
ಚಳ್ಳಕೆರೆ ಜೂ.20 ರಸಗೊಬ್ಬ ಮಾರಾಟಗಾರರು ನಿಗಧಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಹಾಗ ದರ ಪಟಿ ಹಾಕದಿದ್ದರೆ ಪರವಾನಿಗೆ ರದ್ದು ಮಾಡಲಾಗುವುದು ಎಂದು ಕೃಷಿ ಜಂಟಿ ನಿರ್ದೇಶಕ ಹಾಗೂ ತಾಪಂ ಆಡಳಿತ ಅಧಿಕಾರಿ ಡಾ.ಮಂಜುನಾಥ್ ಹೇಳಿದರು.








ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಖಾಸಗಿ ಶಾಲೆಗಳಲ್ಲಿ 1ರಿಂದ9 ನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಶೈಕ್ಷಣಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಹತ್ತನೇ ತರಗತಿಗೆ ವರ್ಗಾವಣೆ ಪತ್ರ ನೀಡಿದರೆ ಅಂತಹ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದರು.
ಖಾಸಗಿ ಶಾಲೆಯವರು ಹಿಂದುಳಿದ ವಿದ್ಯಾರ್ಥಿಗಳನ್ನು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕಡಿಮೆ ಫಲಿತಾಂಶ ಬರುವ ಉದ್ದೇಶದಿಂದ ವರ್ಗಾವಣೆ ಪತ್ರವನ್ನು ನೀಡಿ ಸರ್ಕಾರಿ ಶಾಲೆಗೆ ಸೇರುವಂತೆ ಮಾಡುವ ದಂಧೆ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಠಿಣ ನಿಯಮಗಳನ್ನು ಜಾರಿಗೆ ತಂದು ವಿದ್ಯಾರ್ಥಿಯು ಅದೇ ಶಾಲೆಯಲ್ಲಿ ಮುಂದುವರೆಯುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ತಾಪಂ ಇಒ ಮಾತನಾಡಿ ನಾನು ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ 1 ನೇ ತರಗತಿ ಮಕ್ಕಳಿಗೆ ಓದಲು ಬರೆಯಲು ಬರುವುದಿಲ್ಲ ಅನುಭವಿ ಹಾಗೂ ನುರಿತ ಶಿಕ್ಷಕರನ್ನು ನೇಮಿಸಿ ಬೋಧನೆ ಮಾಡಿಸಿಸುವಂತೆ ಸಲಹೆ ನೀಡಿದರು..
ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಮಾಹಿತಿ ನೀಡಿ ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದರೆ ಅಂತಹ ಶಾಲೆಗಳ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗದಂತೆ ಕ್ರಮ ವಹಿಸಲಾಗುವುದು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಸುಧಾರಣೆಗೆ ಸಂಕಲ್ಪ ಯೋಜನೆ 20 ಅಂಶಗಳ ಕಾರ್ಯಕ್ರಮ ಶಿಕ್ಷಕರಿಗೆ ಪುನಸ್ಚೇತನ ತರಬೇತಿ ಕಾರ್ಯಕ್ರಮ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದು ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿ: ಹಾಸ್ಟೆಲ್ ಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಉಳಿಯುವ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಗುಟ್ಕ ಸೇರಿದಂತೆ ಅನೇಕ ದುಷ್ಟಟಗಳಿಗೆ ಬಲಿಯಾಗಿ ಹಾಸ್ಟೆಲ್ ಗಳ ಗೋಡೆಗಳ ಮೇಲೆ ಉಗುಳುತ್ತಿರುವುದು ಕಂಡು ಬದಿದೆ ಎಂದು ತಾಲೂಕು ಪಂಚಾಯತಿ ಈವ ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದರು.
ಹಾಸ್ಟೆಲ್ ನಿರ್ವಹಣೆಯ ಅಧಿಕಾರಿಗಳಿಂದ ಮಾಹಿತಿ ಪಡೆಯುವ ವೇಳೆ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗುತ್ತದೆ ಶಿಸ್ತು ಇಲ್ಲದವರನ್ನು ಪೋಷಕರ ಗಮನಕ್ಕೆ ತಂದು ಮೊಲಾಜಿ ಇಲ್ಲದೆ ಹಾಸ್ಟೆಲ್ ಗಳಿಂದ ಹೊರಹಾಕಿ ಇದರಿಂದ ಉಳಿದ ವಿದ್ಯಾರ್ಥಿಗಳಾದರು ಉದ್ಧಾರವಾಗಲು ಸಾಧ್ಯವಾಗುತ್ತದೆ ಪ್ರೌಢ ಅವಸ್ಥೆಯಲ್ಲಿ ವಿದ್ಯಾರ್ಥಿಗಳು ದುಷ್ಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಸಂಗತಿಯಗಿದೆ ವಿದ್ಯಾರ್ಥಿಗಳಲ್ಲಿ ಮೌಲ್ಯವರ್ಧಿತ ಶಿಕ್ಷಣ ನೀಡುವುದು ಮುಖ್ಯವಾಗಿದೆ ಅವರಲ್ಲಿ ದುಷ್ಟಗಳಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿ ನಿಲಯದ ಪಾಲಕರು ಸೇರಿದಂತೆ ಅಧಿಕಾರಿಗಳು ವಿದ್ಯಾರ್ಥಿಗಳ ಕಡೆಗೆ ಹೆಚ್ಚಿನ ಗಮನಹರಿಸಿ ಮೂಡುವಂತೆ ಮಾಡಬೇಕು ಶಿಸ್ತು ಮತ್ತು ಬುದ್ಧಿವಂತಿಕೆ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದ ಗೂಡಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಪಿಡಿಒ ಅಧಿಕಾರಿಗಳು ಮಾಹಿತಿ ನೀಡಿದರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಆರ್ ಓ ಪ್ಲಾಂಟ್ ಗಳ ನಿರ್ವಹಣೆ ಮಾಡದಿದ್ದರೆ ಬರವಣಿಗೆಯಲ್ಲಿ ಪತ್ರ ನೀಡಿ: ನೀರು ಸರಬರಾಜು ಇಲಾಖೆ ಅಧಿಕಾರಿ ಕಾರ್ತಿಕ್ ಮಾಹಿತಿ ನೀಡುವಾಗ ಆರ್ ಓ ಪ್ಲಾಂಟ್ ಗಳ ಪೈಕಿ 64 ಪ್ಲಾಂಟ್ ಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಅದನ್ನು ಅವರೇ ನಿರ್ವಹಿಸಬೇಕು ಎಂದಾಗ ಅಸಮಾಧಾನಗೊಂಡ ಈಓ ಶಶಿಧರ್ ಆರ್ ಓ ಪ್ಲಾಂಟ್ ಗಳನ್ನು ವಿವಿಧ ಕಾರಣಗಳಿಗೆ ಗ್ರಾಮ ಪಂಚಾಯಿತಿಗಳು ನಿರ್ವಹಣೆ ಮಾಡದಿದ್ದಾಗ ನೀವು ನಿರ್ವಹಣೆ ಮಾಡದಿದ್ದರೆ ಯಾರು ಅದಕ್ಕೆ ಹೊಣೆಯಾಗುತ್ತಾರೆ ಈಗಾಗಲೇ ಹಲವು ಕೆಡಿಪಿ ಸಭೆಗಳಲ್ಲಿ ಶಾಸಕರು ಆರ್ ಓ ಪ್ಲಾಂಟ್ ಗಳನ್ನು ನಿರ್ವಹಣೆ ಮಾಡುವಂತೆ ತಿಳಿಸಿದ್ದರೂ ಸಹ ನಿರ್ಲಕ್ಷ ವಹಿಸುತ್ತಿರುವುದು ಸರಿಯಲ್ಲ ನಿಮ್ಮಿಂದ ನಿರ್ವಹಣೆ ಮಾಡಲಾಗದಿದ್ದರೆ ಬರವಣಿಗೆಯಲ್ಲಿ ತಮಗೆ ಪತ್ರ ನೀಡುವಂತೆ ತಿಳಿಸಿದರು.
ಸಹಾಯಕ ಕೃಷಿ ನಿರ್ಧೇಶಕ ಅಶೋಕ್ ಸಭೆ ಮಾಹಿತಿ ನೀಡುತ್ತ ಮಳೆ ಕೊರತೆಯಿಂದಾಗಿ ರೈತರು ಶೇಂಗಾ ಬಿತ್ತನೆ ಮಾಡಲು ಮುಂದಾಗದೆ ತೊಗರಿ ಬಿತ್ತನೆ ಮಾಡಲು ಮುಂದಾಗಿದ್ದು ತೊಗರಿ ಬೀಜಕ್ಕೆ ಬೇಡಿಕೆ ಇದೆ.ಕೃಷಿ ಇಲಾಖೆಯ ಖರೀದಿಗೆ ಯಾರು ಮುಂದೆ ಬರುತ್ತಿಲ್ಲ ರೈತರಿಗೆ ಅಗತ್ಯ ಬೀಜ ಗೊಬ್ಬರ ದಾಸ್ತಾನು ಇದೆ ಎಂದು ತಿಳಿಸಿದರು.
ಸಭೆಯಲ್ಲಿ ತೋಟಗಾರಿಕೆ ಅಧಿಕಾರಿ ಕುಮಾರ್ ನಾಯ್ಕ. ಪಶು ಇಲಾಖೆ ಶ್ರೀನಿವಾಸ್ ಬಾಬು.ಶಿಶು ಅಭಿವೃದ್ಧಿ ಅಧಿಕಾರಿ ರಾಜನಾಯ್ಕ. ಕಾರ್ಮಿಕ ನಿರೀಕ್ಷಕಿ ಕುಸುಮ. ಸಮಾಜ ಕಲ್ಯಾಣ ಅಧಿಕಾರಿ ದೇವ್ಲನಾಯ್ಕ.ಎಸ್ಟಿ ಇಲಾಖೆ ಶಿವರಾಜ್. ಬಿಸಿಎಂ ಅಧಿಕಾರಿ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.
About The Author
Discover more from JANADHWANI NEWS
Subscribe to get the latest posts sent to your email.