July 12, 2025
IMG-20250520-WA0220.jpg


ವರದಿ : ಕೆ.ಟಿ ಓಬಳೇಶ ನೆಲಗೇತನಹಟ್ಟಿ
ನಾಯಕನಹಟ್ಟಿ :
ಸಮಾಜದಲ್ಲಿ ಗಂಡು ಹೆಣ್ಣು ಬೇದಭಾವ ಇರಬಾರದು ಮಹಿಳೆರನ್ನು ಗೌರವದಿಂದ ಕಾಣಬೇಕು ಎಂದು ಮೇಲಾಚ್ವಾರಕಿ ನಾಗರತ್ನಮ್ಮ ಹೇಳಿದರು.
ಮಂಗಳವಾರ ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಮತ್ತು ಜೀವನಾಪಯ ಇಲಾಖೆ , ಆರೋಗ್ಯ ಇಲಾಖೆ ಮತ್ತು ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯ್ತುಕಾಶ್ರಯದಲ್ಲಿ ನವೋದಯ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ವತಿಯಿಂದ ಸಮಾಜಿಕ ಸೇರುಪಡೆ ಆದೋಲನ ಮತ್ತು ಲಿಂಗತ್ವ ಆಧಾರಿತ ದೌಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ ಕಾರ್ಯಕ್ರಮದಲ್ಲಿ ಜ್ಯೊತಿ ಬೆಳೆಗುವ ಮೂಲಕ ಉಧ್ಘಾಟಿಸಿ ಮಾತಾನಾಡಿದವರು, ಮಹಿಳೆಯರು ಉತ್ತಮ ಪೌಷ್ಠಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ದಿನಕ್ಕೆ ಒಂದು ಮೊಟ್ಟೆ, ತರಕಾರಿ, ಹಣ್ಣು, ಸೇವನೆ ಮಾಡಿದಾಗ ಮಾತ್ರ ಯಾವುದೇ ರೋಗಿಗಳಿಗೆ ತುತ್ತಾಗುವ ಪರಿಸ್ಥಿತಿ ಬರುವುದಿಲ್ಲ ಮಹಿಳೆಯರನ್ನು ಗೌವರಿಸಬೇಕು ಗಂಡು ಹೆಣ್ಣು ಎಂಬ ತಾರತಮ್ಯ ಇರಬಾರದು ಎಂದರು.
ಇದೇ ವೇಳೆ ತಾಲ್ಲೂಕು ಆರೋಗ್ಯ ಇಲಾಖೆ ಕುದಾಪುರ ಎಸ್‌ ಬಿ ತಿಪ್ಪೇಸ್ವಾಮಿ ಮಾತನಾಡಿದರು ಗ್ರಾಮೀಣ ಪ್ರದೇಶ ಬಡಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆರೋಗ್ಯ ವಿಮೆ ಸೌಲಭ್ಯ, ಸಾರಿಗೆ ಸೌಲಭ್ಯ, ಉಚಿತ ಚಿಕಿತ್ಸೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಎಂ ಹೆಚ್‌ ಲಕ್ಷ್ಮಣ, ಸದಸ್ಯೆ ಸರೋಜಮ್ಮ, ತಾಲ್ಲೂಕು ವ್ಯವಸ್ಥಾಪಕ ಕೃಷಿಯೇತರ ತಾಲ್ಲೂಕು ಪಂಚಾಯಿತಿ ಜೆ ತಿಪ್ಪೇಸ್ವಾಮಿ, ನವೋದಯ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸದಸ್ಯರಾದ ಎಂ ಬಿ ಕೆ ಶ್ರೀಮತಿ ಸುನೀತಾ, ಪಶುಸಖಿ ಶ್ರೀಮತಿ ರತ್ನಮ್ಮ, ಕೃಷಿಸಖಿ ಶ್ರೀಮತ ಜ್ಯೋತಿ, ಬಿಸಿಸಖಿ ಮುತ್ತಮ್ಮ ಸೇರಿದಂತೆ ಅಂಗನವಾಡಿ ಶಿಕ್ಷಕಿಯರಾದ ಮಂಜಮ್ಮ, ಅನಿತಮ್ಮ, ಶಿಲ್ಪ, ಗ್ರಾಮಸ್ಥರು ಉಪಸ್ಥಿತಿತರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading