ಚಳ್ಳಕೆರೆ: ನಗರದ ನಗರಸಭೆ ಆವರಣದಲ್ಲಿ ಗುರುವಾರ ಪ್ರಭಾರ ಅಧ್ಯಕ್ಷೆ ಸುಮಾ ರವರ ಅಧ್ಯಕ್ಷತೆಯಲ್ಲಿ ತುರ್ತು ಕೌನ್ಸಿಲ್ ಸಭೆ ಜರಗಿತು.
ಈ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಳಿಕೆ ದಿನವಹಿ ಮಾರುಕಟ್ಟೆ, ಸುಂಕ ವಸೂಲಾತಿ ಹಾಗೂ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆದವು.
ಸಭೆಯಲ್ಲಿ ಮಾತನಾಡಿದ ಸದಸ್ಯ ಜಯಣ್ಣ ಸಿ ಸಿ ಕ್ಯಾಮೆರಾ ಅಳವಡಿಸಲು ಈ ಹಿಂದಿನ ಸಭೆಗಳಲ್ಲಿ ಅನುಮೋದನೆ ನೀಡಿದರು ಸಹ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ನಗರದಲ್ಲಿ ಈ ಹಿಂದೆ ಅಳವಡಿಸಿರುವ ಸಿಸಿ ಕ್ಯಾಮೆರಾ ಗಳು ಅವಶೇಷಗಳಂತೆ ನೇತಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಇದಕ್ಕೆ ಸದಸ್ಯರ ವಿಶುಕುಮಾರ್. ನಾಗಮಣಿ. ರಮೇಶ್ ಗೌಡ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ನಗರಸಭೆ ವ್ಯವಸ್ಥಾಪಕ ಲಿಂಗರಾಜು ಈ ಹಿಂದೆ 67.50 ಲಕ್ಷ ಅನುಮೋದನೆ ಪಡೆಯಲಾಗಿತ್ತು ಆದರೆ ಈಗ ಸುಮಾರು 77 ಲಕ್ಷ ಗಳಿಗೆ ಅನುಮೋದನೆ ದೊರೆ ಬೇಕಾಗಿದ್ದು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಅನುದಾನದ ಲಭ್ಯತೆ ನೋಡಿಕೊಂಡು ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇಷ್ಟಕ್ಕೆ ತೃಪ್ತರಾಗದ ಸದಸ್ಯರು ನಗರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಅಪಘಾತ ವಲಯಗಳನ್ನು ಗುರುತಿಸಿ ಸೈನ್ ಬೋರ್ಡ್ ಗಳನ್ನು ಅಳವಡಿಸಬೇಕು ಶಾಸಕರ ವಿಶೇಷ ಅನುದಾನದಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.





ಮೂಲಭೂತ ಸೌಲಭ್ಯ ಕಲ್ಪಿಸದೆ ಸುಂಕ ವಸೂಲಾತಿಗೆ ವಿರೋಧ: ನಗರಸಭೆ ಸದಸ್ಯೆ ಸುಜಾತ ಪಾಲಯ್ಯ ಮಾತನಾಡಿ ಸಭೆಯಲ್ಲಿ ವಾರದ ಸಂತೆ ದಿನವಹಿ ಮಾರುಕಟ್ಟೆ ಸುಂಕ ವಸೂಲಾತಿ ಖಾಸಗಿ ಬಸ್ ನಿಲ್ದಾಣದ ಸುಂಕ ವಸೂಲಾತಿ ಹಾಗೂ ಖಾಸಗಿ ಬಸ್ ನಿಲ್ದಾಣದ ಕೆಳಮಡಿಯಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ವಿರೋಧಿಸಿದರು ಈ ವೇಳೆ ಮಾತಾಡಿದ ಅವರು ನಗರಸಭೆಗೆ ಕೇವಲ ಆದಾಯಕ್ಕೆ ಮಾತ್ರ ಸುಂಕ ವಸೂಲಾತಿ ಮಾಡಿದರೆ ಸಾಲದು ಮೊದಲು ಈ ಎಲ್ಲಾ ಸ್ಥಳಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಂತರ ಸುಂಕ ವಸುಲಾತಿಯ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸುಂಕ ವಸೂಲಾತಿಗೆ ನಮ್ಮ ವಿರೋಧವಿದೆ ಎಂದು ಅಧಿಕಾರಿಗಳನ್ನು ಛೇಡಿಸಿದರು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ನೆರಳಿನ ವ್ಯವಸ್ಥೆ ಶೌಚಾಲಯ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ ತುರ್ತಾಗಿ ಈ ಕಾರ್ಯಗಳು ನಡೆಯಬೇಕು ಬಸ್ ನಿಲ್ದಾಣದ ಪಕ್ಕದಲ್ಲಿರುವ ಶೌಚಾಲಯದ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಅವರು ಕೂಡಲೆ ಶೌಚಾಲಯದ ಅಕ್ಕ ಪಕ್ಕದ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಬೇಕು ಅಲ್ಲಿ ಸ್ತ್ರೀಯರು ಓಡಾಡಲು ಸಹ ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಹಲವು ಬಾರಿ ತಿಳಿಸಿದರು ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ತಾಲೂಕಿನಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರು, ಚರಂಡಿ ಸ್ವಚ್ಛತೆ ನೆರಳಿನ ವ್ಯವಸ್ಥೆ ಡಿ ಸುಧಾಕರ್ ಕ್ರೀಡಾಂಗಣದಲ್ಲಿ ವಿಶ್ರಾಂತಿಗಾಗಿ ಆಸನದ ವ್ಯವಸ್ಥೆ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಸದಸ್ಯರ ಗಮನಕ್ಕೆ ತಂದು ನೇಮಿಸಿಕೊಳ್ಳಬೇಕು ಸದಸ್ಯರು ಶಿಫಾರಸ್ಸು ಮಾಡುವ ಒಬ್ಬರಿಗೆ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕ ಕೆಲಸವನ್ನು ನೀಡಬೇಕು ಗ್ರಾಮೀಣ ಭಾಗದಿಂದ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ಕೈ ಬಿಟ್ಟು ನಗರದಲ್ಲಿರುವ ಸ್ಥಳೀಯರನ್ನು ಪೌರಕಾರ್ಮಿಕ ಹುದ್ದೆಗೆ ನೇಮಿಸಿಕೊಳ್ಳಬೇಕು ಎಂದು ಸದಸ್ಯರಾದ ನಾಗಮಣಿ ಅನ್ವರ್ ಮಾಸ್ಟರ್ ಪ್ರಶಾಂತ್ ಕುಮಾರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭ ಪ್ರಭಾರ ಅಧ್ಯಕ್ಷೆ ಸುಮಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪೌರಾಯುಕ್ತ ಜಗರೆಡ್ಡಿ ಸೇರಿದಂತೆ ಸದಸ್ಯರು ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.