September 14, 2025
IMG-20250420-WA0179.jpg

ನಾಯಕನಹಟ್ಟಿ:: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹಾಗೂ ಉಜ್ವಲ ಭವಿಷ್ಯಕ್ಕೆ ಉತ್ತಮ ಬದುಕಿಗೆ ಸ್ಪೂರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವು ಯೋಜನೆ ಜಾರಿಗೆ ತಂದಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಹೇಳಿದರು.

ಭಾನುವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆ ಶಾಲೆಯಲ್ಲಿ
ವಲಯದ ನಾಯಕನಹಟ್ಟಿ ಬಿ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಅವರು ಮಹಿಳೆಯರ ಉಜ್ವಲ ಬದುಕಿಗೆ ನೆರವಾಗಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘ ಹಾಗೂ ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಯಾವ ಬ್ಯಾಂಕ್ ಅಥವಾ ಫೈನಾನ್ಸಲ್ಲಿ ಸಾಲ ಸಿಗದಿರುವ ಬಗ್ಗೆ ಸದರಿ ಸದಸ್ಯರಿಗೆ ಮಾಹಿತಿ ನೀಡಿರುತ್ತಾರೆ ಸಂಘಗಳ ಗುಣಮಟ್ಟಗಳನ್ನು ಕಾಯ್ದುಕೊಂಡು ಹಾಗೂ ಈಗ ಹರಿದಾಡುತ್ತಿರುವ ಜಾಲತಾಣಗಳ ಬಗ್ಗೆ ಯಾವುದೇ ರೀತಿಯ ಸಂಶಯ ಬೇಡ ಅದು ಫೈನಾನ್ಸ್ ಗೆ ಮಾತ್ರ ಸೀಮಿತವಾಗಿರುವುದು ಧರ್ಮಸ್ಥಳ ಸಂಘಕ್ಕೆ ಅಲ್ಲ ಎಂಬುದನ್ನು ಸದಸ್ಯರಿಗೆ ಮನಮುಟ್ಟುವ ಹಾಗೆ ಪರಿವರ್ತನೆ ಮಾಡಿ ಮಾಹಿತಿ ನೀಡಿರುತ್ತಾರೆ .

ಈ ಸಭೆಯಲ್ಲಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ಆರ್. ಎನ್. ಶಶಿಕಲಾ ರವರು ಮಾತನಾಡಿದರು ವಾರದ ಸಭೆಯ ಗುಣಮಟ್ಟಗಳ ಬಗ್ಗೆ ದಾಖಲಾತಿ ನಿರ್ವಹಣೆ ಬಗ್ಗೆ ಹಣ ಸಂಗ್ರಹಣೆಯ ಸಮಯದ ಬಗ್ಗೆ ಗೊಂಚಲು ಸಭೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಯಿತು.

ಈ ಸಭೆಯಲ್ಲಿ ಒಕ್ಕೂಟ ಉಪಾಧ್ಯಕ್ಷರಾದ ಚಂದ್ರಮ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿ ಪಿ.ಬಿ.ಅಶ್ವಿನಿ ,ಸಂಘದ ಎಲ್ಲಾ ಸದಸ್ಯರು ಸೇರಿ ಈ ಒಕ್ಕೂಟ ಸಭೆಯನ್ನು ಯಶಸ್ವಿಗೊಳಿಸಲಾಯಿತು 💐

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading