ಸುಗ್ಗಿ ಕಾಲದಲ್ಲಿ ಬಹುತೇಕ ರೈತರು ರಸ್ತೆಗಳಲ್ಲೇ ಒಕ್ಕಲು ಮಾಡುವ ದೃಶ್ಯಗಳು ಸಾಮಾನ್ಯವಾಗಿರುತ್ತವೆ.
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪದ ಮುಸ್ಟೂರು ರಸ್ತೆಯಲ್ಲಿ ರೈತರು ಹುರುಳಿ ಬಳಿ ರಸ್ತೆಗೆ ಹಾಕಿ ಒಕ್ಕಲು ಮಾಡುತ್ತಿದ್ದರು. ಚಳ್ಳಕೆರೆ ಕಡೆಯಿಂದ ಜಗಳೂರು ಕಡೆಗೆ ಸಂಚರಿಸುತ್ತಿದ್ದ ಸಿಮೆಂಟ್ ತುಂಬಿದ ಆಂಧ್ರ ಪ್ರದೇಶ ನೊಂದಣಿಯ ಲಾರಿಯೊಂದರ ಸೈಲನ್ಸರ್ ಗೆ ಹುರುಳಿ ಬಳಿ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿದಿದೆ.





ಬೆಂಕಿ ತಗುಲಿದ ತಕ್ಷಣ ಇಡೀ ಲಾರಿ ಸಂಪೂರ್ಣ ಧಗಧಗಿಸಿದೆ. ಜತೆಗೆ ಸ್ಥಳದಲ್ಲಿದ್ದ ಹುಲ್ಲು ಹಾಗೂ ಕಾಳು ಕೂಡಾ ಬೆಂಕಿಗಾಹುತಿಯಾಗಿದೆ. ಶೀಘ್ರದಲ್ಲೇ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು & ಪೋಲೀಸ್ ಹೈವೇ ಪೆಟ್ರೋಲ್ ಅಧಿಕಾರಿಗಳು ವಾಹನಗಳನ್ನು ನಿಲ್ಲಿಸಲು ಪ್ರಯತ್ನಿದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ.
ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುರುಳಿ,ರಾಗಿ, ತೊಗರಿ, ನವಣೆ ಸೇರಿದಂತೆ ಅನೇಕ ಧಾನ್ಯಗಳನ್ನು ಹಿಂದೆ ಜಮೀನು ಅಥವಾ ಊರಿನ ಪಕ್ಕದಲ್ಲಿ ಕಣ ಮಾಡಿ ಹುಲ್ಲಿನಿಂದ ಬೇರ್ಪಡಿಸಿ ಕಾಳು ಮನೆಗೆ ತರಲಾಗುತ್ತಿತ್ತು. ಆದರೆ, ಈಗ ಎಲ್ಲವೂ ರಸ್ತೆಯಲ್ಲೇ ಆಗುತ್ತಿರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ರಸ್ತೆಯಲ್ಲಿ ವಾಹನಗಳ ಕೆಳಗೆ ಹುಲ್ಲು ನುರಿಸುವುದರಿಂದ ಕಾಳು ಮಲಿನವಾಗುವುದು ಒಂದು ಕಡೆಯಾದರೆ, ಇದರಿಂದ ವಾಹನಗಳಿಗೆ ತೊಂದರೆಯೂ ಇದೆ. ಈ ಬಗ್ಗೆ ರೈತರು ಎಚ್ಚೆತ್ತು ಕೊಳ್ಳಬೇಕಿದೆ. ಈ ಬಗ್ಗೆ ಜಿಲ್ಲಾ ಆರಕ್ಷಕರು ಪ್ರತಿ ನಿತ್ಯ ಗಸ್ತು ತಂಡ ಕಳುಹಿಸಿ ಕ್ರಮ ಕೈಗೊಳ್ಳಬೇಕಿದೆ.
About The Author
Discover more from JANADHWANI NEWS
Subscribe to get the latest posts sent to your email.