July 20, 2025
IMG-20250720-WA0217.jpg

ಚಳ್ಳಕೆರೆ: ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದೆ ಕರೆಯಿಸಿಕೊಳ್ಳುವ ಪತ್ರಿಕಾರಂಗ ಸಾಮಾಜಿಕ ಬದ್ದತೆಯನ್ನು ಉಳುಸಿಕೊಳ್ಳಲು ಸ್ವತಂತ್ರ್ಯವಾಗಿ ನೈಜತೆಯನ್ನು ಕಾಪಾಡಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ತಾಲೂಕು ಪಂಚಾಯಿತ್ ಸಭಾಗಂಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಆಯೋಜಿಸಿದ್ದ ಪ್ರತಿಕಾ ದಿನಾಚರಣೆಯನ್ನು ಕುರಿತು ಮಾತನಾಡಿದರು. ಸಮಾಜಕ್ಕೆ ಸುದ್ದಿಕೊಡುವ ಭರದಲ್ಲಿ ಸುದ್ದಿಗಳನ್ನು ತಿರುಚುವುದು ಬೇಡ, ಸಾರ್ವಜನಿಕರಿಗೆ ನೈಜಸುದ್ದಿ ತಲುಪಿಸುವ ಕೆಲಸವಾಗಬೇಕು. ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ನಡುವೆ ಪತ್ರಿಕಾರಂಗ ತಮ್ಮದೆ ಆದ ಅಸ್ತಿತ್ವವನ್ನು ಉಳುಸಿಕೊಂಡಿದೆ. ಇಂದು ನಡೆದ ಹಲವು ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವವರು ಸಹ ಪತ್ರಕರ್ತ ಮಾಡುವ ಕೆಲಸವನ್ನು ಮಾಡಿ ಅವರೆ ಸುದ್ದಿ ಮುಟ್ಟಿಸುವವರಾಗಿದ್ದಾರೆ, ಸ್ಥಳೀಯ ಪತ್ರಕರ್ತರನ್ನು ಗುರುತಿಸುವ ಕೆಲಸವಾಗುತ್ತದೆ ಅದೇ ರೀತಿಯಲ್ಲಿ ನಿಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಳಿ ಚರ್ಚಿಸಿ ಜಾರಿಗಳಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು.

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನಾ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪತ್ರಿಕೆ ನಶಿಸಿ ಹೊಗುತ್ತದೆ ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಆದ್ದರಿಂದ ಸಂವಿಧಾನ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗ ಉತ್ತಮ ಕಾರ್ಯ ಮಾಡುವ ಮೂಲಕ ಪಕ್ಷಬೇಧ ಭಾವ ಮಾಡದೆ ಸಮಾನ ಸ್ಥಿತಿಯಲ್ಲಿ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ನಿಲುವಿಗೆ ನಿಲ್ಲಬೇಕು, ಅದೇ ರೀತಿಯಲ್ಲಿ ಇಂದು ಪತ್ರಕರ್ತರ ಗೋಳನ್ನು ಯಾವ ಸರಕಾರಗಳು ಕೇಳುವುದಿಲ್ಲ ಈಗೀನ ಕಾಂಗ್ರೇಸ್ ನೇತೃತ್ವದ ಸರಕಾರ ರಾಜ್ಯದ 15 ಸಾವಿರ ಪತ್ರಕರ್ತರಲ್ಲಿ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ ಬಸ್ ಪಾಸ್ ನೀಡಿದೆ ಆದರೆ ಹಲವು ಮಾನದಂಡಗಳ ಮೂಲಕ ಹಿಂದೆ ಸರಿಯುವಂತಾಗಿದೆ. ಆದ್ದರಿಂದ ಮಾನದಂಡಗಳನ್ನು ಸಡಿಲಿಕೆ ಮಾಡಬೇಕು, ಸ್ಥಳೀಯ ಪತ್ರಕರ್ತರಿಗೆ ನಿವೇಶನ ನೀಡಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆಎಂ.ನಾಗರಾಜ್ ಮಾತನಾಡಿ, ಸಾಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಪತ್ರಿಕೆ ಮಾಡುತ್ತಿದೆ ಅಂತಹ ಪತ್ರಿಕಾ ರಂಗವನ್ನು ನಾವು ಸಂವಿಧಾನದ ನಾಲ್ಕನೆ ಅಂಗವಾಗಿ ಪರಿಗಣಿಸಿದ್ದೆವೆ, ಪೊಲೀಸ್ ಇಲಾಕೆ ಖಾಕಿ ತೊಟ್ಟು ಸಾರ್ವಜನಿಕರ ಸೇವೆ ಮಾಡಿದರೆ ಖಾಕಿ ಇಲ್ಲದೆ ದಿನದ ಇಪ್ಪತ್ತುನಾಲ್ಕು ಗಂಟೆಗಳ ಕಾಲ ಸಾಮಾಜದ ಹಾಗುಹೊಗುಗಳ ಬಗ್ಗೆ ಮಾಹಿತಿ ಪಡೆದು ಬೆಳಕು ಚೆಲ್ಲುವ ಕಾರ್ಯ ಪತ್ರಕರ್ತರು ಮಾಡುತ್ತಿದ್ದಾರೆ, ಅದರಂತೆ ಪತ್ರಕೆಗಳ ಪಾತ್ರ ಬಹಳಮುಖ್ಯವಾಗಿದೆ ಎಂದರು.

