January 29, 2026
IMG-20250120-WA0175.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ಎಂಡಿಸಿಸಿ ಬ್ಯಾಂಕಿನಿಂದ ನಮ್ಮ ಕಳೆದ ಐದು ವರ್ಷದ ಆಡಳಿತದ ಅವಧಿಯಲ್ಲಿ 1,700 ಕೋಟಿ ರೂ ಸಾಲವನ್ನು ರೈತರಿಗೆ ನೀಡಲಾಗಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ಅವರು ಸಾಲಿಗ್ರಾಮ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ 45,000 ರೈತರಿಗೆ ಸಾಲವನ್ನು ನೀಡಲಾಗಿತ್ತು ಆದರೆ ನಮ್ಮ ಅವಧಿಯಲ್ಲಿ ಒಂದುವರೆ ಲಕ್ಷ ರೈತರುಗಳಿಗೆ ಸಾಲವನ್ನು ನೀಡಲಾಗಿದೆ.

ಎಂಡಿಸಿಸಿ ಬ್ಯಾಂಕಿನಲ್ಲಿ ಕಳೆದ 60 ವರ್ಷಗಳಲ್ಲಿ 370 ಕೋಟಿ ರೂ ಡೆಪಾಸಿಟ್ ಇತ್ತು ನಮ್ಮ ಆಡಳಿತದ ಐದು ವರ್ಷಗಳ ಅವಧಿಯಲ್ಲಿ ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ ಎಂದರು.

ಕಳೆದ 60 ವರ್ಷಗಳ ಇತಿಹಾಸದಲ್ಲಿ 275 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 50 ಲಕ್ಷ ರೂ ಅನುದಾನವನ್ನು ಸಂಘಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಲು ಅನುದಾನವನ್ನು ನೀಡಲಾಗಿತ್ತು. ಆದರೆ ನಮ್ಮ ಎರಡು ವರ್ಷದ ಅವಧಿಯಲ್ಲಿ ಅಪೇಕ್ಸ್ ಬ್ಯಾಂಕಿನಿಂದ ಕಟ್ಟಡಗಳ ನಿರ್ಮಾಣ ನಿಧಿಗೆ ಅನುದಾನವನ್ನು ನೀಡಬೇಕೆಂದು ಹೋರಾಟ ಮಾಡಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸಹಕಾರ ಸಂಘಗಳಿಗೆ ಆರು ಕೋಟಿ ರೂ ಅನುದಾನವನ್ನು ಕೊಡಿಸಲಾಗಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಇಷ್ಟೊಂದು ಸರ್ಕಾರದ ಹಸ್ತಕ್ಷೇಪವನ್ನು ನಾವು ನೋಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಎಂಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಚುನಾವಣೆ ನಡೆಸಿಲ್ಲ ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ನಮ್ಮ ಅವಧಿಯಲ್ಲಿ ಯಾವುದೇ ರಾಜಕಾರಣವನ್ನು ಮಾಡದೆ ಉತ್ತಮವಾಗಿ ಆಡಳಿತ ಮಾಡಿಕೊಂಡು ಬರುವ ಮೂಲಕ ರೈತ ಪರವಾದ ಕೆಲಸವನ್ನು ಮಾಡಿದ್ದೇವೆ ಎಂದರು.

ತಂಬಾಕು ಬೆಳೆಗಾರರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ರೈತರುಗಳ ನಿಯೋಗದೊಂದಿಗೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಪೀಯೂಸ್ ಗೋಯಿಲ್ ಅವರುಗಳನ್ನು ಭೇಟಿ ಮಾಡಿ ರೈತರುಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವರಲ್ಲಿ ಮನವಿ ಮಾಡಿದ ಫಲವಾಗಿ ಇಂದು ತಂಬಾಕು ಬೆಳೆಗೆ ಉತ್ತಮ ಬೆಲೆ ದೊರಕಿದೆ ಎಂದರು.

ಶಾಸಕ ಡಿ.ರವಿಶಂಕರ್ ಅವರು ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳಲ್ಲಿರುವ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗದವರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಸಂಘದ ರೈತ ಸದಸ್ಯರುಗಳಿಗೆ ಸಂಘದಿಂದ ಹಾಗೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಸಂಘದ ಅಭಿವೃದ್ಧಿಗೆ ಎಲ್ಲಾ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ವಿ. ದೇವರಹಟ್ಟಿ, ಮೈಮುಲ್ ನಿರ್ದೇಶಕ
ಎ.ಟಿ.ಸೋಮಶೇಖರ್, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರತಾಪ್, ಮೇಲ್ವಿಚಾರಕ ದಿನೇಶ್, ಸಂಘದ ಅಧ್ಯಕ್ಷ ಬಿ.ಎಸ್.ಲೋಕೇಶ್, ಉಪಾಧ್ಯಕ್ಷ ದೇವರಾಜ್, ನಿರ್ದೇಶಕರುಗಳಾದ ರಾಮೇಗೌಡ, ಕಲ್ಪನಾಸುರೇಶ್, ಭಾರತಿ ಹುಚ್ಚೇಗೌಡ, ಎಲ್.ಸಿ.ರಾಮೇಗೌಡ, ಮಂಜುನಾಥ, ಸರಸ್ವತಿಈಶ್ವರ, ಸ್ವಾಮಿಶೆಟ್ಟಿ, ರಾಜನಾಯಕ, ಸಿ.ಎಂ.ಗೋಪಾಲ್, ಲಕ್ಷ್ಮಮ್ಮ ಶ್ರೀನಿವಾಸ, ಸಿಇಓ ಹರೀಶ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading