ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ನೊಂದವರು, ಅನ್ಯಾಯಕ್ಕೆ ಒಳಗಾದವರು ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರವಾಗಿ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬುದ್ಧವಾದ) ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ನಿಂಗರಾಜ ಮಲ್ಲಾಡಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಂಘಟನೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರು ಸಮಾಜದಲ್ಲಿನ ಎಲ್ಲಾ ವರ್ಗದವರ ವಿಶ್ವಾಸವನ್ನು ಪಡೆದು ಆ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಶಾಸಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ಆಯೋಜಿಸಿ ಈ ಭಾಗದ ಜನಸಾಮಾನ್ಯರುಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ಕೆಲಸವನ್ನು ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುದ್ಧವಾದ ಸಂಘಟನೆಯ ಸಾಲಿಗ್ರಾಮ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರಾಂಪುರ ಲೋಕೇಶ್ ಅವರನ್ನು ತಾಲ್ಲೂಕು ಸಂಚಾಲಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ಅವರೊಂದಿಗೆ ಮಂಜುನಾಥ್ (ಹರದನಹಳ್ಳಿ), ಡಿ.ದೇವರಾಜು (ಮಲುಗನಹಳ್ಳಿ), ರಾಮಕೃಷ್ಣ
(ಲಕ್ಕಿಕುಪ್ಪೆ), ಎಸ್.ಡಿ.ಗಂಗಾಧರ,
ಎಸ್.ಬಿ.ಬಸವರಾಜು, ಸೋಮಯ್ಯ, ಮನೋಜ್ (ಸಾಲಿಗ್ರಾಮ), ಎಲ್ಲಪ್ಪ ಜೋಗಿ (ರಾಂಪುರ ಬಡಾವಣೆ), ಸುರೇಶ (ಮಿರ್ಲೆ), ಕುಮಾರ, ಅಮಾಸಮ್ಮ, ಸೌಮ್ಯ (ಚುಂಚನಕಟ್ಟೆ), ಮಂಜುನಾಥ್ (ಬಳ್ಳೂರು), ಸ್ವಾಮಿ (ಕರ್ಪೂರವಳ್ಳಿ) ಅವರುಗಳನ್ನು ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಬುದ್ಧವಾದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಹೆಬ್ಬಾಳು ದಿವಾಕರ್, ಅಲೆಮಾರಿ ಸಮುದಾಯ ಸಂಘಟನೆಯ ರಾಜ್ಯಾಧ್ಯಕ್ಷ ಕುಮಾರ್, ಮುಖಂಡರುಗಳಾದ ಶ್ರೀನಿವಾಸ್, ಸತೀಶ್, ಶಂಕರ್, ಮಂಜು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರುಗಳು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.