ಚಳ್ಳಕೆರೆ ಏ20
ಜನಧ್ವನಿ ನ್ಯೂಸ್ ಎಫೆಕ್ಟ್ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ವಾಲಿದ ಟೆಲಿಪೋನ್ ಟವರ್ ತೆರವು.
ಅವಘಡಕ್ಕೆ ಆಹ್ವಾನ ನೀಡುವಂತಿರುವ ಟವರ್ ಕಂಬ ಎಂಬ ತಲೆ ಬರಹದಲ್ಲಿ ಜನಧ್ವನಿ ನ್ಯೂಸ್ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ರೆಡ್ಡಿ ಹಳ್ಳಿ ಗ್ರಾಮದ ದಲಿತ ಕಾಲೋನಿಯ
ಲಕ್ಷ್ಮಣ ಎಂಬುವರ ಮನೆ ಹತ್ತಿರ ಸುಮಾರು ವರ್ಷಗಳ ಹಿಂದೆ ವೈರ್ ಲೆಸ್ ಟಿಲಿಪೋನ್ ಟವರ್ ಅಳವಡಿಸಲು ಬಿಎಸ್ಎನ್ಎಲ್ ಮಿನಿ ಟವರ್ ಅಳವಡಿಸಲಾಗಿತ್ತು ಕೆಲವು ರ್ಷಗಳಿಂದ ಸ್ಥಗಿತವಾಗಿದ್ದು ಅದಕ್ಕೆ ವಾರಸುದಾರಿಲ್ಲದೆ ಅನಾಥವಾಗಿ ದ್ದು ಈಗ ಮಳೆ ಗಾಳಿಗೆ ಬುಡ ಸಮೇತ ಕಳಚಿ ಮನೆ ಮೇಲೆ ಹಾಗೂ ವಿದ್ಯುತ್ ತಂತಿ ಮೇಲೆ ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇದ್ದು ಇದರಿಂದ ಪ್ರಾಣ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದ್ದು ಪ್ರಾಣಹಾನಿ ಸಂಭವಿಸುವ ಮುನ್ನವೇ ಸಂಬಂಧ ಪಟ್ಟ ಅಧಿಕಾರಿಗಳು ಬೀಳುವ ಸ್ಥಿತಿಯಲ್ಲಿರುವ ಟವರ್ ಕಂಬವನ್ನು ತೆರವುಗೊಳಿಸುವರೇ ಕಾದು ನೋಡಬೇಕಿದೆ.. ಎಂದು ಸುದ್ದಿ ಬೆಳಕು ಚೆಲ್ಲಿದ ಕೆಲವೇ ಗಂಟೆಗಳಲ್ಲಿ ಗ್ರಾಂ ಪಂ ಪಿ ಡಿ ಓಂ ಎನ್ ಆರ್ ತಿಪ್ಪೇಸ್ವಾಮಿ ಸ್ಥಳಕ್ಕೆ ಸಿಬ್ಬಂದಿ ಕಳಿಸಿ
ಪೋಲಿಸ್ ಹಾಗೂ. ಬಿ ಎಸ್ ಎನ್ ಎಲ್ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಬೃಹತ್ ಕ್ರೇನ್ ವಾಹನದ ಸಹಾಯದಿಂದ ಟೆಲಿ ಪೋನ್ ಟವರ್ ತೆರವು ಕಾರ್ಯಾಚರಣೆ ಮಾಡಿದ್ದಾರೆ.ತೆರವುಗೂಳಿಸಿದ್ದಕ್ಕೆ ನಿವಾಸಿಗಳು ಜನಧ್ವನಿ ನ್ಯೂಸ್ ಹಾಗೂ ಅಧಿಕಾರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ..


