ಚಳ್ಳಕೆರೆ ಮಾ.20
ವಿದ್ಯುತ್ ಕಂಬಗಳು ರಸ್ತೆ ಪಕ್ಕದಲ್ಲಿ ಇರುವುದು ಸಾಮಾನ್ಯ. ಆದರೆ, ಇಲ್ಲೊಂದು ಪ್ರದೇಶದಲ್ಲಿ ರಸ್ತೆಯ ಮಧ್ಯದಲ್ಲಿಯೇ ವಿದ್ಯುತ್ ಕಂಬವಿದ್ದು, ವಾಹನ ಸವಾರರಿಗೆ ಮತ್ತು ಸಾರ್ವಜನಿಕರು ಅಪಾಯಕ್ಕೆ ಕೈಬೀಸಿ ಕರೆಯುವಂತಾಗಿದೆ.
ಹೌದು ಇದು ಚಳ್ಳಕೆರೆ ನಗರದ 18 ನೇ ವಾರ್ಡ್ ನ ಅಂಬೇಡ್ಕರ್ ನಗರದ ಬಾಲಕಿಯರ ವಿರ್ಥಿನಿಲಯದ ಹಿಂಭಾಗದ ರಸ್ತೆಗೆ ಸಿಸಿ ರಸ್ತೆ ಕಾಮಗಾರಿ ಮಾಡಿದ್ದು ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ರಸ್ತೆ ಬದಿಗೆ ಹಾಕದೆ ಹಾಗೇ ರಸ್ತೆ ಕಾಮಗಾರಿ ಮಾಡಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯಯಾಗಿದೆ.
ಕಚ್ಚಾ ರಸ್ತೆಗೆ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿರುವುದು ಒಂದು ಕಡೆ ಸಂತೋಚದಸಯಕವಾದರೆ ರಸ್ತೆಯ ಮಧ್ಯೆ ಇರುವ ವಿದ್ಯುತ್ ಕಂಬ ಸ್ಥಳಾಂತರಿಸದೆ ರಸ್ತೆ ಅಭಿವೃದ್ಧಿ ಮಾಡಿರುವುದು ಸಾರ್ವಜನಿಕರಲ್ಲಿ ಅಸಮದಾನಕ್ಕೆ ಕಾರಣವಾಗಿದೆ.
ಈಗಲಾದರೂ ಸಂಬಂಧ ಅಧಿಕಾರಿಗಳು ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವರೇ ಕಾದು ನೋಡ ಬೇಕಿದೆ.




About The Author
Discover more from JANADHWANI NEWS
Subscribe to get the latest posts sent to your email.