September 14, 2025
IMG-20250420-WA0182.jpg

ಮಹಿಳೆಯರ ಸ್ಥಾನಮಾನ ಕೋಸ್ಕರ ತಮ್ಮ ಕಾನೂನು ಮಂತ್ರಿ ಪದವಿಯನ್ನು ಧಿಕ್ಕರಿಸಿ ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ರಾಜೀನಾಮೆ ನೀಡಿದ್ದು ಭಾರತದ ಇತಿಹಾಸದಲ್ಲಿ ಎಲ್ಲಾ ರಾಜಕಾರಣಿಗಳಿಗೂ ಕೂಡ ಆತ್ಮಾವಲೋಕನ ಮಾಡಿಕೊಳ್ಳುವಂತಹ ಸಂದರ್ಭ ಎಂದು ನಿವೃತ್ತ ಕೆಎಎಸ್ ಅಧಿಕಾರಿಯನ್ನು ರಘುಮೂರ್ತಿ ಹೇಳಿದರು
ಅವರು ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದಲ್ಲಿ ಗ್ರಾಮದ ಯುವಕರು ಆಯೋಜಿಸಿದ್ದ ಅಂತಹ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಾತ್ಮ ಗಾಂಧೀಜಿಯವರ ಬಗ್ಗೆ ಜನ ಪರ ವಿರೋಧದ ಮಾತನಾಡುತ್ತಾರೆ ಆದರೆ ಅಂಬೇಡ್ಕರ್ ಬಗ್ಗೆ ನಮ್ಮ ದೇಶದ ರಾಜಕೀಯ ನಾಯಕರು ತಮ್ಮ ಪಕ್ಷದ ಸೈಧ್ಯಾಂತಿಕ ಭಿನ್ನಾಭಿಪ್ರಾಯ ಇದ್ದರೂ ಕೂಡ ಎಲ್ಲರೂ ಭಾರತರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಒಪ್ಪುತ್ತಾರೆ ಶೋಷಿತರನ್ನು ಸಮಾಜದಿಂದ ಹೊರಗಿಡುವ ಕಾಲದಲ್ಲಿ ಸಮಾನತೆ ಮತ್ತು ಶಿಕ್ಷಣದ ಬಗ್ಗೆ ಅಂಬೇಡ್ಕರ್ ಅವರು ತುಂಬಾ ಕಳವಳ ವ್ಯಕ್ತಪಡಿಸಿದ್ದರು ಅವರ ಹುಟ್ಟಿನಿಂದ ಸ್ವಾತಂತ್ರದ ಪೂರ್ವದವರೆಗೆ ಅಸ್ಪೃಶ್ಯತೆ ಅವಮಾನ ಮತ್ತು ಅಸಮಾನತೆಯ ನೋವುಂಡು ಮುಂದೆ ರಾಜ್ಯಾಂಗದ ಮೂಲಕ ಯೋಜಿತರಿಗೆ ಬಡವರಿಗೆ ಮತ್ತು ಅಸಹಾಯಕರಿಗೆ ಅಮೃತವನ್ನು ನೀಡಿದಂತವರು ಪ್ರತಿ ಮನೆ ಪ್ರತಿ ಗ್ರಾಮ ಪ್ರತಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋಗಳಿವೆ ವಿಶ್ವದಲ್ಲಿ ಅವರಂತ ಮೇಧಾವಿ ಮತ್ತೊಬ್ಬರಿಲ್ಲ ಅಂತ್ಯದ ದಿನಗಳಲ್ಲಿ ಸರ್ಕಾರ ಮತ್ತು ಸಮಾಜ ಅವರನ್ನು ನಡೆಸಿಕೊಂಡಿರುವ ರೀತಿ ಅವರನ್ನು ತುಂಬಾ ಅಧೀರರನ್ನಾಗಿ ಮಾಡಿತ್ತು ಇದನ್ನು ಅವರ ಜೀವನ ಚರಿತ್ರೆಯಲ್ಲಿ ಕಾಣಬಹುದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರಿಗೆ ಈ ರಾಜ್ಯದ ಮೂಲಕ ಅಧಿಕಾರವನ್ನು ಪಡೆದಂತವರು ಬಡವರ ಕಲ್ಯಾಣಕ್ಕೆ ನಮ್ಮ ತಮ್ಮ ಅಧಿಕಾರವನ್ನು ಉಪಯೋಗಿಸದೆ ತಮ್ಮ ಸ್ವಾರ್ಥ ಬದುಕಿನೆಡೆಗೆ ಮುಖ ಮಾಡಿದ್ದು ಅವರಿಗೆ ತುಂಬಾ ನೋವುಂಟು ಮಾಡಿತ್ತು ಹಾಗೆಯೇ ಭಾರತ ರತ್ನ ಡಾ ಬಿಆರ್ ಅಂಬೇಡ್ಕರ್ ಅವರು ಕನಸು ಕಂಡಂತೆ ಶೋಷಿತ ಸಮುದಾಯದ ಎಲ್ಲರೂ ಕೂಡ ಬಡವರ ಕಲ್ಯಾಣಕ್ಕೆ ತಮ್ಮನ್ನು ಮುಡಿಪಾಗಿ ಇಡೋಣ ಎಂಬ ಸಂಕಲ್ಪವನ್ನು ಕೈಗೊಳ್ಳೋಣ ಎಂದು ಹೇಳಿದರು
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದಂತಹ ವಕೀಲರಾದ ಪರಮೇಶ್ವರಪ್ಪ ಮಾತನಾಡಿ ಪೋಷಕರಿಗೆ ಮತದಾನದ ಹಕ್ಕನ್ನು ನೀಡಿದವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಮಹಿಳೆಯರಿಗೆ ಉನ್ನತ ಸ್ಥಾನಮಾನಗಳನ್ನು ನೀಡಿದವರು ಡಾಕ್ಟರ್ ಅಂಬೇಡ್ಕರ್ ಮತಪೆಟ್ಟಿಗೆಯಲ್ಲಿ ರಾಜನ ಹುಟ್ಟುತ್ತಾನೆ ಎನ್ನುವ ಕನಸು ಕಂಡಿದ್ದಂತವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಸಮಾಜದ ಎಲ್ಲ ತರದ ಜನಗಳಿಗೆ ಅಂಬೇಡ್ಕರ್ ಅವರು ಸಂವಿಧಾನದ ಮುಖಾಂತರ ಸೌಲತ್ತು ಒದಗಿಸಿದವರು ಆದರೆ ಅಂಬೇಡ್ಕರ್ ರವರನ್ನು ಶೋಷಿತ ಸಮುದಾಯಕ್ಕೆ ಮಾತ್ರ ಕಟ್ಟುಪಾಡಿಗೆ ಒಳಪಡಿಸಿರುವುದು ದುರ್ದೈವದ ಸಂಗತಿ ಎಂದು ಹೇಳಿದರು
ಸಮಾರಂಭದಲ್ಲಿ ಉಪನ್ಯಾಸಕರದಂತ ರಾಜು ತುಮಕೂರು ಭೂತೇಶ್, ಗ್ರಾಮ ಪಂಚಾಯತಿ ಸದಸ್ಯರಾದಂತಹ ಹರಳಮ್ಮ, ಮುಖಂಡರಾದಂತ ತಿಪ್ಪೇಸ್ವಾಮಿ ಎಂ ಎಸ್ ಸ್ವಾಮಿ ಗುರುಸ್ವಾಮಿ ಸಿ ಶಿವಣ್ಣ ಜಿ ಮನು ರಾಜು ಎಚ್ ಮೂರ್ತಿ ಬಿ ಪರಮೇಶ್ವರಪ್ಪ ಶಿವಣ್ಣ ಜಿ ಜೆಸಿ ಹನುಮಂತ್ರಾಯಪ್ಪ ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading