
ಚಳ್ಳಕೆರೆ ಜು20
ಪ್ರಸ್ತುತ ದಿನಗಳಲ್ಲಿ ರೋಗಮುಕ್ತ ಜೀವನ ನಡೆಸಲು
ಮುಂಜಾಗ್ರತಾ ಕ್ರಮ ಅನುಸರಿಸುವುದು ಮುಖ್ಯವಾಗಿದೆ.
ಕಾಯಿಲೆಗಳು ದೇಹ ಪ್ರವೇಶಿಸುವುದು ಕೆಲವರಿಗೆ
ಗೊತ್ತಾಗಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಕಾಲದಲ್ಲಿ
ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು
ನಗರದ ಗ್ರಾಮ ಆಫೀಸ್ ಬಳಿ ಇರುವ ಸಿಜೆ ಎಸ್ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಹೃದಯ. ಸಕ್ಕರೆ ಕಾಯಿಲೆ ತಪಾಸಣೆ ಹಾಗೂ ನುರಿತ ಹೃದಯ. ಸಕ್ಕರೆ ತಜ್ಞ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರು.
ಸರಕಾಗಳು ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಜತೆಗೆ ವಿವಿಧ ಸಂಘ ಸಂಸ್ಥಳು ಉಚಿತ ಅರೋಗ್ಯ ಸೇವೆ ನೀಡಲು ಮನೆ ಬಾಗಿಲಿಗೆ ಬರುತ್ತಿದ್ದು ಇಂತಹ ಆರೋಗ್ಯ ಶಿಭಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸದೃಢ ಆರೋಗ್ಯವಂತರಾಗುವಂತೆ ತಿಳಿಸಿದರು.
ಹೃದಯ ತಜ್ಞ. ಜಯದೇವ ಹೃದಯ ಸಂಶೋಧನಾ ಕೇಂದ್ರದ ನಿರ್ಧೇಶಕ ಕೆ.ಎಸ್ ರವೀಂದ್ರನಾಥ್ ಮಾತನಾಡಿ
ಕೆಲಸದ ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದ ಹೃದಯಾಘಾತ ಸಂಭವಿಸುತ್ತಿದೆ. ಆದ್ದರಿಂದ 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು
ಆರೋಗ್ಯವೇ ಮಹಾಭಾಗ್ಯ ಎಂಬಂತೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳ ಒತ್ತಡದ ನಡುವೆ ಆರೋಗ್ಯಕ್ಕೆ ಹೆಚ್ಚುಗಮನ ಹರಸಬೇಕು. ಅಗತ್ಯ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಅಂದಾಗ ಮಾತ್ರ ಆರೋಗ್ಯವಂತ ಜೀವನ ನಡೆಸಲು ಸಾಧ್ಯ.
ಎದೆ ನೋವು, ಎದೆಯುರಿ ಬಂದಾಗ ಗ್ಯಾಸ್ಟ್ರಿಕ್ ಎಂದು ಉದಾಸೀನ ಮಾಡದೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಕ್ಕಳಿಗೆ ಮನೆಯಲ್ಲಿ ಉತ್ತಮ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಬೇಕು. ಇದರಿಂದ ಮುಂದೆ ಅವರಿಗೆಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವುದನ್ನು ತಪ್ಪಿಸಬಹುದು ಎಂದು ಹೇಳಿದರು.










ಫಿಜಿಷಿಯನ್, ಹೃದಯ ರೋಗ ಮತ್ತು ಡಯಾಬಿಟಿಸ್ ಸಲಹಾ ತಜ್ಞಆರ್, ಮುದ್ದ ರಂಗಪ್ಪ ಮಾತನಾಡಿ ಸಕ್ಕರೆ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಯಲ್ಲ ದಿನನಿತ್ಯ ಸೇವಿಸುವ ಆಹಾರ ಪದ್ದತಿ ಅನುವಂಶಿಯತೆ ಯಿಂದ ಬರುತ್ತದೆ ಸಕಾಲಕ್ಕೆ ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಮಕ್ಕಳ ತಜ್ಞ ಡಾಹನುಮಂತಪ್ಪ .ನೀವೃತ್ತ ಪ್ರಾಚರ್ಯ ವಿದ್ಯಾಂಸ ಮಿರಸಾಬಿಹಳ್ಳಿ ಶಿವಣ್ಣ ಅಭಿನಂದನಾ ನುಡಿದರು. ಸಿಜಿಎಸ್ ಆಸ್ಪತ್ರಯ ವ್ಯವಸ್ಥಾಪಕ ಕಾರ್ಯದರ್ಶಿ ಶಿವಲಿಂಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಹೃದಯ ರೋಗತಜ್ಞ ನಿರ್ದೇಶಕ ಡಾ ಕೆ.ಎಸ್.ರವೀಂದ್ರನಾಥ್ ಇವರಿಗೆ ಸಿಜಿಎಸ್ ಆಸ್ಪತ್ರೆ ವತಿಯಿಂದವೈದ್ಯ ಚಿನ್ಮಯಿ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ.ಉಪಧ್ಯಕ್ಷೆ ಕವಿತ.ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಸದಸ್ಯರಾದ ಸುಮ.ಸುಜಾತ.ಮಂಜುಳ. ಸಾಹಿತಿ ಮರಿಕುಂಟೆ ತಿಪ್ಪಣ್ಣ ಅನುವಾದಕ ಶರಣಪ್ಪ ಇತರರಿದ್ದರು.
.
About The Author
Discover more from JANADHWANI NEWS
Subscribe to get the latest posts sent to your email.