
ಚಿತ್ರದುರ್ಗ ಜೂ.20:
ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದಲ್ಲಿ ಪಾಯನಿಯರ್ ಕಂಪನಿಯ ಪಿ-34407 ಬೀಜಗಳನ್ನು ಬಿತ್ತಿರುವ ರೈತರ ಹೊಲಗಳಿಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಬಿತ್ತನೆ ಕಾರ್ಯವೂ ಸಹ ಭರದಿಂದ ನಡೆದಿದೆ. ಇದರ ನಡುವೆ ಚಿಕ್ಕಬೆನ್ನೂರಿನ ಕೆಲ ರೈತರ ಹೊಲದಲ್ಲಿ ಬಿತ್ತಿದ ಪಾಯನಿಯರ್ ಕಂಪನಿಯ ಮೆಕ್ಕಜೋಳ ಬೀಜಗಳು ಕಡಿಮೆ ಪ್ರಮಾಣದಲ್ಲಿ ಮೊಳಕೆಯೊಡೆದಿವೆ. ಈ ಕುರಿತು ರೈತರು ದೂರು ನೀಡಿದ್ದಾರೆ. ಚಿತ್ರದುರ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಭರಮಸಾಗರ ಕೃಷಿ ಅಧಿಕಾರಿಗಳ ತಂಡ ರೈತರ ಹೊಲಗಳಿಗೆ ಭೇಟಿ ಪರಿಶೀಲನೆ ನಡಿಸಿದೆ. ಪಾಯನಿಯರ್ ಕಂಪನಿಯ ಬಿತ್ತನೆ ಮಾಡಿರುವ ವಿವಿಧ ಲಾಟ್ ಸಂಖ್ಯೆಯ ಬೀಜ ಮಾದರಿಗಳನ್ನು ದಾವಣಗೆರೆಯ ಬೀಜ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವಿಜ್ಞಾನಿಗಳು ಹಾಗೂ ಪ್ರಯೋಗಾಲದ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು.
ಜಿಲ್ಲೆಯಲ್ಲಿ ಮೆಕ್ಕೆಜೋಳ- 72, ಹೈಬ್ರಿಡ್ ಹತ್ತಿ-13, ಹೈಬ್ರಿಡ್ ಜೋಳ-02, ತೋಗರಿ-11, ಹೆಸರು-12, ಸೂರ್ಯ ಕಾಂತಿ-1, ಅಲಸಂದೆ-11 ಮತ್ತು ಶೇಂಗಾ-15 ಒಟ್ಟು 137 ಬಿತ್ತನೆ ಬೀಜದ ಮಾದರಿಗಳನ್ನು ತೆಗೆದು ಗುಣಮಟ್ಟದ ವಿಶ್ಲೇಷಣೆಗೆ ಬೀಜ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿರುತ್ತದೆ. ಈ ಬಿತ್ತನೆ ಬೀಜದ ಮಾದರಿಗಳು ಉತ್ತಮ ಮೊಳಕೆ ಪ್ರಮಾಣ ಕಂಡುಬAದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೀಜದ ಮಾದರಿಗಳು ಪ್ರಯೋಗಾಲಕ್ಕೆ ಕಳುಹಿಸಕೊಡುವುದಾಗಿ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.