ಹಿರಿಯೂರು ಮಾ.20
ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಮೇಲೆ, ಖಚಿತ ಮಾಹಿತಿ ಮೇರೆಗೆ, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿ, 6 ಮಂದಿ ಜೂಜುಕೊರರನ್ನು ಬಂಧಿಸಿದ ಘಟನೆ ಮಸ್ಕಲ್ ಗ್ರಾಮದಲ್ಲಿ ನಡೆದಿದೆ.ಬಂಧಿತರಿಂದ 2430 ರೂಪಾಯಿ ನಗದು ಮತ್ತು ಆಟಕ್ಕೆ ಬಳಸಿದ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಡಿಸಿ ಕಾಲೋನಿ ಸಮೀಪದ ನಾರಿನ ಮಿಲ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ, 1110 ನಗದು ಮತ್ತು ಆಟಕ್ಕೆ ಬಳಸಿದ್ದ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆಟಗಾರರನ್ನು ಬಂಧಿಸಿದ್ದು, ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.