ಹೊಸದುರ್ಗ
ಹೊಸದುರ್ಗ ತಾಲೂಕಿನ ಕಬ್ಬಳ ಗ್ರಾಮದ ಗ್ರಾಮ ದೇವತೆ ಶ್ರೀಕತ್ತಿಕಲ್ಲಾಂಭ ದೇವಿಯ ನೂತನ ರಥ ನಿರ್ಮಾಣ ಕೆಲಸ ಪೂರ್ಣವಾಗುತ್ತಿದ್ದು ಇದೆ ಫೆ,೨೬ನೇ ಬುಧವಾರ ಲೋಕರ್ಪಾಣೆಗೆ ಸಜ್ಜಾಗಿದೆ.
ಗ್ರಾಮದಲ್ಲಿ ಸುಮಾರು ಏಳುನೂರು ವರ್ಷಗಳ ಹಿಂದಿನದು ಎನ್ನಲಾದ ರಥ ಶಿಥಿಲಗೊಂಡಿದ್ದನ್ನು ಮನಗಂಡು ಗ್ರಾಮದ ಸಮಸ್ಥರು ದೇವಿಯ ಅಪ್ಪಣೆಯ ಅಣತಿಯಂತೆ ತೀರ್ಮಾನಿಸಿ ಕಳೆದ ಎರಡು ವರ್ಷದಲ್ಲಿ ರಥ ನಿರ್ಮಾಣದ ಕೆಲಸಗಳಿಗೆ ಚಾಲನೆ ನೀಡಿದ್ದರು ಸುಮಾರು ಒಂದೂವರೆ ಕೋಟಿ ರೂಗಳಿಗೂ ಅಧಿಕ ವೆಚ್ಚದಲ್ಲಿ ರಥ ಅಕರ್ಷಕವಾಗಿ ಸುಂದರವಾಗಿ ನಿರ್ಮಾಣವಾಗಿದೆ.
ಚಿಗಟೇರಿ, ಅನಗೋಡು,ಗಂಜಿಗೆರೆ, ಗರ್ಜಿ, ಎಸ್.ಬಿದರೆ ಸೇರಿದಂತೆ ರಾಜ್ಯದ ನಾನಾ ಬಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ತೇರು ರಥದ ನಿರ್ಮಾಣದ ಕೆತ್ತನೆ ಮಾಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮದ ಶಿಲ್ಪಿಗಳಾದ ಲೇ,ಚಂದ್ರÀಚಾರ್ ವiಕ್ಕಳಾದ ಜಗನ್ನಾಥಚಾರ್, ವೀರಾಚಾರ್,ಮಾರ್ಗದರ್ಶನದಲ್ಲಿ ಎಂಟು ಮಂದಿ ಕಳೆದ ಎಂಟು ತಿಂಗಳಿನಿಂದ ನಿರ್ಮಾಣದ ಕೆಲಸವನ್ನು ನಿರ್ವಹಿಸಿದ್ದಾರೆ.
ರಥ ನಿರ್ಮಾಣಕ್ಕೆ ಬೇಕಾದ ಮರವನ್ನು ಚಿಕ್ಕಮಗಳೂರು ಕಳಸ ಬಾಗದಿಂದ ಹೊನ್ನೆ, ಸಾಗುವಾನಿ, ಹೆಬ್ಬಲ್ಸ್ ಮತ್ತಿ ಮರವನ್ನು ಹಾಗೂ ದಾನಿಗಳಿಂದ ಸಂಗ್ರಹಿಸಿ ತಂದು ನಿರ್ಮಾಣಕ್ಕೆ ಬಳಸಲಾಗಿದ್ದು ಚಕ್ರಗಳ ಅಚ್ಚಿಗೆ ಮಾತ್ರ ಮತ್ತಿ ಮರವನ್ನು ಬಳಕೆಮಾಡಲಾಗಿದೆ.
ಈ ರಥವನ್ನು ಹೊಯ್ಸಳ ಹಾಗೂ ಚೋಳರ ಕಾಲದ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ರಥದ ಎತ್ತರ 35ಅಡಿಯಲ್ಲಿದ್ದು ಅಮ್ಮನವುರ ಕುಳಿತ ಕೊಳ್ಳವ ಜಾಗಕ್ಕೆ 12 ಎತ್ತರ 12 ಅಡಿ ಅಗಲ ಹೊಂದಿರುತ್ತದೆ.
ರಥದಲ್ಲಿ ಪ್ರದಾನ ವಿಗ್ರಹಗಳಾದ ಗಣಪತಿ ಕತ್ತಿಕಲ್ಲಾಂಭ ದೇವಿ, ವಿಷ್ಣ ರಾಜರಾಜೇಶ್ವರಿ . ಅಂಜನೇಯ, ಲಕ್ಷ್ಮಿದೇವಿ. ಉಮಾಮಹೇಶ್ವರಿ, ಪರಮೇಶ್ವರಿ . ಸರಸ್ವತಿ, ವೀರಭದ್ರಸ್ವಾಮಿ, ಮಹಕಾಳಿ ಭುವನೇಶ್ವರಿ ಹಾಗೂ ರಥದಲ್ಲಿ ಅಷ್ಟ ದಿಕ್ಕಾಪಾಲಕರು, ಅಷ್ಟ ಲಕ್ಷ್ಮಿಯರು ಸಪ್ತ ಮಾತ್ರಿಕೆಯರು, ನವಗ್ರಹಗಳು, ರಥ ಮಂಟಪದಲ್ಲಿ ಶಾರ್ದಲೊಗಳನ್ನು ಅಲಂಕಾರಿಕ ಕೆತ್ತನೆಯೊಂದಿಗೆ ಬಳ್ಳಿ ಸಾಲುಗಳು, ಅಷ್ಟ ದಿಗ್ಗಜಗಳು, ಸಿಂಹ, ಹಂಸ, ಅಶ್ವಗಳು ಚಿತ್ರಗಳೂ ಸೇರಿದಂತೆ ಸುಂದರವಾದ ನಾನಾ ಕಲಾ ಶೈಲಿಗಳೊಂದಿಗೆ ನಿರ್ಮಾಣ ಮಾಡಲಾಗಿದೆ.
ಈರಥದ ವೀಶೆಷತೆ ಕಾಶಪಾ ಶಿಲ್ಪ ಶಾಸ್ತçದ ಅದಾರದ ಮೇಲೆ ಕೆತ್ತನೆ ಮಾಡಲಾಗಿದೆ ತೇರಿಗೆ ಚಿತ್ರ ಕಲ್ಪರಥ ಎಂದು ಕರೆಯುತ್ತಾರೆ ಎಂದು ಶಿಲ್ಪಿ ಜಗನ್ನಾಥಚಾರ್ ಹೇಳುತ್ತಾರೆ.
ಪೋಟೋ;ಎಚ್‌ಎಸ್‌ಡಿಪಿ೧
ಹೊಸದುರ್ಗ ತಾಲೂಕಿನ ಕಬ್ಬಳ ಗ್ರಾಮದ ಶ್ರೀ ಕತ್ತಿಕಲ್ಲಾಂಭ ದೇವಿಯ ನೂತನ ರಥದ
ನಿರ್ಮಾಣ ಶಿಲ್ಪಿಗಳು.
ಪೋಟೋ;ಎಚ್‌ಎಸ್‌ಡಿಪಿ೨
ಹೊಸದುರ್ಗ ತಾಲೂಕಿನ ಕಬ್ಬಳ ಗ್ರಾಮದ ಶ್ರೀ ಕತ್ತಿಕಲ್ಲಾಂಭ ದೇವಿಯ ನೂತನ ರಥ.





About The Author
Discover more from JANADHWANI NEWS
Subscribe to get the latest posts sent to your email.