ನಗರಸಭೆ ನೂತನ ಅಧ್ಯಕ್ಷೆ ಬಿ.ಶಿಲ್ಪ ಮುರುಳಿಧರ್ ಮಾತನಾಡಿ, ಸಮಾಜದ ನಾಲ್ಕನೆ ಅಂಗ ಪತ್ರಿಕಾ ರಂಗ ಅದು ಮೂರು ಅಂಗಗಳನ್ನು ಬಹಳ ತೀಕ್ಷ್ಣವಾಗಿ ಮಾಡುವುದರಿಂದ ಇಂದು ಸಮಾಜದಲ್ಲಿ ಸ್ವಲ್ಪ ಮಟ್ಟಿಗೆ ಬ್ರಷ್ಟಚಾರ, ಕೋಮು ದ್ವೇಷಗಳನ್ನು ಮಟ್ಟಹಾಕಲಿಗೆ ಸಹಯಾಕಾರಿಯಾಗಿವೆ, ಇನ್ನೂ ಪ್ರತಿಕೆ ತನ್ನದೇ ರೀತಿಯಲ್ಲಿ ಪ್ರತಿಕಾ ವೃತ್ತಿ ಅವಲಂಬಿಸಿದೆ ಎಂದು ಹೇಳಿದರು.

ಪತ್ರಕರ್ತರು, ಸಾಹಿತಿಗಳಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಪತ್ರಕರ್ತರು ತಮ್ಮ ಸಮಗ್ರ ಲೇಖನದ ಮೂಲಕ ಸಮಾಜಕ್ಕೆ ಆಗುತ್ತಿರುವ ಅನ್ಯಾಯ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ರಾಜಕೀಯದವರಿಂದ ದೊರವಿದ್ದು ಜನರ ಸಮಸ್ಯಗಳಿಗೆ ಸ್ಪಂಧಿಸುವ ಕೆಲಸವಾಗಬೇಕು. ಪತ್ರಕರ್ತರು ವಿಮರ್ಶೆ, ವಿಶ್ಲೇಷಣೆ, ತನಿಖೆ ವರದಿಗಳನ್ನು ಬರೆಯುವುದರ ಮೂಲಕ ಗಂಭೀರ ಸಮಸ್ಯೆಗಳ ಸಮಗ್ರ ವರದಿ ಮಾಡುವ ಮೂಲಕ ಸರ್ಕಾರಕ್ಕೆ ತಲುಪುವಂತೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಶಶಿಕಲಾ ಕಂದಿಕೆರೆ ಸುರೇಶ್ ಬಾಬು ಮಾತನಾಡಿ, ನಾಡಿನ ಎಲ್ಲಾ ಸಮುದಾಯಗಳ ಜತೆಗೆ ಸಾಮರಸ್ಯ ಉಳಿಸಿಕೊಂಡು ಸಾಮಾಜದಿಂದ ದೂರವಿರುವ ವಿವಿಧ ಸಮುದಾಯದ ಏಳಿಗೆಗೆ ಪತ್ರಿಕೆ ಶ್ರಮಿಸುತ್ತಿದೆ. ಸಾಮಾಜದ ಅಂಕುಡೊಂಕು ಗಳನ್ನು ತಿದ್ದುವ ಮೂಲಕ ಸಾಮಾಜಮುಖಿ ಕಾರ್ಯ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ, ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ, ಉಪಾಧ್ಯಕ್ಷೆ ಕವಿತಾ, ಸದಸ್ಯ ಮಂಜುಳಾ,
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಹೊನ್ನೂರು ಮಾರಣ್ಣ,
ಗೌರವಾಧ್ಯಕ್ಷ ಡಿ.ವೀರಣ್ಣ, ಕಾರ್ಯದರ್ಶಿ ಮಂಜುಜಾಲಿ, ನಾಗರಾಜ್, ಜಿ.ಆರ್.ತಿಪ್ಪೇಸ್ವಾಮಿ, ಮಹಂತೇಶ್, ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಶಂಕರ್, ಜಿಲ್ಲಾಧ್ಯಕ್ಷ ಆರ್.ದ್ಯಾಮರಾಜ್, ದಿನೇಶ್, ಲತೇಶ್ ಜೈನ್, ಆರೋಗ್ಯ ಇಲಾಖೆ ತಿಪ್ಪೇಸ್ವಾಮಿ,
ಇದ್ದರು.

ಸನ್ಮಾನಿತರಾದ ಪತ್ರಕರ್ತರಾದ ರಾಮಾಂಜನೇಯ ಕೆ. ನಗರಸಭೆ ಅಧ್ಯಕ್ಷೆ ಶಿಲ್ಪ, ಹಾಗೂ ಸಮಾಜ ಸೇವಕರಿಗೂ ಸನ್ಮಾನಿಸಿದರು.

ಪೋಟೋ, ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರತಿಕಾ ದಿನಾಚರಣೆಯ ಉದ್ಘಾಟನೆಯನ್ನು ಶಾಸಕ ಟಿ.ರಘುಮೂರ್ತಿ ನೆರೆವೆರಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading