ಮನೆ ಮನೆ ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ
– ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ
ಕನ್ನಡ ಮತ್ತು ಪುಸ್ತಕ ಪ್ರಾಧಿಕಾರ, ಚಿತ್ರದುರ್ಗ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಮನೆ ಮನೆ ಗ್ರಂಥಾಲಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಇತ್ತೀಚೆಗೆ ಚಿತ್ರದುರ್ಗ ನಗರದ ಸಹ್ಯಾದ್ರಿ ಬಡಾವಣೆ ನಿವಾಸಿಗಳಾದ ಶ್ರೀಮತಿ ಶಾರದಾ ಜೈರಾಂ.ಬಿ ಮತ್ತು ಜೈರಾಂ.ಎನ್ ದಂಪತಿಗಳ ಮನೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಅವರು, ಗ್ರಂಥಾಲಯದ ಉಗಮ, ಅದರ ಬೆಳವಣಿಗೆ ಹಾದಿ, ಗ್ರಂಥಪಠಣದ ಮಹತ್ವ ಹಾಗೂ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥ್ ಅವರ ಅಮೂಲ್ಯ ಕೊಡುಗೆಯನ್ನು ತಮ್ಮ ಉದ್ಘಾಟನಾ ಭಾಷಣದಲ್ಲಿ ಸ್ಮರಿಸಿದರು.
ಕವಿ ಬೆಳಕು ಪ್ರಿಯ ಮಾತನಾಡಿ, ತಮ್ಮಲ್ಲಿ ಪುಸ್ತಕ ಓದಿನ ಆಸಕ್ತಿ ರವಿ ಬೆಳಗೆರೆ ಅವರ ಪುಸ್ತಕಗಳಿಂದ ಆರಂಭವಾಗಿ, ನಂತರ ಎಲ್ಲಾ ಲೇಖಕರ ಕೃತಿಗಳನ್ನು ಓದುವ ಹವ್ಯಾಸವಾಗಿ ಬೆಳೆದಿದೆ ಎಂದು ತಿಳಿಸಿದರು. ಸುಮರಾಜಶೇಖರ್ ಅವರು ಡಿ.ವಿ.ಜಿ ಅವರ ಸಾಹಿತ್ಯ ಕೊಡುಗೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಡಾ. ಗೌರಮ್ಮ ಅವರು ಹಾರೈಕೆಯ ನುಡಿಗಳನ್ನಾಡಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ಶ್ರೀಮತಿ ದಯಾ ಪುತ್ತೂಕರ್ ಅವರು, ಶ್ರೀಮತಿ ಶಾರದಾ ಜೈರಾಂ ಅವರ ಪುಸ್ತಕ ಸಂಗ್ರಹ ಶ್ಲಾಘನೀಯವಾಗಿದ್ದು, ಅವರ ವೈಯಕ್ತಿಕ ಗ್ರಂಥಾಲಯವನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಇಂತಹ ಗ್ರಂಥ ಸಂಗ್ರಹ ಮುಂದುವರಿಯಲಿ ಎಂದು ಹಾರೈಸಿದರು.
