ಚಳ್ಳಕೆರೆ ಫೆ.20
ಗುಂಡಿಯಲ್ಲಿ ತ್ಯಾಜ್ಯ ನೀರು ಸಾಂಕ್ರಮಿಕ ರೋಗ ಭೀತಿಯಲ್ಲಿ ವಿದ್ಯಾರ್ಥಿಗಳು.
ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ಮುಖ್ಯ ರಸ್ತೆಗೆ ಹೊಂದಿಕೊಂಡ ರೇವಣ ಸಿದ್ದೇಶ್ವರ ವಿದ್ಯಾವರ್ಧಕ ಕುರುಬರ ವಿದ್ಯಾರ್ಥಿನಿಲಯ. ಹೆಚ್ ಪಿ.ಪಿ.ಸಿ ಸರಕಾರಿ ಪ್ರಥಮ ದರ್ಜೆ ಕಾಲೇ ಹಾಗೂಇನ್ಫೆಂಟ್ ಜೀಸಸ್ ಶಾಲೆ ಮಧ್ಯೆ ಬೃಹತ್ ಗುಂಡಿ ಇದ್ದು ಗುಂಡಿಯಲ್ಲಿ ತ್ಯಾಜ್ಯ ನೀರು ಸಂಗ್ರಹಣೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು ಗೊಬ್ಬುವಾಸನೆ ಬೀರುತ್ತಿದ್ದು ಕುರುವರ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಇನ್ಫೆಂಟ್ ಜೀಸಸ್ ಶಾಲೆ ಹಿಂಭಾಗ ಈ ಸಮಸ್ಯೆ ಇದ್ದು, ಕೆಟ್ಟ ವಾಸನೆಯಿಂದ ಮಕ್ಕಳು ಮೂಗು ಮುಚ್ಚಿಕೊಂಡು ಶಾಲಾ ತರಗತಿಗಳಲ್ಲಿ ಪಾಠ ಪ್ರವಚನ ಕೇಳುವಂತಾಗಿದ್ದು
ಗೊಬ್ಬು ವಾಸನೆಯಿಂದ ವಿದ್ಯಾರ್ಥಿಗಳು ಊಟ ಮಾಡುವಾಗ ವಾಂತಿ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಸಾಂಕ್ರಮಿಕ ರೋಗ ಭೀತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಪಾಠ ಪ್ರವಚನ ಮಾಡುವುದು ಅನಿವಾರ್ಯವಾಗಿದೆ.
ಸಾಂಕ್ರಮಿಕ ರೋಗಗಳಾದ ಮಲೇರಿಯಾ. ಚಿಕನ್ ಗುನ್ಯ.ಡೆಂಗ್ಯೂ.ಸೇರಿದಂತೆ ಸಾಂಕ್ರಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ವಿದ್ಯಾರ್ಥಿಗಳೇ ಶಾಲಾ ಕಾಲೇಜು ಹಾಗೂ ವಸತಿ ನಿಲಯದ ಮಧ್ಯೆ ಬೃಹತ್ ಗುಂಡಿಯಲ್ಲಿ ನಿಂತಿರುವ ನೀರು ವಾಸನೆ ಬರುತ್ತಿದೆ. ವಿದ್ಯಾರ್ಥಿಗಳು ಕೊಳಕು ವಾಸನೆಯಲ್ಲಿಯೇ ಪಾಠ ಕೇಳುವಂತಾಗಿದೆ. ಜತೆಗೆ ಸೊಳ್ಳೆಗಳ ಹಾವಳಿಯಿಂದ
ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಜಾರಿರುವುದು ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಡವಾಡುವಂತಾಗಿದೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ನಿಂತ ಮಲೀನ ನೀರಿನ ಗುಂಡಿಯನ್ನು ಮುಚ್ಚಿಸುವರೇ ಕಾದು ನೋಡ ಬೇಕಿದೆ.






About The Author
Discover more from JANADHWANI NEWS
Subscribe to get the latest posts sent to your email.