ ಬಿ.ಟಿ. ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿದ ಅವರು ನಾಯಕನಹಟ್ಟಿ ಮಂಡಲದ ಅಧ್ಯಕ್ಷರು ಬಿಜೆಪಿ ಪಕ್ಷದಲ್ಲಿ ತಾರತಮ್ಯ ಭೇದಭಾವ ಅನುಸರಣೆ ಮಾಡುತ್ತಿದ್ದಾರೆ. ನಾವು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳು ನಮಗೆ ಅನ್ಯಾಯವಾಗಿದೆ. ಸ್ಥಳೀಯ ಮುಖಂಡರಿಗೆ ತಿಳಿಸದೇ ಸಭೆಗಳನ್ನು ಮಾಡಲಾಗುತ್ತಿದೆ ಹಾಗೂ ನಾವೇ ಖುದ್ದು ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಆದ್ದರಿಂದ ಈ ದಿನ ಪಕ್ಷದ ಕಚೇರಿಯಲ್ಲಿ ಪ್ರಶ್ನಿಸಲಾಯಿತು. ಆ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ ಹೇಳುತ್ತಾರೆ ಎದ್ದು ಹೋಗಿ ಇಷ್ಟ ಇದ್ದರೆ ಇರಿ ಇಲ್ಲದಿದ್ದರೆ ಹೋಗಿ ಎಂದು. ಬಿಜೆಪಿ ಪಕ್ಷ ಒಬ್ಬ ವ್ಯಕ್ತಿಯದಲ್ಲ, ನಾವುಗಳು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರು ನೀವ್ಯಾರು ಎದ್ದು ಹೋಗಿ ಎಂದು ಹೇಳಲು?
ಬೂತ್ ಮಟ್ಟದಿಂದ ಪಕ್ಷ ಕಟ್ಟುವಂತ ಕಾರ್ಯಕರ್ತರಿಗೆ ಎಷ್ಟು ನೋವು, ಅವಮಾನವಾಗುತ್ತದೆ ಎಂದು ನೂತನ ಜಿಲ್ಲಾಧ್ಯಕ್ಷರು ಯೋಚಿಸಬೇಕು.ಆಟಕ್ಕುಂಟು ಲೆಕ್ಕಕ್ಕಿಲ್ಲ ಇಲ್ಲ ಎನ್ನುವಂತೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.ಆದ್ದರಿಂದ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ ಇವರನ್ನು ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹುದ್ದೆಯಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿದರು.
ನಂತರ ರಮೇಶ್ ನಾಯ್ಕ ಮಾತನಾಡಿ ಲಂಬಾಣಿ ಸಮುದಾಯವನ್ನು ಸಂಪೂರ್ಣವಾಗಿ ನೂತನ ಮಂಡಲ ಅಧ್ಯಕ್ಷರು ನಿರ್ಲಕ್ಷಿಸಿದ್ದಾರೆ. ಎಡಗೈ ಸಮುದಾಯ ಕಾಂಗ್ರೆಸ್ ಗೆ ಮತದಾನ ಮಾಡಿದ್ದರೂ ಕೂಡ, ನಾವುಗಳು ಪ್ರಾಮಾಣಿಕವಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದೇವೆ. ಉದ್ದೇಶಪೂರ್ವಕ ನಮ್ಮ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ. ಇದರಿಂದ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುವುದು ಮುಂದಿನ ಚುನಾವಣೆಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾದ ಸಂದಿಗ್ನತೆಗೆ ಪಕ್ಷವನ್ನು ತಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ಸಂದರ್ಭದಲ್ಲಿ ದಳವಾಯಿ ಬೋರಯ್ಯ, ಕಾವಲು ಬಸವೇಶ್ವರ ನಗರ ಬೋರಣ್ಣ, ಗುಂತಕೋಲ್ಮನಹಳ್ಳಿ (ಬೂಟ್) ತಿಪ್ಪೇಸ್ವಾಮಿ, ಚನ್ನಬಸಯ್ಯನಹಟ್ಟಿ ಶರಣಪ್ಪ, ಗಜ್ಜುಗಾನಹಳ್ಳಿ ಹೊನ್ನೂರಪ್ಪ ಇನ್ನು ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.