July 13, 2025
1750425455339.jpg


ಹಿರಿಯೂರು:
ಅರಣ್ಯ ಸಂಪತ್ತಿನ ಸುಸ್ಥಿರ ಬಳಕೆಯಿಂದ ಬುಡಕಟ್ಟು ಸಮುದಾಯವು ಅಭಿವೃದ್ಧಿ ಆಗಬೇಕು ಎಂಬುದಾಗಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಯೋಗೇಶ್ವರಪ್ಪ ಅವರು ಹೇಳಿದರು.
ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿ ಹಿರಿಯೂರು, ಇದರ ಅಡಿಯಲ್ಲಿ ರಚಿಸಿರುವ ಶ್ರೀ ವಾಣಿವಿಲಾಸ ವನಧನ ವಿಕಾಸ ಕೇಂದ್ರವನ್ನು ಎನ್.ಆರ್. ಎಲ್.ಎಂ.ಜಿಲ್ಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಉಪಉತ್ಪನ್ನಗಳು ಕಡಿಮೆ ಇರುವುದರಿಂದ ಬುಡಕಟ್ಟು ಸಮುದಾಯದ ಜನರು ಬೆಳೆಯುವ ಬೆಳೆಗಳ ಉಪ ಉತ್ಪನ್ನಗಳನ್ನು ಮೌಲ್ಯ ವರ್ಧನೆ ಮಾಡುವುದು, ಜೀವನೋಪಾಯ ಹೆಚ್ಚಿಸುವುದು ಮತ್ತು ಉದ್ಯಮಶೀಲತೆಯನ್ನು ಬೆಳೆಸುವುದು ಅರಣ್ಯ ಸಂಪತ್ತಿನ ಸುಸ್ಥಿರ ಬಳಕೆಯಿಂದ ಬುಡಕಟ್ಟು ಸಮುದಾಯಗಳ ಸಬಲೀಕರಣ ಮಾರುಕಟ್ಟೆ ಸಂಪರ್ಕಗಳು.
ವನದನ್ ವಿಕಾಸ ಕೇಂದ್ರ ಜೀವನೋಪಾಯವನ್ನು ಸುಧಾರಿಸಲು ಸ್ಥಾಪಿಸಲಾಗಿರುವ ಒಂದು ಉಪಕ್ರಮವಾಗಿದ್ದು ಉತ್ಪನ್ನಗಳ ಮೌಲ್ಯವರ್ಧನೆ ಮಾರುಕಟ್ಟೆ ಮತ್ತು ಮಾರಾಟದ ಮೇಲೆ ಗಮನ ಹರಿಸುತ್ತದೆ ಸಾಂಪ್ರದಾಯಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂಬುದಾಗಿ ಅವರು ಹೇಳಿದರು.
ಪ್ರಧಾನಮಂತ್ರಿ ವನಧನ ಯೋಜನೆಯಡಿಯಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಬುಡಕಟ್ಟು ಜನಾಂಗದ ಏಳಿಗೆಗಾಗಿ ಪರಿಶಿಷ್ಟ ಪಂಗಡದ ಸ್ವ-ಸಹಾಯ ಸಂಘದ 300 ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿ ಈ ಕೇಂದ್ರವನ್ನು ರಚಿಸಲಾಗಿದೆ.
ಐಮಂಗಲ ಪಂಚಾಯಿತಿಯ ಪಂಚಾಯಿತಿ ಪಿ.ಡಿ.ಒ. ಅವರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವ ಸಹಾಯ ಸಂಘದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದುವರೆಯಲು ಇಂತಹ ಕಾರ್ಯಕ್ರಮಗಳನ್ನು ಸಕಾ೯ರ ಜಾರಿಗೆ ತಂದಿದ್ದು ಇದರ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಹಾಗೂ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂಬುದಾಗಿ ಅವರು ಶುಭ ಹಾರೈಸಿದರು.
ಎನ್.ಆರ್.ಎಲ್.ಎಂ.ನ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಮೊಹಮ್ಮದ್ ಸೈಫ್ಫುದ್ದಿನ್ ರವರು ಮಾತನಾಡಿ ಸಂಘದ ಮಹಿಳೆಯರಿಗೆ ಉದ್ಯಮಶೀಲತೆ ಅಭಿವೃದ್ಧಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಇದನ್ನು ಸರಿಯಾಗಿ ಬಳಸಿಕೊಂಡು ಮುಂದುವರಿಯಬೇಕು ಎಂಬುದಾಗಿ ಅವರು ಹೇಳಿದರು.
ತಯಾರಿಸುವ ಉತ್ಪನ್ನಗಳ ಪ್ಯಾಕೇಜಿಂಗ್ ಹಾಗೂ ಬ್ರಾಂಡಿಂಗ್, ಎಫ್.ಎಸ್.ಎಸ್. ಎ.ಐ. ಸರ್ಟಿಫಿಕೇಟ್ ಮಾಡಿಸಿ ಮಾರಾಟ ಮಾಡಲು ತಿಳಿಸಿದರು. ಮಹಿಳೆಯರು ಸ್ವಾವಲಂಬಿ ಜೀವನ ಸಾಧಿಸಲು ವನಧನ ವಿಕಾಸ ಕೇಂದ್ರವು ಸಹಕಾರಿಯಾಗಿದೆ ಎಂಬುದಾಗಿ ಅವರು ಹೇಳಿದರು.
ಸ್ವ-ಸಹಾಯ ಸಂಘದ ಮಹಿಳೆಯರು ಅತಿ ಹೆಚ್ಚಾಗಿ ಆಸಕ್ತಿ ತೋರಿಸಿ ಈ ಕಾರ್ಯಕ್ರಮವನ್ನು ಇನ್ನು ಅತ್ಯುತ್ತಮ ಮಟ್ಟಕ್ಕೆ ತಲುಪಲು ಸದಸ್ಯರ ಭಾಗವಹಿಸುವಿಕೆ ಹಾಗೂ ಇದರ ಉಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು
ಈ ಕಾರ್ಯಕ್ರಮದಲ್ಲಿ ಪಿ.ಡಿ.ಒ ಈರಣ್ಣ, ಮೊಹಮ್ಮದ್ ಸೈಫ್ಫುದ್ದಿನ್ , ರಾಘವೇಂದ್ರ, ಲಕ್ಷ್ಮಣ್, ಸರಸ್ವತಿ, ವಸಂತಮ್ಮ, ಸಿದ್ದಮ್ಮ, ದಿನ್ ವನಧನ ವಿಕಾಸ ಕೇಂದ್ರದ ಅಧ್ಯಕ್ಷರು, ಕಾರ್ಯದರ್ಶಿ, ಎನ್.ಆರ್. ಎಲ್.ಎಂ ನ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿಗಳು, ತಾಲ್ಲೂಕು ಸಿಬ್ಬಂದಿಗಳ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading