
ವರದಿ: ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎನ್ ಉಪ್ಪಾರಹಟ್ಟಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ತಡೆಯುವಂತೆ ಗ್ರಾಮಸ್ಥರ ಮನೆಯನ್ನು ಆಲಿಸಿ ಜೂಜಾಟ ಬೆಟ್ಟಿಂಗ್ ಅಕ್ರಮ ಮಧ್ಯ ಮಾರಾಟ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಸ್ ಶಿರೇಹಳ್ಳಿ ಎಚ್ಚರಿಸಿದರು.







ನಂತರ ಮಾತನಾಡಿದ ಅವರು ಎನ್ ಉಪ್ಪಾರಹಟ್ಟಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಗ್ರಾಮದಲ್ಲಿ ಇನ್ನು ಯಾರು ಅಕ್ರಮ ಮಧ್ಯ ಮಾರಾಟ ಮಾಡುತ್ತಾರೆ, ಎಂಬ ಮಾಹಿತಿ ನೀಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವಾಹನಸವರು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿ ಹಾಗೂ ವಾಹನಗಳಿಗೆ ಇನ್ಸೂರೆನ್ಸ್ ಮಾಡಿಸಿ ಮತ್ತು ವಾಹನಸವರು ಚಾಲನಾ ಪರವಾನಿ ಪಡೆಯಬೇಕು. ಅಪ್ಪ ಅಪ್ಪ ಮಕ್ಕಳಿಗೆ ವಾಹನವನ್ನು ಚಾಲನೆಗೆ ನೀಡಬಾರದು ಎಂದು ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.
ನಂತರ ಮುಖಂಡ ಓಬಳೇಶ್ ಮಾತನಾಡಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಹಾವಳಿ ಹೆಚ್ಚಾಗಿದ್ದು, ಅದನ್ನು ತೊಡೆಯಬೇಕಿದೆ. ಇತ್ತೀಚಿನ ಯುವಕರು ಚಿಕ್ಕ ವಯಸ್ಸಿಗೆ ಮಧ್ಯ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಹದಗಿಡುತ್ತಿವೆ, ಅಕ್ರಮ ಮಧ್ಯ ಮಾರಾಟಗಾರರು ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಅಂತವರು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎನ್ ಉಪ್ಪಾರಹಟ್ಟಿ ಗ್ರಾಮದ ಮುಖಂಡರು,ಮಹಿಳೆಯರು, ಯುವಕರು ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.