ಹಿರಿಯೂರು :
ಬಯಲು ಸೀಮೆಯ ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ನೀರನ್ನು ಹರಿಸಿ ಮೂರನೇ ಬಾರಿಗೆ 130 ಅಡಿ ನೀರು ಸಂಗ್ರಹವಾಗಿ ಕೋಡಿಬೀಳಲು ಕಾರಣರಾದ ಸಚಿವ ಟಿ. ಸುಧಾಕರ್ ಅವರಿಗೆ ಛಲವಾದಿ ಮಹಾಸಭಾ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸಚಿವ ಡಿ.ಸುಧಾಕರ್ ಮಾತನಾಡಿ, ವಿವಿಸಾಗರ ಜಲಾಶಯ ಕೋಡಿ ಬಿದ್ದಿರುವುದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ, ರೈತರ ಬದುಕು ಅಸನಾಗಲು ಶ್ರಮಿಸಲಾಗುವುದು, ಜನರ ನೀರಿನ ಬವಣೆ ತೀರಿದರೆ ಅದೇ ಸಾರ್ಥಕ ಎಂದರಲ್ಲದೆ,
ಛಲವಾದಿ ಸಮುದಾಯವು ಇತ್ತೀಚಿಗೆ ವಿದ್ಯಾವಂತ ಸಮುದಾಯವಾಗಿ ಪರಿವರ್ತನೆ ಆಗುತ್ತಿರುವುದು ಸಂತಸದ ವಿಚಾರವಾಗಿದೆ, ಈ ಸಮುದಾಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಂಚ ಯೋಜನೆಗಳ ಜಿಲ್ಲಾ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ತಾಲೂಕು ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಖಾದಿ ಹೇಮಂತ್, ಪ್ರಧಾನ ಕಾರ್ಯದರ್ಶಿ ಆರ್ ಟಿ ಎಸ್ ಶ್ರೀನಿವಾಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಆರ್. ಅನಂತ, ಎಂ ಡಿ ಕೋಟೆ ಕೃಷ್ಣಮೂರ್ತಿ, ಗೌರವಾಧ್ಯಕ್ಷ ಬಿಂಬೋದರ, ಸಹ ಕಾರ್ಯದರ್ಶಿ ಎಂ.ಎಸ್.ರಮೇಶ್, ಖಜಾಂಚಿ ಕುಮಾರಸ್ವಾಮಿ, ಮಹಾಲಿಂಗರಾಜು, ರಾಜಶೇಖರ್, ನಿರ್ದೇಶಕರುಗಳಾದ ಪ್ರವೀಣ್, ಮಲ್ಲೇಶ್, ಜಿ.ಎಸ್.ಪ್ರೇಮ್ ಕುಮಾರ್, ಸಿದ್ದೇಶ್ ಕುಮಾರ್ ನರಸಿಂಹಮೂರ್ತಿ, ಲಕ್ಷ್ಮಿಪತಿ, ಪಾರ್ವತಮ್ಮ, ಮಂಜುನಾಥ್, ರಾಜಣ್ಣ, ಚೇತನ್ ನಿರಂಜನ್ ಮೂರ್ತಿ ಇತರರು ಉಪಸ್ಥಿತರಿದ್ದರು


About The Author
Discover more from JANADHWANI NEWS
Subscribe to get the latest posts sent to your email.