ಶ್ರೀಮತಿ ಯಶೋಧಾ ರಾಜಶೇಖರಪ್ಪ ಅವರು, ಪುಸ್ತಕ ಓದು ಕಾದಂಬರಿಗಳಿಂದ ಆರಂಭವಾದರೂ, ಓದುವ ಹವ್ಯಾಸ ಬೆಳೆದಂತೆ ಪಠ್ಯೇತರ ಹಾಗೂ ಪಠ್ಯ ಪುಸ್ತಕಗಳ ಸಂಗ್ರಹವೂ ಬಹಳ ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಜೈರಾಂ.ಎನ್ ಅವರು ತಮ್ಮ ಕಠಿಣ ಬಾಲ್ಯದ ಅನುಭವಗಳನ್ನು ಹಂಚಿಕೊಂಡು, ಜ್ಞಾನಾರ್ಜನೆ ಬದುಕಿಗೆ ಬೆಳಕು ಹಾಗೂ ಭರವಸೆಯನ್ನು ನೀಡಿತು ಎಂದು ಹೇಳಿ, “ಧನವಿದ್ದು ಏನು ಫಲ, ದಯೆ ಇಲ್ಲದಿದ್ದರೆ; ನೀನು ಇದ್ದು ಏನು ಫಲ, ಜ್ಞಾನವಿಲ್ಲದಿದ್ದರೆ” ಎಂಬ ಅಕ್ಕಮಹಾದೇವಿಯ ವಚನವನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶಾರದಾ ಜೈರಾಂ.ಬಿ ಅವರು, ಬಾಲ್ಯದಿಂದಲೇ ಪುಸ್ತಕ ಓದು ಮತ್ತು ಖರೀದಿ ಹವ್ಯಾಸವಿದ್ದು, ಅದು ಇಂದಿಗೂ ಮುಂದುವರಿದಿದೆ ಎಂದರು. ಈ ಸಂದರ್ಭದಲ್ಲಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಜಗೃಹ ಗ್ರಂಥಾಲಯದಲ್ಲಿ ಸುಮಾರು 58,000ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದ್ದು, ವಿದೇಶ ಪ್ರವಾಸಗಳಲ್ಲಿಯೂ ಪೆಟ್ಟಿಗೆ ತುಂಬಾ ಪುಸ್ತಕಗಳನ್ನು ತಂದಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕವಿಗಳಾದ ಮೀರಾ ನಾಡಿಗ್, ಶಶಿಕಲಾ ಕುಂಚಿಗನಾಳ್, ಜಯದೇವ ಮೂರ್ತಿ, ಪಂಡ್ರಳ್ಳಿ ಶಿವರುದ್ರಪ್ಪ, ಬೆಳಕು ಪ್ರಿಯ, ನಿರ್ಮಲ ಭಾರದ್ವಾಜ್, ನಿರ್ಮಲ ಮಂಜುನಾಥ್, ಶಶಿಕಲಾ ವೆಂಕಟೇಶ್, ನಗರಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಶಾಂತಾಕುಮಾರಿ ಶೇಖರ್, ಗಿರಿಜಾ, ಹೆಚ್.ಕೆ, ಶಾಂತಮ್ಮ, ವಿರೇಶ್, ಸಾದತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನCounting continued:
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಬಿ. ರಾಜಶೇಖರಪ್ಪ ಅವರು ನೆರವೇರಿಸಿದರು. ಅವರ ಸಹಧರ್ಮಿಣಿ ಶ್ರೀಮತಿ ಯಶೋಧಾ ರಾಜಶೇಖರಪ್ಪ ಅವರು ಹಾಜರಿದ್ದರು. ವೇದಿಕೆಯಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ಶ್ರೀಮತಿ ದಯಾ ಪುತ್ತೂಕರ್, ಅತಿಥಿಗಳಾಗಿ ಸುಮರಾಜಶೇಖರ್ ಹಾಗೂ ಡಾ. ಗೌರಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ. ಬಸವರಾಜ್ ಹತ೯ಿ ಮತ್ತು ವಿರೇಶ್ ನಡೆಸಿಕೊಟ್ಟರು. ಪ್ರಾರ್ಥನೆಯನ್ನು ಪಿ.ಎಸ್.ಐ ಶ್ರೀಮತಿ ಯಶೋದಮ್ಮ ಹಾಡಿದರು. ಸ್ವಾಗತವನ್ನು ನಿರ್ಮಲ ಮಂಜುನಾಥ್ ಹಾಗೂ ವಂದನಾರ್ಪಣೆಯನ್ನು ಸತೀಶ್ ಅವರು ನೆರವೇರಿಸಿದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ವರದಿ : ಕೋಡಿಹಳ್ಳಿ ಟಿ. ಶಿವಮೂರ್ತಿ
About The Author
Discover more from JANADHWANI NEWS
Subscribe to get the latest posts sent to your email.