September 15, 2025
19CLK5P.jpg

ಚಳ್ಳಕೆರೆ-೧೯ ೧೨ನೇ ಶತಮಾನ ಧಾರ್ಮಿಕ ಪರಿವರ್ತನೆಯ ಪರ್ವಕಾಲವಾಗಿದೆ, ನೇಕಾರ ಸಂತ ಶ್ರೀದೇವರದಾಸಿಮಯ್ಯ ಸೇರಿದಂತೆ ಹಲವಾರು ಮಹಾನೀಯರು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಸಫಲರಾದರು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿನಿಗಮ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಸಂಜೆ ನೇಕಾರರ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಚರಕದಲ್ಲಿ ನೂಲುತೆಗೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕಿನ ಪದ್ಮಸಾಲಿ, ಪಟ್ಟಸಾಲೆ, ಕುರಹಿನಶೆಟ್ಟಿ, ಸ್ವಕುಳಸಾಳಿ, ದೇವಾಂಗ ಹಾಗೂ ತೊಗಟಿವೀರ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀವೀರಭದ್ರಸ್ವಾಮಿ ದೇವಸ್ಥಾನದಿಂದ ಬೃಹತ್ ಮೆರವಣಿಗೆಯನ್ನು ನೇಕಾರ ಸಮುದಾಯ ಹಮ್ಮಿಕೊಂಡಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲಕರ್ನಾಟಕ ಪಟ್ಟಸಾಲೆ ನೇಕಾರರ ಸಂಘದ ರಾಜ್ಯಾಧ್ಯಕ್ಷ ಎಚ್.ತಿಪ್ಪೇಸ್ವಾಮಿ, ನೇಕಾರ ಸಮುದಾಯ ತನ್ನದೇಯಾದ ವಿಶೇಷತೆಯನ್ನು ಹೊಂದಿದೆ. ನೂರಾರು ವರ್ಷಗಳಿಂದ ¨ಟ್ಟೆ ನೇಯುವ ಮೂಲಕ ಅವುಗಳನ್ನು ಸರ್ವರಿಗೂ ಯಾವುದೇ ಜಾತಿಬೇದವಿಲ್ಲದೆ ವಿತರಿಸಿ ಪ್ರತಿಯೊಬ್ಬರ ಗೌರವಕ್ಕೆ ಕುಂದುಬಾರದಾಗೆ ಜಾಗ್ರತೆ ವಹಿಸಿದೆ. ಇಂತಹ ಸಮಾಜದ ಜಾಗೃತಿ ಸಮಾಜದ ಮುಂದಾಗಬೇಕಿದೆ. ಇತ್ತೀಚಿಗೆ ಸರ್ಕಾರ ಪ್ರಕಟಿಸಿ ಜಾತಿಗಣನೆಯಲ್ಲಿ ನೇಕಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.
ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚAದ್ರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ, ಉಪಾಧ್ಯಕ್ಷೆಸುಮ, ನೇಕಾರ ಸಮುದಾಯದ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಆರ್.ಜಯರಾಮ್, ಸಹಪ್ರಾಧ್ಯಾಪಕ ಪ್ರೊ.ಎಸ್.ಬಿ.ಶಿವಪ್ರಸಾದ್, ನಗರಸಭಾ ಸದಸ್ಯ ವಿ.ವೈ.ಪ್ರಮೋದ್, ಗ್ರಾಪಂ ಸದಸ್ಯರಾದ ಕೆ.ಜೆ.ತಿಪ್ಪೇಸ್ವಾಮಿ, ಜಿ.ಗೌರಮ್ಮ, ಭಾಗ್ಯಮ್ಮ, ಜಯಮ್ಮ, ಎಚ್.ಸಿಂಧು, ರಾಮುಲುವೆಂಕಟೇಶ್, ಸಮಾಜದ ಮುಖಂಡ ಮ್ಯಾಡಂಶಿವಮೂರ್ತಿ, ಪದ್ಮಸಾಲಿ ಸಮಾಜದ ಅಧ್ಯಕ್ಷ ಎಚ್.ರವಿಕುಮಾರ್, ಪಟ್ಟಸಾಲೆ ನೇಕಾರ ಸಂಘದ ಎಂ.ಬಿ.ಗುರುಮೂರ್ತಿ, ಕುರಿಹಿನಶೆಟ್ಟಿ ಅಧ್ಯಕ್ಷ ಈ.ಶ್ರೀನಿವಾಸಲು, ಸ್ವಕುಳಸಾಲಿ ಅಧ್ಯಕ್ಷ ಭಾಸ್ಕರಾವ್‌ಗಾಯಕವಾಡ್, ದೇವಾಂಗ ಸಮಾಜದ ಅಧ್ಯಕ್ಷ ಎಂ.ಆರ್.ವೆAಕಟೇಶ್, ಯುವಮುಖಂಡ ಡಿ.ಮಂಜುನಾಥ, ಎಂ.ಎನ್.ಕುಮಾರ್, ಜಿ.ಜೆ.ಸತ್ಯನಾರಾಯಣ, ಕೆ.ಸಿ.ವೀರೇಶ್, ಡಿ.ಶಿವಪ್ರಸಾದ್, ಬೆಸ್ಕಾಂ ಇಂಜಿನಿಯರ್ ಜಿ.ಶಿವಪ್ರಸಾದ್ ಮುಂತಾದವರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading