ಹೊಸದುರ್ಗ:
ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಮೈಂಡ್ ಸ್ಪಾರ್ಕ್ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹೊಸದುರ್ಗದ ಎಸ್. ನಿಜಲಿಂಗಪ್ಪ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 132 ಶಾಲೆಗಳ 300ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಒಟ್ಟು ಸುಮಾರು 900 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಹಂತಗಳ ಬಳಿಕ 8 ತಂಡಗಳು ಸೆಮಿಫೈನಲ್ ಪ್ರವೇಶಿಸಿ, ಅಂತಿಮವಾಗಿ ಫೈನಲ್ ಹಂತ ತಲುಪಿದ್ದವು.
ಫೈನಲ್ ರಸಪ್ರಶ್ನೆಯಲ್ಲಿ 8 ಸುತ್ತುಗಳು ನಡೆದಿದ್ದು, ಎಸ್. ನಿಜಲಿಂಗಪ್ಪ ಶಾಲೆಯ ಸಿಬಿಎಸ್‌ಇ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಉತ್ತರಗಳ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡರು.
ವಿಜೇತ ತಂಡದಲ್ಲಿ 8ನೇ ತರಗತಿಯ ಲಕ್ಷ್ಮೀ ಪ್ರಸಾದ್, 9ನೇ ತರಗತಿಯ ಶ್ರಾವಣಿ ಪ್ರಕಾಶ್ ಹಾಗೂ 10ನೇ ತರಗತಿಯ ಜೀವನ್ ಆರ್ ಭಾಗವಹಿಸಿದ್ದರು.
ಈ ಸ್ಪರ್ಧೆಯನ್ನು ಆರ್ಕಾ ಸೊಲ್ಯೂಶನ್ ಮತ್ತು ಕ್ಲೌಡ್ ಟ್ಯೂಟರ್ಸ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಂ. ಶಿವಲಿಂಗಪ್ಪ, ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ಅಕಾಡೆಮಿಕ್ ಡೈರೆಕ್ಟರ್ ಎಂ.ಬಿ. ತಿಪ್ಪೇಸ್ವಾಮಿ, ಎಲ್ಲಾ ಧರ್ಮದರ್ಶಿಗಳು ಹಾಗೂ ಪ್ರಾಂಶುಪಾಲ ಜ್ವಾಲಾ ರೋಖಡೆ ಅಭಿನಂದನೆ ಸಲ್ಲಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.